ಗದಗಜುಲೈ 14: ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳಿನ 3ನೇ ಶನಿವಾರ ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಆಯಾ ಹೆಸ್ಕಾಂ ಉಪವಿಭಾಗಗಳಲ್ಲಿ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ನೀಡಲು ಕ್ರಮ ವಹಿಸಲು ಸರ್ಕಾರವು ಆದೇಶಿಸಿರುವ ಪ್ರಯುಕ್ತ ಜುಲೈ 15 ರಂದು ಗ್ರಾಹಕರ ಸಂವಾದ ಸಭೆ ನಡೆಸಲಾಗುವುದು. ಸಾರ್ವಜನಿಕರು ತಮ್ಮ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಕೆಳಗೆ ನಮೂದಿಸಿರುವ ಹೆಸ್ಕಾಂ ಉಪವಿಭಾಗಗಳಿಗೆ ಬೇಟಿ ನೀಡಲು ಕೋರಲಾಗಿದೆ.
ಗದಗ ಶಹರ ವ್ಯಾಪ್ತಿಯ ಗ್ರಾಹಕರು ಗದಗ ಶಹರ ಉಪವಿಭಾಗ, ಮುಳಗುಂದ ನಾಕಾ, ಹೆಸ್ಕಾಂ ಕಚೇರಿಗೆ, ಗದಗ ಗ್ರಾಮೀಣ ವ್ಯಾಪ್ತಿಯ ಗ್ರಾಹಕರು ಗದಗ ಗ್ರಾಮೀಣ ಉಪವಿಭಾಗ, ಮುಳಗುಂದ ನಾಕಾ, ಹೆಸ್ಕಾಂಕಚೇರಿಗೆ, ಮುಂಡರಗಿ ತಾಲ್ಲೂಕು ವ್ಯಾಪ್ತಿಯ ಗ್ರಾಹಕರು ಮುಂಡರಗಿ ಉಪವಿಭಾಗ, ಹೆಸ್ಕಾಂ ಕಚೇರಿಗೆ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲ್ಲೂಕು ವ್ಯಾಪ್ತಿಯ ಗ್ರಾಹಕರು ಲಕ್ಷ್ಮೇಶ್ವರ ಉಪವಿಭಾಗ, ಹುಬ್ಬಳ್ಳಿ ರಸ್ತೆ, ಹೆಸ್ಕಾಂ ಕಚೇರಿಗೆ ಭೇಟಿ ನೀಡಬಹುದಾಗಿದೆ . ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಾಹಕ ಅಭಿಯಂತರರು ( ವಿ) ಕಾರ್ಯ ಮತ್ತು ಪಾಲನೆ ವಿಭಾಗ ಹೆಸ್ಕಾಂ ಗದಗ ದೂರವಾಣಿ ಸಂಖ್ಯೆ 08372-236130 ಸಂಪರ್ಕಿಸಬಹುದಾಗಿದೆ.