This is the title of the web page
This is the title of the web page

Please assign a menu to the primary menu location under menu

Local News

ಪಾಲಿಕೆ ಸದಸ್ಯರ ವಾರ್ಡಿನ ಸಮಸ್ಯೆಗಳಿಗೆ 15 ದಿನಗಳಲ್ಲಿ ಸ್ಪಂದಿಸುತ್ತೇವೆ.. ಪಾಲಿಕೆ ಆಯುಕ್ತರ ಸ್ಪಷ್ಟನೆ..


ಬೆಳಗಾವಿ : ಶುಕ್ರವಾರ ದಿನಾಂಕ 21/07/2023 ರಂದು ಮಹಾನಗರ ಪಾಲಿಕೆಯ ಕೌನ್ಸಿಲ್ ಸಭಾಂಗಣದಲ್ಲಿ ಮೇಯರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲಿಕೆಯ ಸದಸ್ಯರು ತಮ್ಮ ಹಲವಾರು ಬೇಡಿಕೆ  ಹಾಗೂ ಸಮಸ್ಯೆಗಳನ್ನು ಹೇಳಿಕೊಂಡರು..
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮೂರು ವರ್ಷಕ್ಕೊಮ್ಮೆ ಸಿಬ್ಬಂದಿಯ ವರ್ಗಾವಣೆ ಮಾಡಬೇಕೆಂಬ ಸರಕಾರದ ಆದೇಶವಿದ್ದರೂ
 ಪಾಲಿಕೆಯಲ್ಲಿ ದಶಕಗಳಿಂದಲೂ ಒಂದೇ ಸ್ಥಾನದಲ್ಲಿ  ಕೆಲಸ  ಮಾಡುವ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಹೊಸ ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ಪಾಲಿಕೆಯ ಬಿಜೆಪಿ ಸದಸ್ಯರಾದ ಶಂಕರ ಪಾಟೀಲ, ರವಿ ದೋತ್ರೆ, ಹನುಮಂತ ಕೊಂಗಾಲಿ ಹಾಗೂ ರಾಜಶೇಖರ ಡೋಣಿ ಒತ್ತಾಯಿಸಿದರು.
ಈ‌ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಹಲವಾರು ಸಾರ್ವಜನಿಕರು ಇಂತಹ  ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಬಹಳ ವರ್ಷದಿಂದ ಇಲ್ಲಿಯೇ ಇರುವ ಅಧಿಕಾರಿಗಳ ವರ್ಗಾವಣೆ ಮಾಡಬೇಕೆಂದು ಮೇಯರ್ ಠರಾವ್ ಪಾಸ್ ಮಾಡಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಬೇಕೆಂದು ಸದಸ್ಯರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮೇಯರ್ ಶೋಭಾ ಸೋಮನಾಚೆ ಅವರು, ಸದಸ್ಯರು ಎಲ್ಲರೂ ಸೇರಿ, ಮೂರು ವರ್ಷಗಳ ಕಾಲ ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ವರ್ಗಾವಣೆ ಮಾಡಲು ಮಹಾನಗರ ಪಾಲಿಕೆಯಿಂದ ಸರಕಾರಕ್ಕೆ ಠರಾವ್ ಪಾಸ್ ಮಾಡಿ ಮೂರು ದಿನದಲ್ಲಿ ಕಳುಹಿಸಿಕೊಡಲಾಗುವುದು ಎಂಬ ಭರವಸೆಯನ್ನು ಸಭೆಗೆ ನೀಡಿದರು..
ಸ್ಮಾರ್ಟ್ ಸಿಟಿ: ಬೆಳಗಾವಿ ಆದಂತಹ ಸ್ಮಾರ್ಟ್ ಸಿಟಿಯ ಕೆಲಸ ಯಾವದೂ ಸರಿ ಇಲ್ಲ, ಅಲ್ಲಿಯ ಅಧಿಕಾರಿಗಳು ಪಾಲಿಕೆಯ ಅಧಿಕಾರಿಗಳೊಂದಿಗೆ ಸಮನ್ವಯತೆಯಲ್ಲಿ ಕೆಲಸ ಮಾಡಿಲ್ಲ,  ಸ್ಮಾರ್ಟ್ ಸಿಟಿ ಹಾಗೂ ಪಾಲಿಕೆಗೆ ಸಂಭಂಧ ಇದೆಯೋ ಇಲ್ಲವೋ ಎಂಬ ಸಂಶಯ ಕಾಡುತ್ತಿದೆ ಎಂದು ಬಿಜೆಪಿ ಸದಸ್ಯ ರವಿ ದೋತ್ರೆ ಪ್ರಶ್ನಿಸಿದರು.
