This is the title of the web page
This is the title of the web page

Please assign a menu to the primary menu location under menu

Local News

ಪ್ರಕಾಶ ಹುಕ್ಕೇರಿ ಗೆಲುವು ಅಥಣಿಯಲ್ಲಿ ಕಾಂಗ್ರೇಸ್ ವಿಜಯೋತ್ಸವ


ಅಥಣಿ:ವಾಯುವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ಅಥಣಿಯಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು, ಅವರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಸೇರಿ ಪಟ್ಟಣದ ಅಂಬೇಢ್ಕರ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.

ತಮ್ಮ ನೆಚ್ಚಿನ ನಾಯಕನ ಗೆಲುವು ಖಚಿತ ಆಗುತ್ತಿದ್ದಂತೆ ಅಥಣಿಯಲ್ಲಿ ಡಾ ಬಿ ಆರ್ ಅಂಬೇಡ್ಕರ್ ಮೂರ್ತಿಗೆ ಹೂವಿನ‌ ಹಾರಹಾಕಿ, ಪಟಾಕಿ ಸಿಡಿಸಿ, ಸಿಹಿ ತಿನಿಸಿ ವಿಜಯೋತ್ಸವ ಆಚರಿಸಿ, ಪ್ರಕಾಶ ಹುಕ್ಕೇರಿ ಪರ ಘೋಷಣೆ ಕೂಗಿ ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಮುಖಂಡ ಗಜಾನನ ಮಂಗಸೂಳಿ ತೀವ್ರ ಕುತೂಹಲ ಮೂಡಿಸಿದ್ದ ವಾಯುವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕೈ ಅಭ್ಯರ್ಥಿ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಗೆಲುವಿನ ನಗೆ ಬೀರಿದ್ದಾರೆ, ಪ್ರಜ್ಞಾವಂತ ಮತದಾರರು ನಮ್ಮ ಕೈ ಹಿಡಿದಿದ್ದಾರೆ ಈ ಗೆಲುವು 2023 ರ ಚುನಾವಣೆಯ ದಿಕ್ಸೂಚಿಯಾಗಿದೆವೆಂದರು

ಚುನಾವಣೆಗಿಂತ ಮೊದಲು ಬಹಳಷ್ಟು ಜನ‌ ಮುದಿಎತ್ತು ಎಂದು ಮೂದಲಿಸುತ್ತಿದ್ದರು ಅವರು ಮುದಿಎತ್ತು ಅಲ್ಲ ಕಾರಹುಣ್ಣಿಮೆ ಎತ್ತು ಎಂದು ಟಾಂಗ್ ನೀಡಿದರು.

ಅನಂತರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸಿದ್ದಾರ್ಥ ಸಿಂಗೆ ಮಾತನಾಡಿದರು. ಈ ವೇಳೆ ಬಸವರಾಜ ಬುಟಾಳಿ, ರಾವಸಾಬ ಐಹೊಳೆ, ಸೈಯದಅಮೀನ ಗದ್ಯಾಳ, ಬಸವರಾಜ ದಮಳ, ಶಂಕರ ಮಗದುಮ್, ಸಂಜಯ ಕಾಂಬಳೆ, ರಾಜು ಹಳ್ಳದಮಳ, ಕುಮಾರ ಬಿಳ್ಳೂರ, ರಿಯಾಜ ಸನದಿ,ಹಣಮಂತ ಬಜಂತ್ರಿ, ರವಿ ಬಕಾರಿ, ರಮೇಶ ಪವಾರ, ಶಿವಾನಂದ ಸೌದಾಗರ, ವಿಲೀನರಾಜ ಯಳಮಲ್ಲೆ, ಬೀರಪ್ಪ ಯಕ್ಕಂಚಿ ಸೇರಿದಂತೆ‌ ಅನೇಕರು ಪಾಲ್ಗೊಂಡಿದ್ದರು.


Gadi Kannadiga

Leave a Reply