ಬೆಳಗಾವಿ: ಜನೆವರಿ-೨೦: ಸಂಸ್ಕಾರ ಇಲ್ಲದೇ ಸಹಕಾರ ಇಲ್ಲ, ಯಾವುದೇ ಸಹಕಾರ ಇಲ್ಲದೇ ಉದ್ಧಾರವೂ ಆಗುವುದಿಲ. ಸಂಸ್ಕಾರವು ಭಾಷಣ ಕೇಳಿದರೆ, ಪುಸ್ತಕ ಓದಿದರೆ ಬರುವುದಿಲ್ಲ. ಮನೆಯಲ್ಲಿ ತಾಯಿ ಕಲಿಸುವುದರಿಂದ ಸಂಸ್ಕಾರ ಕಲಿಯಲು ಆರಂಭವಾಗುತ್ತದೆ. ಸಂಸ್ಕಾರ ಇಟ್ಟುಕೊಂಡು ಸಹಕಾರ ನಡೆಸಿದರೆ ಯಶಸ್ವಿಯಾಗಲು ಸಾಧ್ಯ ಎಂದು ಸಹಕಾರ ಭಾರತಿ ರಾಜ್ಯಾಧ್ಯಕ್ಷ ರಾಜಶೇಖರ ಶೀಲವಂತ ತಿಳಿಸಿದರು.
ಶುಕ್ರವಾರ ಸಹಕಾರ ಭಾರತಿ ಜಿಲ್ಲಾ ಸಮಿತಿಯಿಂದ ನಗರದ ಶ್ರೀ ಬಿ. ಎಸ್. ಯಡಿಯೂರಪ್ಪ ಸಭಾ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಅಭ್ಯಾಸ ವರ್ಗ ಉದ್ಘಾಟಿಸಿ ಅವರು ಮಾತನಾಡಿದರು. ಪಂಚಾಯಿತಿ ಎಷ್ಟು ಮುಖ್ಯವೋ..? ಅಷ್ಟೇ ಕೃಷಿ ಪತ್ತಿನ ಸಹಕಾರಿ ಸಂಘಗಳು ಕೂಡ ಮುಖ್ಯ. ಹೀಗಾಗಿ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಸಹಕಾರಿ ಸೊಸೈಟಿ ಸ್ಥಾಪಿಸುವ ಗುರಿ ಸರಕಾರ ಹೊಂದಿದೆ. ಅಭಿವೃದ್ಧಿ ಕೈಗೊಳ್ಳಬೇಕಾದ ಎಲ್ಲ ಕಾರ್ಯಗಳನ್ನು ಆ ಸೊಸೈಟಿಗಳು ಮಾಡಲಿವೆ. ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು. ಗ್ರಾಮೀಣ ಭಾಗದ ತೆರಿಗೆ ಮೂಲಕ ೫ ಟ್ರಿಲಿಯನ್ ಆರ್ಥಿಕ ಗುರಿ ಮುಟ್ಟಲಿದ್ದೇವೆ ಎಂದು ಕೇಂದ್ರ ಸಚಿವ ಅಮಿತ್ ಷಾ ಹೇಳಿದ್ದಾರೆ. ಹಾಲು ಮತ್ತು ಮೀನು ಉತ್ಪಾದನೆ ಮೂಲಕ ಬಹಳ ದೊಡ್ಡ ಯೋಜನೆ ಸಿದ್ಧವಾಗಿದೆ ಎಂದರು.
ನಮ್ಮ ವಿಚಾರದಲ್ಲಿ, ಮನಸ್ಸಿನಲ್ಲಿ ಸಂಸ್ಕಾರ ಇದ್ದರೆ ಯಾವುದೇ ತಪ್ಪುಗಳು ನಡೆಯುವುದಿಲ್ಲ.
