ಧಾರವಾಡ: ಧಾರವಾಡ ನಗರದಲ್ಲಿ ಇಂದು ಪತ್ರಕರ್ತರಿಂದ ಸಂವಿಧಾನ ದಿನಾಚರಣೆ ಆಚರಿಸಲಾಯಿತು. ಭಾರತ ಸಂವಿಧಾನದ ಪಿತಾಮಹ ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿಗೆ ಪತ್ರಕರ್ತ ರಾಜು ಕಾಂಬಳೆ ಅವರು ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತ ಪ್ರಕಾಶ ಕಾಂಬಳೆ, ಅಶೋಕ ರಾಠೋಡ, ಪತ್ರಕರ್ತ ರಾಜಪ್ಪ ಮಾದರ, ಶಿವರಾಜ ಕಾಂಬಳೆ, ಸಚಿನ ಪಾಟೀಲ, ಮುಂತಾದವರು ಹಾಜರಿದ್ದರು. ನಂತರ ಸಿಹಿ ಹಂಚಲಾಯಿತು.