This is the title of the web page
This is the title of the web page

Please assign a menu to the primary menu location under menu

Local News

ಸತೀಶ ಶುರ‍್ಸ ಕಾರ್ಖಾನೆಯ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ


ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿ.ಜಿ ಹತ್ತಿರದ ಸತೀಶ ಶುರ‍್ಸ ಸಕ್ಕರೆ ಕಾರ್ಖಾನೆಯ ಸನ್ ೨೦೨೨-೨೩ನೇ ಸಾಲಿನ ಕಬ್ಬು ನುರಿಸುವ ಹಂಗಾಮಿನ ಕಬ್ಬು ನುರಿಸುವ ಕಾರ್ಯಕ್ರಮಕ್ಕೆ ರೈತ ಮುಖಂಡರು, ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರು ಚಾಲನೆ ನೀಡಿದರು.
ಸತೀಶ ಶುರ‍್ಸ ಸಂಸ್ಥೆಯ ಚೇರಮನ್‌ರು ಮತ್ತು ಮುಖ್ಯ ಹಣಕಾಸಿನ ಅಧಿಕಾರಿ ಪ್ರದೀಪಕುಮಾರ ಇಂಡಿ ಮಾತನಾಡಿ, ಸನ್ ೨೦೨೧-೨೨ ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತಬಾಂದವರಿಗೆ ಈಗಾಗಲೇ ರೂ.೨೭೦೦/- ಗಳಷ್ಟು ದರವನ್ನು ನೀಡಲಾಗಿದ್ದು, ಮುಂಬರುವ ದಿನಗಳಲ್ಲಿ ಎರಡನೇ ಕಂತಿನ ಹಣವನ್ನು ಘೋಷಣೆ ಮಾಡಲಾಗುವುದು. ಪ್ರಸಕ್ತ ೨೦೨೨-೨೩ ಹಂಗಾಮಿನ ಮೊದಲ ದಿನವೇ ಉತ್ಸಾಹದಿಂದ ೮೦೦ ವಾಹನಗಳಲ್ಲಿ ಸುಮಾರು ೧೫೦೦೦ ಮೆ.ಟನ್ ಕಬ್ಬನ್ನು ಪೂರೈಸುವ ಮೂಲಕ ರೈತ ಬಾಂದವರು ಕಾರ್ಖಾನೆಯ ಮೇಲಿನ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಕಬ್ಬು ಪೂರೈಸಿದ ರೈತರಿಗೆ ವಿಳಂಬ ಮಾಡದೆ ಕಬ್ಬಿನ ಬಿಲ್ಲನ್ನು ಪಾವತಿ ಮಾಡುತ್ತಿದ್ದು, ಪ್ರಸಕ್ತ ಹಂಗಾಮಿನಲ್ಲಿಯೂ ಸಹ ಕಬ್ಬು ಪೂರೈಸಿದ ರೈತರ ಬ್ಯಾಂಕ ಖಾತೆಗಳಿಗೆ ಸಮಯಾನುಸಾರ ಕಬ್ಬಿನ ಬಿಲ್ಲನ್ನು ಜಮೆ ಮಾಡಲಾಗುವುದು ಎಂದು ತಿಳಿಸಿದ ಅವರು ಕಾರ್ಖಾನೆಗೆ ಕಬ್ಬು ಪೂರೈಸುವ ಸಮಸ್ತ ರೈತ ಬಾಂದವರು ಪ್ರಸಕ್ತ ಹಂಗಾಮಿನಲ್ಲಿ ಉತ್ತಮ ಗುಣಮಟ್ಟದ ಕಬ್ಬನ್ನು ಪೂರೈಸಿ ಕಾರ್ಖಾನೆಯ ಪ್ರಗತಿಗೆ ಸಹಕರಿಸಬೇಕೆಂದು ಸಭೆಯಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಪ್ರಗತಿಪರ ರೈತರಾದ ಭೀಮಪ್ಪಾ ರಡ್ಡಿ, ಮಲ್ಲಿಕಾರ್ಜುನ ಕಬ್ಬೂರ, ಅರ್ಜುನ ನಾಯಿಕವಾಡಿ, ಅಶೋಕ ಮಳಲಿ, ರವಿ ಸಣ್ಣಕ್ಕಿ, ಅಜ್ಜಪ್ಪಾ ಗಿರಡ್ಡಿ, ಮಹಾದೇವಪ್ಪಾ ಪತ್ತಾರ, ವಾಸಪ್ಪಾ ಪಂಡ್ರೋಳಿ, ಕೆಂಚಪ್ಪಾ ಶಿಂತ್ರಿ, ವಿಠ್ಠಲ ಹೊಸುರ, ಆಡಳಿತ ಮಂಡಳಿಯ ಹಿರಿಯ ಉಪಾಧ್ಯಕ್ಷ ಎಲ್.ಆರ್.ಕಾರಗಿ, ಪಿ.ಡಿ. ಹಿರೇಮಠ ಹಾಗೂ ಉಪಾಧ್ಯಕ್ಷರುಗಳಾದ ವಿ.ಎಮ್.ತಳವಾರ, ಎ.ಎಸ್.ರಾಣಾ, ಡಿ.ಆರ್.ಪವಾರ ಮತ್ತು ಕಾರ್ಖಾನೆಯ ಕಾರ್ಮಿಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply