This is the title of the web page
This is the title of the web page

Please assign a menu to the primary menu location under menu

Local News

ಕರ್ನಾಟಕದಿಂದ ಕಾಂಗ್ರೆಸ್ಸಿಗೆ ಮತ್ತೊಮ್ಮೆ ಶಕ್ತಿವರ್ಧನೆ ಆಗಲಿದೆ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್


ಬೆಳಗಾವಿ: ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೆಳಗಾವಿ ಗ್ರಾಮೀಣ ಭಾಗದ ಶಾಸಕಿಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರಶಕ್ತ ರಾಜಕೀಯ ವಿದ್ಯಮಾನಗಳ ಕುರಿತು ಮಾತನಾಡಿದರು

ಇನ್ನು ಬರುವ 8 ತಿಂಗಳಲ್ಲಿ ಚುನಾವಣೆ ಬರಲಿದ್ದು, ಎಲ್ಲಾ ಪಕ್ಷಗಳಂತೆ ನಮ್ಮ ಪಕ್ಷವೂ ಕೂಡಾ ಸಂಘಟನೆಯತ್ತ ಸಾಗುತ್ತಿದೆ,, ಜನರಿಗೆ ತಿಳುವಳಿಕೆ ಹೇಳಿ ಜನರನ್ನ ನಮ್ಮ ಕಡೆ ಒಲಿಸಿಕೊಳ್ಳುವಂತ ಆತ್ಮವಿಶ್ವಾಸ ನಮ್ಮಲ್ಲಿದೆ ಎಂದರು.

ಇಡೀ ದೇಶದಲ್ಲಿ ಇವತ್ತು ಕಾಂಗ್ರೆಸ್ಸಿಗೆ ಕೆಟ್ಟದ ದಿನಗಳಿವೆ, ಹಿಂದೆ ಇಂದಿರಾಗಾಂಧಿ ಅವರು ಮತ್ತೆ ಕಾಂಗ್ರೆಸ್ ಪಕ್ಷ ಕಷ್ಟದಲ್ಲಿದ್ದಾಗ ಕೈ ಹಿಡಿದು ಅವರಿಗೆ ಶಕ್ತಿ ತಂದುಕೊಟ್ಟಿದ್ದು ಇದೆ ನಮ್ಮ ಕರ್ನಾಟಕ.

ಅದೇರೀತಿ ಬಳ್ಳಾರಿಯಿಂದ ಸೋನಿಯಾ ಗಾಂಧಿಯವರನ್ನು ಜಯ ಒದಗಿತು, ಈಗ ನಮ್ಮ ಆಸೆ ಏನಂದರೆ ಮತ್ತೊಮ್ಮೆ ಕರ್ನಾಟಕದಿಂದ ಕಾಂಗ್ರೆಸ್ ಪುಟಿದೆಳಬೇಕು, ಅದರ ಮುಕೇನ ನಾವು ಸರ್ಕಾರ ರಚನೆ ಮಾಡಬೇಕು ಎಂದರು.

ಸವದತ್ತಿ ಕ್ಷೇತ್ರ ಯಾವತ್ತೂ ಕಾಂಗ್ರೆಸ್ ಕ್ಷೇತ್ರ, ಅಲ್ಲಿ ಗೆಲ್ಲಬೇಕು ಎನ್ನುವದು ನಮ್ಮ ಗುರಿ, ಪಕ್ಷವನ್ನು ಗೆಲ್ಲಿಸಬೇಕೆಂದು ನಮ್ಮ ಕಾರ್ಯಾಧ್ಯಕ್ಷರು ತಳಮಟ್ಟದಿಂದ ಪಕ್ಷವನ್ನು ಸಂಘಟಿಸುತ್ತಿದ್ದಾರೆ.. ಅವರು ಅಲ್ಲಿಂದ ಸ್ಪರ್ಧೆ ಮಾಡುವ ವಿಚಾರ ನನಗೆ ತಿಳಿಯದು ಎಂದರು

ಇನ್ನು ನೂಪುರ್ ಶರ್ಮ ಬಗ್ಗೆ ಮಾತನಾಡಿದ ಅವರು, ನೂಪುರ್ ಶರ್ಮ ತಪ್ಪು ಮಾತನಾಡಿದ್ದಾರೆ, ಆದರೆ ಅದರ ವಿರೋಧವಾಗಿ ದುಷ್ಕರ್ಮಿಗಳು ಒಬ್ಬ ಟೇಲರ್ ಅನ್ನು ಕೊಲೆ ಮಾಡಿದ್ದನ್ನು ನಾನು ಕಠೋರವಾಗಿ ಖಂಡಿಸುತ್ತೇನೆ ಎಂದರು


Gadi Kannadiga

Leave a Reply