ಕೊಪ್ಪಳ ಡಿಸೆಂಬರ್ ೨೩: ಫೈಲಿಂಗ್ ಮಾಡಿಕೊಳ್ಳದೇ ಇರುವ ಸಂಘ ಸಂಸ್ಥೆಗಳು ಡಿಸೆಂಬರ್ ೩೧ ರೊಳಗಾಗಿ ಫೈಲಿಂಗ್ ಮಾಡಿಕೊಳ್ಳುವಂತೆ ಕೊಪ್ಪಳ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘ ಸಂಸ್ಥೆಗಳ ನೋಂದಣಾಧಿಕಾರಿಗಳು ತಿಳಿಸಿದ್ದಾರೆ.
ಸಹಕಾರ ಸಂಘಗಳ ನಿಬಂಧಕರು, ಕರ್ನಾಟಕ ರಾಜ್ಯ, ಬೆಂಗಳೂರು ಇವರು ಸತ್ತೋಲೆ ಪತ್ರದ ಮೂಲಕ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ ೧೯೬೦ ರಡಿ ನೋಂದಣಿಯಾದ ಸಂಘಗಳು ೫ ವರ್ಷಗಳಿಗೂ ಮೇಲ್ಪಟ್ಟು ಫೈಲಿಂಗ್ ಮಾಡಿಕೊಳ್ಳದೇ ಇರುವ ಸಂಘ ಸಂಸ್ಥೆಗಳನ್ನು ಸಂಘಗಳ ಸದಸ್ಯರ ಹಿತದೃಷ್ಟಿಯಿಂದ ದಂಡದೊಂದಿಗೆ ಷರತ್ತಿಗೊಳಪಟ್ಟು ಡಿಸೆಂಬರ್ ೩೧ರ ಅಂತ್ಯದೊಳಗಾಗಿ ನವೀಕರಿಸಲು ಅನುಮತಿ ನೀಡಿರುತ್ತಾರೆ.
ಆದ್ದರಿಂದ ೫ ವರ್ಷಗಳಿಗೂ ಮೇಲ್ಪಟ್ಟು ಫೈಲಿಂಗ್ ಮಾಡಿಕೊಳ್ಳದೇ ಇರುವ ಸಂಘ ಸಂಸ್ಥೆಗಳು ಡಿ. ೩೧ರೊಳಗಾಗಿ ಫೈಲಿಂಗ್ ಮಾಡಿಕೊಳ್ಳಬೇಕು. ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲು ಮತ್ತೊಮ್ಮೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಹಕಾರ ಸಂಘಗಳ ಉಪ ನಿಬಂಧಕರ ಹಾಗೂ ಸಂಘ ಸಂಸ್ಥೆಗಳ ನೋಂದಣಾಧಿಕಾರಿಗಳ ಕಛೇರಿ, ಕೊಪ್ಪಳ ದೂರವಾಣಿ ಸಂಖ್ಯೆ: ೦೮೫೩೯-೨೨೧೧೦೯ ಗೆ ಸಂಪರ್ಕಿಸಬಹದು ಎಂದು ಪ್ರಕಟಣೆ ತಿಳಿಸಿದೆ.
Gadi Kannadiga > State > ಸಂಘ ಸಂಸ್ಥೆಗಳು ಡಿ. ೩೧ ರೊಳಗಾಗಿ ಫೈಲಿಂಗ್ ಮಾಡಿಕೊಳ್ಳಿ
More important news
ವಿದ್ಯುತ್ ವ್ಯತ್ಯಯ
23/03/2023
ಚುನಾವಣೆಯಲ್ಲಿ ಮಕ್ಕಳ ಬಳಕೆ ಸಲ್ಲದು
23/03/2023
ಮಾರ್ಚ ೨೪ ರಂದು ನಗರಸಭೆಯಲ್ಲಿ ಸಾಮಾನ್ಯ ಸಭೆ
23/03/2023