This is the title of the web page
This is the title of the web page

Please assign a menu to the primary menu location under menu

Local News

ಆರ್ಥಿಕ ನೀತಿಗಳಿಗೆ ಸಂವಿಧಾನವು ಅಡಿಪಾಯವನ್ನು ಒದಗಿಸುತ್ತದೆ: ಪ್ರೋ.ಬಿ.ಕೆ.ತುಳಸಿಮಾಲಾ


ಬೆಳಗಾವಿ:- ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಕುವೆಂಪು ಸಭಾಂಗಣದಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಜುಲೈ ೧೩ ರಂದು ಏರ್ಪಡಿಸಲಾದ “ಸ್ವಾಂತತ್ರೊö್ಯÃತ್ತರ ಅವಧಿಯಲ್ಲಿ ಭಾರತೀಯ ಆರ್ಥಿಕತೆ : ಕಾರ್ಯಕ್ಷಮೆತೆ, ನೀತಿಗಳು ಮತ್ತು ಸಾಧ್ಯತೆಗಳು” ಎಂಬ ವಿಷಯದ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿದ ಪ್ರೊ. ಬಿ. ಕೆ. ತುಳಸಿಮಾಲಾ, ಕುಲಪತಿಗಳು, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಇವರು ‘ಆರ್ಥಿಕ ನೀತಿಗಳನ್ನು ರೂಪಿಸಲು ಸಂವಿಧಾನವು ಅಡಿಪಾಯವನ್ನು ಒದಗಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.
ಆರ್ಥಿಕ ನೀತಿಗಳು ಸಮಾಜವಾದ ಮತ್ತು ಸಮಾನತೆಯ ಸಂವಿಧಾನದ ಮೂಲ ತತ್ವಗಳಿಂದ ಹೆಚ್ಚು ವಿಚಲನಗೊಳ್ಳಬಾರದು, ಎಲ್ಲರನ್ನೊಳಗೊಳ್ಳುವ ಬೆಳವಣೆಗೆ, ಪ್ರಾದೇಶಿಕ ಸಮತೋಲನ, ಬಡತನ ನಿರ್ಮೂಲನೆ, ಆರೋಗ್ಯ ಮತ್ತು ಶಿಕ್ಷಣನೀತಿಗಳು ಆದ್ಯತೆಗಳಾಗಿರಬೇಕೆಂದು ಎಂದು ಇನ್ನೂರ್ವ ಅತಿಥಿಗಳಾದ ಪ್ರೋ.ಪಿ.ಎಸ್.ಕಾಂಬಳೆ, ಪ್ರಾಧ್ಯಾಪಕರು, ಶಿವಾಜಿ ವಿಶ್ವವಿದ್ಯಾಲಯ, ಕೊಲ್ಹಾಪೂರ, ಇವರು ತಿಳಿಸಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಬಸವರಾಜ ಪದ್ಮಶಾಲಿ, ಕುಲಸಚಿವ (ಮೌಲ್ಯಮಾಪನ) ಪ್ರೊ. ಶಿವಾನಂದ ಗೋರನಾಳೆ, ಹಣಕಾಸು ಅಧಿಕಾರಿಗಳು ಹಾಗೂ ಸಮ್ಮೇಳನದ ಸಂಘಟನಾ ಅಧ್ಯಕ್ಷರಾದ ಪ್ರೊ. ಡಿ.ಎನ್. ಪಾಟೀಲ, ಸಂಘಟನಾ ಕಾರ್ಯದರ್ಶಿಯಾದ ಡಾ. ಕಿರಣ ಕುಮಾರ ಪಿ., ಡಾ ಸಚೀಂದ್ರ ಜಿ.ಆರ್, ಜಂಟಿ ಸಂಘಟನಾ ಕಾರ್ಯದರ್ಶಿ, ಪ್ರೊ. ಎಚ್. ವಾಯ್. ಕಾಂಬಳೆ, ಪ್ರೊ ಚಂದ್ರಿಕಾ ಕೆ. ಬಿ., ಪ್ರೊ. ಬಿ. ಎಸ್. ನಾವಿ ಹಾಗೂ ಬೋಧಕ/ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಡಾ. ಕಿರಣ್ ಕುಮಾರ ಪಿ. ಸ್ವಾಗತಿಸಿದರು, ಪ್ರೊ.ಡಿ.ಎನ್. ಪಾಟೀಲ ಸಮ್ಮೇಳನದ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ಡಾ. ಸಚೀಂದ್ರ ಜಿ.ಆರ್. ವಂದಿಸಿದರು. ಡಾ. ಪ್ರಸನ್ನ ಜೋಶಿ ನಿರೂಪಿಸಿದರು. ಶಿಕ್ಷಕ ಪ್ರತಿನಿಧಿಗಳು, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ ೧೫೦ಕ್ಕೂ ಹೆಚ್ಚಿನ ಸಂಶೋಧನಾ ಲೇಖನಗಳನ್ನು ಮಂಡಿಸಲಾಗುವುದು.

 


Gadi Kannadiga

Leave a Reply