ಆಡಳಿತ ಪಕ್ಷದ ನಾಯಕ ರಾಜಶೇಖರ ಡೋಣಿ ಮಾತನಾಡಿ, ಸ್ಮಾರ್ಟ್ ಸಿಟಿಯ ಕಾಮಗಾರಿಯೂ ಸಂಪೂರ್ಣ ಅವೈಜ್ಞಾನಿಕವಾಗಿದ್ದು,  ಮಾಡಿದ ರಸ್ತೆಯನ್ನು ಅಗೆದು ಕಾಂಕ್ರೀಟ್ ರಸ್ತೆ ಮಾಡುತ್ತಿದ್ದಾರೆ, ಕೆಲಸದ ಕಾಲಮೀತಿ ಎಷ್ಟು? ಯಾವಾಗ ಮುಗಿಯುತ್ತದೆ? ಎಂದು ಜನರಿಗೆ ಮಾಹಿತಿ ತಿಳಿಯುತ್ತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಸ್ಮಾರ್ಟ್ ಸಿಟಿ ಹಾಗೂ ಲೋಕೋಪಯೋಗಿ ಇಲಾಖೆಯ ಜೊತೆಗೆ ಪಾಲಿಕೆಯ ಪ್ರತ್ಯೇಕ ಸಭೆ ನಡೆಸಿ ಈ ಸಮಸ್ಯೆಯ ಕುರಿತು ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಸದಸ್ಯರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮೇಯರ್ ಶೋಭಾ ಸೋಮನಾಚೆ ಅವರು, ಸ್ಮಾರ್ಟ್ ಸಿಟಿ ಕಾಮಗಾರಿಯ ಚರ್ಚೆ ಹಾಗೂ ಲೋಕೋಪಯೋಗಿ ಇಲಾಖೆಯ ಚರ್ಚೆ ಕುರಿತು ನಾಲ್ಕು ದಿನದಲ್ಲಿ ಪಾಲಿಕೆಯೊಂದಿಗೆ ಸಭೆ ನಡೆಸಲು ತಿರ್ಮಾನಿಸಲಾಗುವುದು ಎಂದರು.
ಇನ್ನೂ ಸದಸ್ಯರ ಪ್ರಶ್ನೆಗಳಿಗೆ ಪಾಲಿಕೆ ಆಯುಕ್ತರಾದ ಅಶೋಕ ದುಡಗುಂಟಿ ಅವರು ಮಾತನಾಡಿ, ಪಾಲಿಕೆಯ ಸದಸ್ಯರು ತಮ್ಮ ವಾರ್ಡುಗಳ ಸಮಸ್ಯೆಯ ಕುರಿತು ಬರೆದಿರುವ ಪತ್ರಗಳಿಗೆ 15 ದಿನಗಳಲ್ಲಿ ಉತ್ತರ ಕಲ್ಪಿಸಿಕೊಡಲಾಗುವುದು ಎಂಬ ಭರವಸೆ ನೀಡಿದರು..
ಗುತ್ತಿಗೆದಾರರ ಮೇಲೆ ಸದಸ್ಯರ ಅಸಮಾಧಾನ : ಇ- ಸ್ಮಾರ್ಟ್ ಲೈನ್: ನಗರದಲ್ಲಿ ಎಲ್ ಇಡಿ ವಿದ್ಯುತ್ ದೀಪ ಅಳವಡಿಕೆ ಮಾಡುತ್ತಿರುವ ಗುತ್ತಿಗೆದಾರ ಪಾಲಿಕೆ ಸದಸ್ಯರಿಗೆ ಗೌರವ ನೀಡುವುದಿಲ್ಲ ಹೀಗಿರುವಾಗ ಇಂತವರಿಗೆ ಯಾಕೆ ಪಾಲಿಕೆಯ ಕಾಮಗಾರಿ ನೀಡಬೇಕು ಎಂದು ಪಾಲಿಕೆಯ ಸದಸ್ಯರು ಪ್ರಶ್ನಿಸಿದರಲ್ಲದೇ, ಅಂತಹ ಗುತ್ತಿಗೆದಾರರನ್ನು  ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಎಲ್ಲ‌ ಸದಸ್ಯರು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸ್ಮಾರ್ಟ್ ಸಿಟಿಯ ಎಲೆಕ್ಟ್ರಿಕಲ್ ಎಂಜಿನಿಯರ್ ಆನಂದ ದೇಶಪಾಂಡೆ ಅವರು, ಸ್ಮಾರ್ಟ್ ಸಿಟಿಯಿಂದ ಏಳು ವರ್ಷದ ಒಳಗಾಗಿ ಎಲ್ ಇಡಿ ವಿದ್ಯುತ್ ದೀಪ ಅಳವಡಿಸಲು ಕಾಮಗಾರಿ ನೀಡಲಾಗಿದೆ, ಆತ ಸಮಯಕ್ಕೆ ಸರಿಯಾಗಿ ಅಳವಡಿಸದಿದ್ದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಪರಿಷತ್ ಸಭೆಯಲ್ಲಿ ಉಪಮೇಯರ್ ರೇಷ್ಮಾ ಪಾಟೀಲ, ಪಾಲಿಕೆ ಅಧಿಕಾರಿಗಳಾದ ಲಕ್ಷ್ಮೀ ಸುಳಗೇಕರ, ಭಾಗ್ಯಾಶ್ರೀ ಹುಗ್ಗಿ ಹಾಗೂ ಪಾಲಿಕೆಯ ಪ್ರಮುಖ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply