This is the title of the web page
This is the title of the web page

Please assign a menu to the primary menu location under menu

State

ಡಿ.೦೩ ಹೊನ್ನ ಹೊಸಪೇಟೆ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ.


ರಾಯಚೂರು: ಡಿ,೦೨: ತಾಲೂಕಿನ ಹೊನ್ನ ಹೊಸಪೇಟೆ ಗ್ರಾಮದ ಆರಾಧ್ಯದೈವ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಡಿ.೦೩ ರಂದು ಸಂಜೆ ೫ ಗಂಟೆಗೆ ಉಚ್ಛಾಯ ಮಹೋತ್ಸವ ಅದ್ದೂರಿಯಾಗಿ ಜರುಗಲಿದೆ. ಅಂದು ಬೆಳಗ್ಗೆ ದೇವರಿಗೆ ರುದ್ರಾಭಿಷೇಕ ಪೂಜೆ, ಬಿಲ್ವಾರ್ಚನೆ, ಮಹಾಮಂಗಳಾರತಿ ಜರುಗಲಿದೆ. ಬೆಳಗಿನ ಜಾವ ೪ ಗಂಟೆಗೆ ಗ್ರಾಮದ ಕೆಂಪೆನ ಮಠದಿಂದ ಹೂವಿನ ಪೂಜೆ ನಂತರ ೯ ಗಂಟೆಗೆ ಶ್ರೀ ಬಸವೇಶ್ವರ ಉತ್ಸವ ಮೂರ್ತಿ ಪಲ್ಲಕ್ಕಿಸೇವೆ ಪುರವಂತಿಕೆ, ನಂದಿಕೋಲು ಸೇವೆ ಜರುಗುವುದು ಸಂಜೆ ೫ : ೩೦ ಗಂಟೆಗೆ ಉಚ್ಛಾಯ ಮಹೋತ್ಸವ ಜರುಗುವುದು ಅಂದು ರಾತ್ರಿ ಶ್ರೀ ಬಸವೇಶ್ವರ ನವ ತಾರುಣ್ಯ ನಾಟ್ಯ ಸಂಘ ನೇತೃತ್ವದಲ್ಲಿ ರಾತ್ರಿ ೧೦:೩೦ ಕ್ಕೆ “ಸಿಡಿದೆದ್ದ ಮಿಡಿನಾಗರ” ಅರ್ಥಾತ್ “ಸೆಡಿಟ್ಟ ಸರ್ಪ” ಎಂಬ ಸುಂದರ ಸಾಮಾಜಿಕ ನಾಟಕ ಗ್ರಾಮದ ಹೊರಗಿನಮನೆ ಶರಣಪ್ಪಗೌಡ ಜಮೀ£ನಲ್ಲಿ ಜರುಗುವುದು.
ಡಿ.೪ ರಂದು ಸಂಜೆ ೦೩ ಗಂಟೆಗೆ ಆರಾಧ್ಯ ದೈವ ಬಸವೇಶ್ವರ ಅನುಗ್ರಹದಂತೆ ಪೂಜ್ಯ ವಿರುಪಾಕ್ಷಯ್ಯ ತಾತನವರ ಕೃಪಾರ್ಶಿವಾದದಂತೆ ಧ್ವಜಾರೋಹಣ ನೇರವೇರುವುದು ನಂತರ ೦೪ ಗಂಟೆಗೆ ಶ್ರೀ ಬಸವೇಶ್ವರ ದೇವಸ್ಥಾನದಿಂದ ಪೂರ್ವದ ಸಿಹಿ£Ãರು ಬಾವಿವರೆಗೆ ಪಲ್ಲಕ್ಕಿ ಉತ್ಸವ, ಪುರವಂತಿಕೆ, ನಂದಿಕೋಲು ಸೇವೆ ಜರುಗುವುದು ಸಕಲ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಧಾನ ಆರ್ಚಕರಾದ ಮಲ್ಲಯ್ಯ ಸ್ವಾಮಿ ಹಾಗೂ ಶ್ರೀ ಬಸವೇಶ್ವರ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply