This is the title of the web page
This is the title of the web page

Please assign a menu to the primary menu location under menu

Local News

ಕಟ್ಟಡ ಕಾರ್ಮಿಕರು ಸಮಾಜದ ಮುಖ್ಯ ವಾಹಿ£ಗೆ ಬರಬೇಕು : ರಾಹುಲ್ ಜಾರಕಿಹೊಳಿ


ಯಮಕನಮರಡಿ: ದೇಶದ ಪ್ರಗತಿಯಲ್ಲಿ ಕಟ್ಟಡ ಕಾರ್ಮಿಕರ ಪಾತ್ರವು ಬಹುಮುಖ್ಯವಾಗಿದ್ದು, ಕಟ್ಟಡ ಕಾರ್ಮಿಕರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಯುವ ನಾಯಕ ರಾಹುಲ ಜಾರಕಿಹೊಳಿ ಹೇಳಿದರು.
ಅವರು ಸಮೀಪದ ರುಸ್ತುಂಪೂರ ಗ್ರಾಮದಲ್ಲಿ ಕಟ್ಟಡ ಕಾರ್ಮಿಕರ ೩೩ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಸೌಲಭ್ಯಗಳಿಂದ ವಂಚಿತಗೊಂಡಿರುವ ಕಟ್ಟಡ ಕಾರ್ಮಿಕರನ್ನು ಗುರುತಿಸಿ ಸಂಘದ ಸದಸ್ಯತ್ವ ಮಾಡಿ ಸರ್ಕಾರದ ಸೌಲಭ್ಯಗಳು ಸಿಗುವಂತೆ ಮಾಡಬೇಕೆಂದು ಹೇಳಿದರು.
ಹುಕ್ಕೇರಿ ತಾಲೂಕಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಭೀಮಸಿ ಗೂರಖನಾಥನವರ ಮಾತನಾಡಿ ಹುಕ್ಕೇರಿ ತಾಲೂಕಿನ ೩೨ ಗ್ರಾಮಗಳಲ್ಲಿ ಕಟ್ಟಡ ಕಾರ್ಮಿಕರ ಸಂಘಗಳನ್ನು ಆರಂಭಿಸಲಾಗಿದ್ದು, ಕಟ್ಟಡ ಕಾರ್ಮಿಕರ ಅಪಾಯದ ಅಂಚಿನಲ್ಲಿರುತ್ತಾರೆ ಅವರೊಂದಿಗೆ ದುರಂತ ಸಂಭವಿಸಿದರೆ ಅವರ ಕುಟುಂಬದ ಪರಿಸ್ಥಿತಿಯು ಶೋಚ£Ãಯವಾಗಿರುತ್ತದೆ. ಈ £ಟ್ಟಿನಲ್ಲಿ ಸಂಘದ ಸದಸ್ಯತ್ವ ಮಾಡಿ ಸರ್ಕಾರ ಕೊಡುವ ಸಹಾಯ ಸೌಲಭ್ಯಗಳನ್ನು ಒದಗಿಸಿಕೊಡಲು ಸಂಘಟನೆ ಮೂಲಕ ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಮಂಜುನಾಥ ಪಾಟೀಲ, ಪಾಶ್ಚಾಪೂರ ಗ್ರಾ.ಪಂ. ಮಾಜಿ ಅಧ್ಯಕ್ಷ ಅಬ್ದುಲಗಣಿ ದರ್ಗಾ, ಭೀಮರಾಯಿ ಲಂಕೆನ್ನವರ, ರಫೀಕ ನಧಾಪ, ರಸ್ತುಂಪೂರ ಶಾಖೆಯ ಸಂಸ್ಥಾಪಕ ಭೀಮಶಿ ಬಸವಣ್ಣಿ ಲಂಕೆನ್ನವರ, ಅಧ್ಯಕ್ಷ ರಾಜು ಶಿವಾಜಿ ಬೈಲೂರಕರ, ಗೌರವಾಧ್ಯಕ್ಷ ಬಸವರಾಜ ಬಡುವಗೋಳ, ಕಾರ್ಯದರ್ಶಿ ಭೀಮಶಿ ಬಡುವಗೋಳ, ಸಹಕಾರ್ಯದರ್ಶಿ ಪರಶುರಾಮ ನಾಯಿಕ, ಕಾರ್ಯಾಧ್ಯಕ್ಷ ಸತ್ತೆಪ್ಪ ಲಂಕೆನ್ನವರ ಉಪಾಧ್ಯಕ್ಷ ಕಮಲೇಶ ಲಂಕೆನ್ನವರ, ಸದಸ್ಯ ರಾಮಚಂದ್ರ ಕೋಳಂದ್ರಿ, ಹಾಗೂ ಸಂಘದ ಸದಸ್ಯರು ಗ್ರಾಮರಸ್ಥರು ಇದ್ದರು.


Leave a Reply