This is the title of the web page
This is the title of the web page

Please assign a menu to the primary menu location under menu

State

ಮಂಗಳೂರು ಐಟಿಐ ಕಾಲೇಜಿನ ಘಟಿಕೋತ್ಸವ ಯಶಸ್ವಿ


ಕೊಪ್ಪಳ, ಸೆ. ೨೦ : ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಸರ್ಕಾರಿ ಕೈಗಾರಿಕಾ ತರಬೇತಿ (ಐಟಿಐ ಕಾಲೇಜು) ಸಂಸ್ಥೆಯಲ್ಲಿ ಶನಿವಾರದಂದು (ಸೆ.೧೭) ಆಯೋಜಿಸಲಾಗಿದ್ದ ೨೦೨೨ನೇ ಸಾಲಿನಲ್ಲಿ ಐಟಿಐ ಉತ್ತೀರ್ಣರಾದ ತರಬೇತಿದಾರರ ಘಟಿಕೋತ್ಸವ ಸಮಾರಂಭವು ಯಶಸ್ವಿಯಾಗಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ತರಬೇತಿ ಅಧಿಕಾರಿ ವಿ. ಶರಣಪ್ಪ ಅವರು ವಹಿಸಿ, ಐಟಿಐ ತರಬೇತಿ ಕುರಿತು ಸಮಗ್ರ ಮಾಹಿತಿ ನೀಡಿದರು. ೨೦೨೨ನೇ ಸಾಲಿನಲ್ಲಿ ಐಟಿಐ ತರಬೇತಿ ಪಡೆದು ಉತ್ತೀರ್ಣರಾದ ಎಲ್ಲಾ ವೃತ್ತಿಗಳ ಅರ್ಹ ತರಬೇತುದಾರರಿಗೆ ಡಿಜಿಟಿ ಸರ್ಟಿಫಿಕೇಟ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ಗ್ರಾ.ಪಂ. ಅಧ್ಯಕ್ಷೆ ಅನುಪೂರ್ಣ ಮ್ಯಾಗಳೇಶಿ, ಉಪಾಧ್ಯಕ್ಷ ರಾಘವೇಂದ್ರ ಹಳ್ಳಿ, ಸದಸ್ಯ ಯಂಕಣ್ಣ ಕವಳಕೇರಿ, ಸಂಸ್ಥೆಯ ಸಿಬ್ಬಂದಿಗಳು ಸೇರಿದಂತೆ ತರಬೇತಿದಾರರ ಪಾಲಕರು ಉಪಸ್ಥಿತರಿದ್ದರು.


Gadi Kannadiga

Leave a Reply