ನಮ್ಮ ದೇಶದ ಸಂಸ್ಕಾರ ಕಲಿಯಲು ಬೇರೆ ದೇಶಗಳಿಂದ ಇಲ್ಲಿಗೆ ಬರುತ್ತಾರೆ. ಇಲ್ಲಿ ಧ್ಯಾನ ಕಲಿತು, ಶಾಂತಿ ಪಡೆದುಕೊಂಡು ಹೋಗುತ್ತಾರೆ. ಆದರೆ ಇಲ್ಲಿನ ನಮ್ಮ ಜನ ಸಂಸ್ಕಾರಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಸಹಕಾರ ಇಲಾಖೆಯಿಂದ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ. ಬರುವ ಐದು ವರ್ಷದಲ್ಲಿ ಸಹಕಾರ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಲಿದೆ. ಐದು ಸಾವಿರ ಕೋಟಿ ರೂ. ಸರಕಾರ ಬಂಡವಾಳ ಹಾಕಿದರೆ ಇನ್ನೂ ಐದು ಸಾವಿರ ಕೋಟಿ ರೂ. ಶೇರುಗಳಿಂದ ಹಾಕಲಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾಕರ ಮಹೇಂದ್ರಕರ್, ಸಹಕಾರ ಭಾರತಿ ರಾಷ್ಟ್ರವ್ಯಾಪಿ ಸಂಘಟನೆಯಾಗಿದೆ. ಸಂಸ್ಕಾರ, ಸಹಕಾರ, ಉದ್ಧಾರ ನಮ್ಮ ಸಂಘಟನೆಯ ಮೂಲ ಧ್ಯೇಯಗಳಾಗಿವೆ. ಮೊದಲಿದ್ದ ಗುರುಕುಲಗಳು ಬಂದ್ ಆಗಿ ಶಾಲಾ, ಕಾಲೇಜುಗಳು ಆರಂಭವಾಗಿವೆ. ಬ್ರಿಟಿಷರು ನಮ್ಮ ಸಂಸ್ಕೃತಿಯನ್ನು ಹಾಳು ಮಾಡಿದ್ದಾರೆ. ಸಂಸ್ಕಾರ ಕಡಿಮೆಯಾಗಿದೆ. ಸಂಸ್ಕಾರಯುತ ಕಾರ್ಯಕರ್ತರನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಅಭ್ಯಾಸ ವರ್ಗ ಮಾಡಲಾಗುತ್ತಿದೆ ಎಂದರು.
ಇದೇ ವೇಳೆ ಗುರು ರೋಡ್ ಲೈನ್ಸ್ ಸಂಸ್ಥಾಪಕ ಗುರುದೇವ ನಿಂಗನಗೌಡ ಪಾಟೀಲ ಅವರ ಸಾಮಾಜಿಕ ಸೇವೆ ಗುರುತಿಸಿ ಸಹಕಾರ ಭಾರತಿ ವತಿಯಿಂದ ಸತ್ಕರಿಸಲಾಯಿತು.
ಸಹಕಾರ ಭಾರತಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ದಂಡಿನವರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಾಂತ ಕಾರ್ಯದರ್ಶಿ ಸುಭಾಷ ಇಂಡಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ ಆಗಮಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶಿರಸಿಯ ಅಗ್ರಿಕಲ್ಚರ್ ಸರ್ವಿಸ್ ಮತ್ತು ಡೆವಲಪ್ ಮೆಂಟ್ ಕೋ ಆಪ್ ಸೊಸೈಟಿಯ ಭಾಸ್ಕರ ಹೆಗಡೆ ಕಾಗೇರಿ ಆಗಮಿಸಿದ್ದರು. ಸಹಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾಕರ ಮಹೇಂದ್ರಕರ, ಕೋಶಾಧ್ಯಕ್ಷ ಶೇಖರ ಹಂಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಈರಣ್ಣ ಮದವಾಲ ನಿರೂಪಿಸಿದರು. ಸದಸ್ಯ ರಾಘವೇಂದ್ರ ಪಾಟೀಲ ಸ್ವಾಗತಿಸಿದರು. ಧನಶ್ರೀ ಸರ್ ದೇಸಾಯಿ ಜಾಂಬೋಟಿಕರ್ ವಂದಿಸಿದರು.
