ಬೆಳಗಾವಿ,ಅ.೧೯: ಅ.೨೨ ರಂದು ೪ನೇ ಶನಿವಾರ, ಅ.೨೩ ರಂದು ಭಾನುವಾರ, ಅ.೨೪ ಸೋಮವಾರದಂದು ನರಕ ಚತುರ್ದಶಿ ಮತ್ತು ಅ.೨೬ ರಂದು ಬಲಿಪಾಡ್ಯಮಿ ಸಾರ್ವತ್ರಿಕ ರಜೆಗಳು ಇರುವುದರಿಂದ ಬೆಂಗಳೂರು, ಮುಂಬಯಿ, ಪೂನಾ ಹಾಗೂ ಪಣಜಿಗಳಿಂದ ಬೆಳಗಾವಿ ವಭಾಗದ ವ್ಯಾಪ್ತಿಯ ಸ್ಥಳಗಳಿಗೆ ಬರುವ ಪ್ರಯಾಣಿಕರ ಜನದಟ್ಟಣೆಯ ಹೆಚ್ಚಳವನ್ನು ಅವಲೋಕಿಸಿ ಅ.೨೧ ಹಾಗೂ ಅ.೨೨ ರಂದು ಬೆಂಗಳೂರು ಕೇಂಕೆಗೌಡ ಬಸ್ ನಿಲ್ದಾಣದಿಂದ ಬೆಳಗಾವಿಗೆ ಹೆಚ್ಚಿನ ವಾಹನಗಳನ್ನು ಕಾರ್ಯಾಚರಣೆ ಮಾಡಲು ಮತ್ತು ಹಬ್ಬದ ನಂತರ ಮರಳಿ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಅ.೨೬ ರಂದು ವಿಶೇಷ ಸಾರಿಗೆ ಕಾರ್ಯಾಚರಣೆಯನ್ನು ಮಾಡಲಾಗಿದೆ.
ಮಹಾರಷ್ಟ್ರ ರಾಜ್ಯದ ಪೂನಾ, ಮಂಬಯಿ, ಕೊಲ್ಲಾಪುರಗಳಿಂದ ಬೆಳಗಾವಿ ಕಡೆಗೆ ಹೋಗಿ ಬರಲು ಪ್ರಯಾಣಿಕರ ಅನುಕೂಲಕ್ಕಾಗಿ ಅ.೧೯ ರಿಂದ ಅ.೩೧ ಎವರೆಗೆ ಪ್ರಯಾಣಿಕರ ದಟ್ಟಣೆಗೆ ಅನುಸರಿಸಿ ಸಾರಿಗೆ ವ್ಯವಸ್ಥೆ ವಮಾಡಲಾಗಿದೆ.
ವಿಶೇಷ ಸಾರಿಗೆ ವ್ಯವಸ್ಥೆಯನ್ನು ಸಾರ್ವನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಬಳಗಾವಿ ವಿಭಾಗ ವಾ.ಕ.ರ.ಸಾ.ಸಂಸ್ಥೆಉ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ದೀಪಾವಳಿ ಹಬ್ಬ : ಸಾರಿಗೆ ಇಲಾಖೆಯಿಂದ ಹುಚ್ಚುವರಿ ಬಸ್ ಕಾರ್ಯಚರಣೆ
More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023