ಕೊಪ್ಪಳ, ಅ.೧೧ : ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ವತಿಯಿಂದ ಪ್ರತಿ ತಿಂಗಳ ೧ನೇ ಮತ್ತು ೩ನೇ ಶನಿವಾರಗಳಂದು ಲೋಕ್ ಅದಾಲತ್ (ಉಪಭೋಗ್ತಾ ಲೋಕ) ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಆಯೋಗದಲ್ಲಿ ದಾಖಲಾಗಿರುವ ಗ್ರಾಹಕ ಪ್ರಕರಣಗಳಲ್ಲಿ ಜೀವ ವಿಮೆ, ವಾಹನ ವಿಮೆ ಸೇರಿದಂತೆ ವಿವಿಧ ವಿಮೆಗಳಿಗೆ ಸಂಬಂಧಿಸಿದ ಹಾಗೂ ಬ್ಯಾಂಕ್, ಸೊಸೈಟಿಗಳಲ್ಲಿ ಮುದ್ದತ್ತು ಠೇವಣಿ ಇಟ್ಟ ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತ ಕಕ್ಷಿದಾರರು ಅಕ್ಟೋಬರ್ ೧೫ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಜಿಲ್ಲಾ ಆಯೋಗದಲ್ಲಿ ಹಾಜರಿರಲು ಸೂಚಿಸಿದೆ.
ಈ ಆಯೋಗದಲ್ಲಿ ರಾಜೀ ಮಾಡಿಕೊಂಡ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ ಹಾಗೂ ರಾಜಿ ಸಂದಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡರೆ ಹಣ, ಸಮಯ ಉಳಿತಾಯವಾಗುವದರಿಂದ ಕಕ್ಷಿದಾರರು ಮತ್ತು ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳವಂತೆ ಪ್ರಕಟಣೆ ತಿಳಿಸಿದೆ.
Gadi Kannadiga > State > ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ : ಪ್ರತಿ ತಿಂಗಳ ೧ನೇ ಮತ್ತು ೩ನೇ ಶನಿವಾರ ಲೋಕ್ ಅದಾಲತ್
ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ : ಪ್ರತಿ ತಿಂಗಳ ೧ನೇ ಮತ್ತು ೩ನೇ ಶನಿವಾರ ಲೋಕ್ ಅದಾಲತ್
Suresh11/10/2022
posted on