ಗದಗ ಅಗಸ್ಟ ೨೪: ಅಗಸ್ಟ್ ೨೯ ರಂದು ಮೇಜರ್ ಧ್ಯಾನ್ ಚಂದ್‌ರವರ ಹುಟ್ಟು ಹಬ್ಬದ ಪ್ರಯುಕ್ತ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಅಗಸ್ಟ ೨೯ ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಆಚರಿಸಲಾಗುವುದು.ಈ ಹಿನ್ನೆಲೆಯಲ್ಲಿ ಅಗಸ್ಟ ೨೫ ರಂದು ಸೈಕ್ಲಿಂಗ್ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರಿಗಾಗಿ ಸೈಕಲ್ ಜಾಥಾವನ್ನು ಬೆಳಿಗ್ಗೆ ೭-೦೦ ಗಂಟೆಗೆ ಆಯೋಜಿಸಲಾಗಿದೆ. ಸೈಕಲ್ ಜಾಥಾ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭವಾಗಿ ಭೂಮರಡ್ಡಿ ಸರ್ಕಲ್-ಹಳೇ ಡಿ.ಸಿ. ಆಫೀಸ್- ಬೀಷ್ಮ ಕೆರೆ-ಮುಳಗುಂದ ನಾಕಾ-ಜಿಲ್ಲಾಡಳಿತ ಭವನದಲ್ಲಿ ಮುಕ್ತಾಯವಾಗಿ, ಮರಳಿ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಲಿದೆ. ಆಸಕ್ತ ಸೈಕ್ಲಿಂಗ್ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಸೈಕ್ಲಿಂಗ್ ಜಾಥಾದಲ್ಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಾರ್ಯಾಲಯ, ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣ, ಗದಗ ದೂರವಾಣಿ ೭೨೦೪೧೧೪೫೨೧ ಗೆ ಸಂಪರ್ಕಿಸಲು ಸಹಾಯಕ ನಿರ್ದೇಶಕರಾದ ಡಾ: ಶರಣು ಗೋಗೇರಿ ತಿಳಿಸಿದ್ದಾರೆ.
Gadi Kannadiga > State > ರಾಷ್ಟ್ರೀಯ ಕ್ರೀಡಾ ದಿನಾಚರಣೆ ನಿಮಿತ್ಯ ಸೈಕಲ್ ಜಾಥಾ