This is the title of the web page
This is the title of the web page

Please assign a menu to the primary menu location under menu

Local News

ಅಗ್ನಿಪಥ್ ವಿರುದ್ಧ ಅಥಣಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ


ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಯುವಕರು ಪ್ರತಿಭಟನೆ ನಡೆಸಿದರು.

ಚಿಕ್ಕೋಡಿ ಪಟ್ಟಣದ ನಾಗರಮುನ್ನೋಳಿ ಬ್ಲಾಕ್ ‌ಕಾಂಗ್ರೆಸ್ ಕಚೇರಿಯಿಂದ ಪ್ರಾರಂಭವಾದ ಪ್ರತಿಭಟನೆಯು ಬಸವ ವೃತ್ತದ ಮೂಲಕ ಸಾಗಿತು. ಪ್ರತಿಭಟನೆ ಉದ್ದಕೂ ಕಾಂಗ್ರೆಸ್ ಕಾರ್ಯಕರ್ತರು, ಯುವಕರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರವನ್ನು ಕೂಗುತ್ತಾ ತಮ್ಮ ಆಕ್ರೋಶವನ್ನು ಹೊರಹಾಕಿದರು. ನಂತರ ಉಪವಿಭಾಗಧಿಕಾರಿ ಸಂತೋಷ ಕಾಮಗೌಡರ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಿ ಅಗ್ನಿಪಥ ‌ಯೋಜನೆಯನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು.

ಇದೇ ಸಂಧರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೇ ಅವರು ಮಾತನಾಡಿ ಈ ಅಗ್ನಿಪಥ ‌ಯೋಜನೆಯು ಯುವಕರ ದಿಕ್ಕು ತಪ್ಪಿಸುವ ಯೋಜನೆಯಾಗಿದೆ. ಗುತ್ತಿಗೆ‌ ಆಧಾರದ ರೀತಿಯ ಯೋಜನೆ ಇದಾಗಿದೆ. ಇದರಿಂದ ಯುವಕರ ಭವಿಷ್ಯ‌ ನಿರ್ಮಾಣವಾಗುವುದಿಲ್ಲ ಕೂಡಲೇ ಕೇಂದ್ರ ಸರ್ಕಾರ ಈ ಯೋಜನೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಲಕ್ಷ್ಮಣರಾವ ಚಿಂಗಳೆ ಆಗ್ರಹಿಸಿದರು.

ನಂತರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ‌ಮೊಹಿತೆ ಮಾತನಾಡಿ ಅಗ್ನಿಪಥ ಯೋಜನೆಯನ್ನು ವಿರೋಧಿಸಿ ಯುವಕರು ರೊಚ್ಚಿಗೆದ್ದಿದಾರೆ. ಯುವಕರು ಪ್ರತಿಭಟನೆ ಮಾಡುವ ಸಂಧರ್ಭದಲ್ಲಿ ಪೊಲೀಸರ ಮೂಲಕ ಸರ್ಕಾರ ಯುವಕರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಮುಂಬರುವ ದಿನಗಳಲ್ಲಿ ಯುವಕರು ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಈ ಸಂಧರ್ಭದಲ್ಲಿ ನಾಗರಮುನ್ನೋಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರಗೌಡ ಪಾಟೀಲ, ಅಶೋಕ ಮಜಲಟ್ಟಿ, ರಾಜಕುಮಾರ ಕೋಟಗಿ, ಅರುಣ ನರಗುಂದೆ, ಬಾಬು ಪಾಟೀಲ, ಮಂಜುನಾಥ ಗೇವಾರಿ, ಕೃಷ್ಣಾ ಜುಗುಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Gadi Kannadiga

Leave a Reply