ಬೆಳಗಾವಿ :- ಗ್ರಾಹಕ ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಸರ್ಕಾರ, ನ್ಯಾಯಾಂಗವಿದೆ. ಇದರ ಮುಖ್ಯ ಕಾರ್ಯ ಗ್ರಾಹಕರ ಹತ್ತಿರ ಮಾರಾಟಗಾರರು ನ್ಯಾಯಯುತ ಕಾರ್ಯ ನಿರ್ವಹಿಸುವುದು ಆಗಿದೆ. ಮಾರಾಟಗಾರರು ಗ್ರಾಹಕರಿಗೆ ಕಿರುಕುಳ ನೀಡಿದರೆ ಅಥವಾ ಶೋಷಿಸಿದಲ್ಲಿ ಮಾರಾಟಗಾರರ ವಿರುದ್ಧ ಮೊಕದ್ದಮೆಯನ್ನು ಹೂಡಬಹುದಾಗಿದೆ. ಶೋಷಣೆ ಪುರಾವೆ, ಬಿಲ್ಲು, ಇತರ ದಾಖಲೆಗಳಿರುವುದು ಅತ್ಯವಶ್ಯ. ಗ್ರಾಹಕ ಏನೇ ವಸ್ತು ಕೊಂಡುಕೊಂಡರೂ ತಪ್ಪದೇ ಬಿಲ್‌ನ್ನು ಪಡೆಯಬೇಕು. ಮಾರಾಟಗಾರರ ಡಬಲ್ ಮಾಡುವುದು, ಒಂದಕ್ಕೊಂದು ಉಚಿತ, ಚೈನ್ ವ್ಯವಹಾರ ಹೀಗೆ ಮುಂತಾದ ಆಮಿಷಕ್ಕೆ ಗ್ರಾಹಕ ಒಳಗಾಗಬಾರದೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಶೈಲ ಕಂಕಣವಾಡಿಯವರು ಇಂದಿಲ್ಲಿ ಹೇಳಿದರು.
ಬೆಳಗಾವಿ ಗ್ರಾಹಕ ರಕ್ಷಣಾ ಮತ್ತು ಮಾರ್ಗದರ್ಶನ ಕೇಂದ್ರ(ರಿ) ಮತ್ತು ಟೆಲಿಕಾಂ ರೆಗ್ಯುಲೇಟರಿ ಅಥಾರಟಿ ಆಫ್ ಇಂಡಿಯಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಇದೇ ದಿ. ೨೨ ದಂದು ಬೆಳಗಾವಿ ಬಿ.ಎಸ್.ಎನ್.ಎಲ್ ಆಫೀಸ್ ಹತ್ತಿರವಿರುವ ಬಿ. ಕೆ. ಮಾಡೆಲ್ ಹೈಸ್ಕೂಲ್ ಸಭಾ ಭವನದಲ್ಲಿ ಗ್ರಾಹಕರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಕಾರ್ಯಕ್ರಮವನ್ನು ಉದ್ಘಾಟಿಸಿದ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀಶೈಲ ಕಂಕಣವಾಡಿಯವರು ಮೇಲಿನಂತೆ ಹೇಳಿ ಗ್ರಾಹಕರು ತಮ್ಮ ಸಮಸ್ಯೆಗಳಿಗೆ ಗ್ರಾಹಕರ ವೇದಿಕೆಯಿಂದ ಪರಿಹಾರ ಪಡೆಯಬಹುದೆಂಬುದನ್ನು ಸವಿಸ್ತಾರವಾಗಿ ಹೇಳಿದರು.