Gadi Kannadiga > Local News > ಆಸ್ಕಿಯಿಂದ – ಯುನಿಕೋಡ್ -ಮತ್ತು- ಯುನಿಕೋಡ್ ನಿಂದ ನುಡಿ – ಆಸ್ಕಿ ಶಿಷ್ಟತೆಗೆ ಬದಲಾವಣೆ Welcome to KaGaPa kagapa.in ಆಸ್ಕಿಶಿಷ್ಟತೆಯಿಂದ ಯೂನಿಕೋಡ್‌ಗೆ ಬದಲಿಸಲುಯೂನಿಕೋಡ್‌ನಿಂದ ಆಸ್ಕಿ ಶಿಷ್ಟತೆಗೆ ಬದಲಿಸಲು 9ಆಸ್ಕಿ / ನುಡಿಯಿಂದ ಯುನಿಕೋಡ್ ಗೆ ಬದಲಾಯಿಸಲು ಇಲ್ಲಿ ಬರೆಯಿರಿ… ¸ÀA¸ÁÌgÀ, ¸ÀºÀPÁgÀ¢AzÀ K½UÉ ¸ÁzsÀå: ¸ÀºÀPÁgÀ ¨sÁgÀw gÁeÁåzsÀåPÀë gÁd±ÉÃRgÀ ²Ã®ªÀAvÀ ಆಸ್ಕಿ / ನುಡಿಯಿಂದ ಯುನಿಕೋಡ್ ಗೆ ಬದಲಾವಣೆಗೊಂಡ ಪಠ್ಯ.. ಸಂಸ್ಕಾರ, ಸಹಕಾರದಿಂದ ಏಳಿಗೆ ಸಾಧ್ಯ: ಸಹಕಾರ ಭಾರತಿ ರಾಜ್ಯಾಧ್ಯಕ್ಷ ರಾಜಶೇಖರ ಶೀಲವಂತ
ಆಸ್ಕಿಯಿಂದ – ಯುನಿಕೋಡ್ -ಮತ್ತು- ಯುನಿಕೋಡ್ ನಿಂದ ನುಡಿ – ಆಸ್ಕಿ ಶಿಷ್ಟತೆಗೆ ಬದಲಾವಣೆ Welcome to KaGaPa kagapa.in ಆಸ್ಕಿಶಿಷ್ಟತೆಯಿಂದ ಯೂನಿಕೋಡ್‌ಗೆ ಬದಲಿಸಲುಯೂನಿಕೋಡ್‌ನಿಂದ ಆಸ್ಕಿ ಶಿಷ್ಟತೆಗೆ ಬದಲಿಸಲು 9ಆಸ್ಕಿ / ನುಡಿಯಿಂದ ಯುನಿಕೋಡ್ ಗೆ ಬದಲಾಯಿಸಲು ಇಲ್ಲಿ ಬರೆಯಿರಿ… ¸ÀA¸ÁÌgÀ, ¸ÀºÀPÁgÀ¢AzÀ K½UÉ ¸ÁzsÀå: ¸ÀºÀPÁgÀ ¨sÁgÀw gÁeÁåzsÀåPÀë gÁd±ÉÃRgÀ ²Ã®ªÀAvÀ ಆಸ್ಕಿ / ನುಡಿಯಿಂದ ಯುನಿಕೋಡ್ ಗೆ ಬದಲಾವಣೆಗೊಂಡ ಪಠ್ಯ.. ಸಂಸ್ಕಾರ, ಸಹಕಾರದಿಂದ ಏಳಿಗೆ ಸಾಧ್ಯ: ಸಹಕಾರ ಭಾರತಿ ರಾಜ್ಯಾಧ್ಯಕ್ಷ ರಾಜಶೇಖರ ಶೀಲವಂತ
Suresh20/01/2023
posted on

Tags:¨sÁgÀw¸Àa¸ÁÌgÀ,¸ÀºÀpÁgÀ¸ÀºÀpÁgÀ¢azÀ¸ÁzsÀå:118 ಮಂದಿ ಗೈರು²Ã®ªÀavÀ9ಆಸ್ಕಿgÁd±ÉÃrgÀgÁeÁåzsÀåpÀëk½uÉkagapakagapa.inlocalnewswelcomeಆಸ್ಕಿಆಸ್ಕಿಯಿಂದಆಸ್ಕಿಶಿಷ್ಟತೆಯಿಂದಇಲ್ಲಿಏಳಿಗೆಗೆನಿಂದನುಡಿನುಡಿಯಿಂದಪಠ್ಯಬದಲಾಯಿಸಲುಬದಲಾವಣೆಬದಲಾವಣೆಗೊಂಡಬದಲಿಸಲುಬದಲಿಸಲುಯೂನಿಕೋಡ್ನಿಂದಬರೆಯಿರಿ…ಭಾರತಿಮತ್ತುಯುನಿಕೋಡ್ಯೂನಿಕೋಡ್ಗೆರಾಜಶೇಖರರಾಜ್ಯಾಧ್ಯಕ್ಷಶಿಷ್ಟತೆಗೆಶೀಲವಂತಸಂಸ್ಕಾರಸಹಕಾರಸಹಕಾರದಿಂದಸಾಧ್ಯ: