ಕುಷ್ಟಗಿ: ತಾಲೂಕಿನ ಕಂದುಕುರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋವಿಡ್-19 ಲಸಿಕೆಯನ್ನು ಶಾಲಾ ಮಕ್ಕಳಿಗೆ ಹಾಕಿಸಲಾಯಿತು.
ಕಂದಕೂರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಯಲ್ಲಮ್ಮ ಶರಣಪ್ಪ ಉಪ್ಪಾರ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಗ್ರಾಮ ಪಂಚಾಯತಿ ಸದಸ್ಯರಾದ ಸಲೀಂಸಾಬ ಟೆಂಗುಂಟಿ,ವೈದ್ಯಾಧಿಕಾರ ರಮೇಶ, ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿ ಕುಮಾರಿ ಪ್ರಿಯಾಂಕ ಮುಖ್ಯ ಶಿಕ್ಷಕರಾದ ಎಂ ಎಂ ಗೊಣ್ಣಾಗರ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮದ ಯುವ ಮುಖಂಡ ಆಂಜನೇಯ ಹಾದಿಮನಿ, ಶರಣಪ್ಪ ಉಪ್ಪಾರ, ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿ ಶ್ರೀಮತಿ ಪ್ರೇಮ ಆಶಾ ಕಾರ್ಯಕರ್ತೆಯರು ಬಿಸಿಯೂಟ ಅಡುಗೆ ತಯಾರಕರು ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಿಕ್ಷಕರಾದ ಬಸವರಾಜ ಎಚ್ ಕಾರ್ಯಕ್ರಮ ದ ನಿರೂಪಣೆ ಮಾಡಿದರು .
ಆರ್ ಶರಣಪ್ಪ ಗುಮಗೇರಾ
ಕೊಪ್ಪಳ