This is the title of the web page
This is the title of the web page

Please assign a menu to the primary menu location under menu

Local News

ಹಂದಿಗಳ ಮಂಗಗಳ ಕಾಟ ನಿಯಂತ್ರಿಸಿ :ಡಿ.ಎಸ್. ಮಾನೆ


ಯಮಕನಮರಡಿ:- ಹಿಡಕಲ್ ಡ್ಯಾಮವು ಕರ್ನಾಟಕ £Ãರಾವರಿ £ಗಮದ ಅಧೀನದಲ್ಲಿರುವುದರಿಂದ ಹೊಸಪೇಟ ಗ್ರಾ.ಪಂ ವತಿಯಿಂದ ಅಭಿವೃದ್ದಿ ಕಾಮಗಾರಿಯನ್ನು ಮಾಡಿ ಅನುಷ್ಠಾನಗೊಳಿಸಲು ತೊಂದರೆಯಾಗುತ್ತಿದ್ದು, ಹಿಡಕಲ್ ಡ್ಯಾಮ ಕಾಲೋ£ಗಳಲ್ಲಿ ಹಂದಿಗಳ ಮಂಗಗಳ ಕಾಟವು ವಿಪರೀತವಾಗಿ ಹೆಚ್ಚಾಗಿದ್ದು, ಮಕ್ಕಳು ಹೊರಗೆ ಆಟ ಆಡಲು ಬರಲು ಭಯ ಪಡುತ್ತಿದ್ದಾರೆ ಎಂದು £ವೃತ್ತ ಶಿಕ್ಷಕ ಡಿ.ಎಸ್. ಮಾನೆ ಹೇಳಿದರು.
ಅವರು ಶುಕ್ರವಾರ ದಿ. ೦೯ ರಂದು ಹೊಸಪೇಟ ಗ್ರಾ.ಪಂ. ವ್ಯಾಪ್ತಿಗೆ ಬರುವ ಹಿಡಕಲ್ ಡ್ಯಾಮಿನಲ್ಲಿ ವಾರ್ಡಸಭೆಯಲ್ಲಿ ಮಾತನಾಡಿದರು.
ಹಿರಿಯ ಸಾಹಿತಿ ಕಾ.ಹೂ. ಶಿಂದೆ ಮಾತನಾಡಿ ನಾಗರಿಕ ಪ್ರಜ್ಞೆ, ಸೇವಾ ಮನೋಭಾವನೆ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ £ಸ್ವಾರ್ಥದಿಂದ ಕೆಲಸ ಮಾಡಬೇಕೆಂದು ಹೇಳಿದರು. ಮಹಾತ್ಮ ಗಾಂದೀಜಿಯವರು ಗ್ರಾಮ ಸ್ವರಾಜ್ಯ ಕಲ್ಪನೆಯನ್ನು ಮೊಟ್ಟಮೊದಲು ತಂದು ಕೊಟ್ಟಿದ್ದಾರೆ. ಸ್ವಚ್ಚತೆ ಆದ್ಯತೆ £Ãಡಿ ಗ್ರಾಮವನ್ನು ಸುಂದರವನ್ನಾಗಿ ಮಾಡಲು ಎಲ್ಲರೂ ಸಹಾಯ ಮಾಡಬೇಕೆಂದು ಹೇಳಿದರು. ಹೊಸಪೇಟ ಗ್ರಾ.ಪಂ. ಪಿಡಿಓ ಎಮ್.ಬಿ.ಪೂಜೇರಿ ಮಾತನಾಡಿ ಗ್ರಾಮಗಳ ವಾಸ್ತು ಸ್ಥಿತಿ ವಿಶ್ಲೇಷನೆ ಮಾಡುವುದರ ಮೂಲಕ ಕ್ರೀಯಾಯೋಜನೆಯನ್ನು ತಯಾರಿಸಿ ರಸ್ತೆ ಒಳಚರಂಡಿ £ರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಗ್ರಾಮದ ಯೋಜನಾ ಸಮೀತಿಯನ್ನು ರಚಿಸಲಾಗಿದೆ. ಗ್ರಾಮಸ್ಥರು ಈ ಯೋಜನಾ ಸದಸ್ಯರ ಮೂಲಕ ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಿದರ ಬಗೆಹರಿಸಿಕೊಳ್ಳಬೇಕೆಂದು ಪಿಡಿಓ ಎಮ್.ಬಿ.ಪೂಜೇರಿ ಹೇಳಿದರು.
ವಾರ್ಡಸಭೆ ಅಧ್ಯಕ್ಷತೆಯನ್ನು ಹಿಡಕಲ್ ಡ್ಯಾಮ ಗ್ರಾಮದ ಯೋಜನಾ ಸಮಿತಿ ಅಧ್ಯಕ್ಷರಾದ ಸದಾನಂದ ಮಾಳ್ಯಾಗೋಳ ವಹಿಸಿದ್ದರು. ಸಭೆಯಲ್ಲಿ ಯೋಜನಾ ಸಮಿತಿ ಸದಸ್ಯರಾದ ಎನ್.ಆರ್. ಖನಗಾಂವಿ, ಸುವರ್ಣಾ ಮಗದುಮ್ಮ, ಅಶ್ವಿ£ ಅಜಿತ ಕಾಂಬಳೆ, ಆರತಿ ದೊಂಡಿಬಾ ಪವಾರ, ನಂದಕೀಶೋರ ಆಜರೇಕರ, ಸುರೇಶ ಪವಾರ, ಸುಮಿತ್ರಾ ಹಾರೂಗೇರಿ, ವ್ಹಿ.ಆರ್.ಪಿ ರಿಜ್ವಾನಾ ಅಥಣಿ ಅಂಗನವಾಡಿ ಕಾರ್ಯಕರ್ತರಾದ ಕಮಲಾ ಕಬ್ಬಲಗಿ, ರಾಜಶ್ರೀ ಸಿಡ್ಲಾಳ, ಮಮತಾಜ ಬಡೇಗರ, ಆಶಾ ಕಾರ್ಯಕರ್ತರಾದ ಸಾವಿತ್ರಿ ಚಂದಪ್ಪಗೋಳ, ಮತ್ತು ಗ್ರಾಮಸ್ಥರಾದ ವಿಜಯ ಮೇಲಗೇರಿ, ರಮಾಕಾಂತ ಶಿಂದೆ, ಅಜೀತ ಕಾಂಬಳೆ ಗ್ರಾ.ಪಂ. ಸಿಬ್ಬಂದಿಗಳಾದ ಸಾಗರ ಮಗದುಮ್ಮ, ವಿಶಾಲ ಮಾನೆ ಮತ್ತು ಗ್ರಾಮಸ್ಥರು ಇದ್ದರು. ಹಿಡಕಲ್ ಡ್ಯಾಮ ಗ್ರಾಮದ ಶಾಲಾ ಕಾಲೇಜುಗಳು ದೇವಸ್ಥಾನಗಳ ಮಸೀದಿ ಅಂಗನವಾಡಿ ಕೇಂದ್ರಗಳ ಮಾಹಿತಿಯನ್ನು ರಂಗೋಲಿಯಲ್ಲಿ ರಚನೆಮಾಡಲಾಗಿತ್ತು.


Gadi Kannadiga

Leave a Reply