ಗ್ರಾಹಕ ಶಕ್ತಿ ಸಂಸ್ಥೆಯ ಸಂಸ್ಥಾಪಕ ಸೋಮಸೇಖರ ವಿ. ಕೆ. ಅವರು ಮಾತನಾಡುತ್ತ ಗ್ರಾಹಕರ ಜಾಗೃತಿಯನ್ನು ಹೆಚ್ಚಿಸಲು ರಾಷ್ಟಿö್ರÃಯ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಗ್ರಾಹಕ ರಕ್ಷಣಾ ಮಂಡಳಿಗಳನ್ನು ಸ್ಥಾಪಿಸಲಾಗಿದೆ. ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಗಳಲ್ಲಿ ಪ್ರಕರಣಗಳನ್ನು ಹೇಗೆ ಸಲ್ಲಿಸಬೇಕು ಎಂಬುದರ ಕುರಿತು ಅವರು ಗ್ರಾಹಕರಿಗೆ ಮಾರ್ಗದರ್ಶನ ನೀಡಿ ತಮ್ಮ ಸಂಸ್ಥೆಯ ದ್ಯೆಯೋದ್ಯೇಶಗಳನ್ನು ವಿವರವಾಗಿ ಹೇಳಿದರು.
ಖ್ಯಾತ ಸಿ.ಎ. ಶ್ರೀನಿವಾಸ ಶೀವಣಗಿಯವರು ಮಾತನಾಡಿ ತಾಂತ್ರಿಕ ಯುಗದಲ್ಲಿಂದು ಮೊಬೈಲ್ ಅತ್ಯವಶ್ಯ ವಸ್ತವಾಗಿದೆ. ಅದರ ಉಪಯೋಗ ಮಾಡಿಕೊಳ್ಳಬೇಕೆ ಹೊರತು ಅದರಿಂದ ದುರಪಯೋಗವಾಗಬೇಕು ಎಂದು ಹೇಳಿದರು.
ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಶೈಲಾ ಚಾಟೆ, ಗುಂಡೇನಟ್ಟಿ ಮಧುಕರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಶ್ರೀಮತಿ ಮಂಜುಳಾ ಜಕನೂರ, ಅಚ್ಯುತ ಪ್ರಯಾಗ, ಶ್ರೀಮತಿ ಜಯಶ್ರೀ ಆರ್. ಕುರ್ತಕೋಟಿ, ಪ್ರಶಾಂತ ಅಧೋಕೆ ಮುಂತಾದವರು ಉಪಸ್ಥಿತರಿದ್ದರು. ಕುಮಾರಿ ಭಾಗ್ಯಶ್ರೀ ಕಾರೇಕರ ಪ್ರಾರ್ಥಿಸಿದರು. ಪ್ರೊ. ಐ. ಜಿ. ಪಾಟೀಲ ಸ್ವಾಗತಿಸಿ ಪರಿಚಯಿಸಿದರು. ಶ್ರೀಮತಿ ಅನಘಾ ಪ್ರಯಾಗ ನಿರೂಪಿಸಿದರು.
Gadi Kannadiga > Local News > ಗ್ರಾಹಕರ ಜಾಗೃತಿ ಕಾರ್ಯಕ್ರಮ ಮಾರಾಟಗಾರನ ಆಮಿಷಕ್ಕೆ ಗ್ರಾಹಕ ಒಳಗಾಗಬಾರದು: ಶ್ರೀಶೈಲ ಕಂಕಣವಾಡಿ
ಗ್ರಾಹಕರ ಜಾಗೃತಿ ಕಾರ್ಯಕ್ರಮ ಮಾರಾಟಗಾರನ ಆಮಿಷಕ್ಕೆ ಗ್ರಾಹಕ ಒಳಗಾಗಬಾರದು: ಶ್ರೀಶೈಲ ಕಂಕಣವಾಡಿ
Suresh23/08/2023
posted on

More important news
ಪ್ಲಾಸ್ಟಿಕ್ ಬಳಕೆ ಮಾಡಿದರೆ ಕ್ರಮ
30/09/2023
ಬಿತ್ತನೆ ಬೀಜ ವಿತರಣೆಗೆ ಚಾಲನೆ
30/09/2023
ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ
29/09/2023
ಸುಮಧುರ ಚಿತ್ರಗೀತೆಗಳ ಕಾರ್ಯಕ್ರಮ
29/09/2023