ಬೆಳಗಾವಿ : ಗೋಕಾಕ ತಾಲೂಕಿನ ಅಂಕಲಗಿ ಪೊಲೀಸ್ ಠಾಣೆಯ ಪಿ.ಎಸ್.ಆಯ್. ಅವರು ದಲಿತ ಸಮಾಜದ ಮುಖಂಡನ ಮೇಲೆ ಉದ್ದೇಶ ಪೂರ್ವಕವಾಗಿ ಮತ್ತು ಮಾನಸಿಕವಾಗಿ ತೊಂದರೆಯನ್ನು ಕೊಡಲು 307 ರ ಅಡಿಯಲ್ಲಿ ದಾಖಲಿಸಿಕೊಂಡಿರುವ ಪ್ರಕರಣವನ್ನು ಹಿಪ್ಪಂಡೆಯುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ಮಾದಿಗ ದಂಡೋರ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಗೋಕಾಕ ತಾಲೂಕಿನ ಅಂಕಲಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವಂತಹ ಕುಂದರಗಿ ಗ್ರಾಮದ ಜಮೀನಿನ ವಿಷಯಕ್ಕೆ ಸಂಬಂದಿಸಿದಂತೆ ಪರಿಶಿಷ್ಟ ಜಾತಿಯ ಸಮಾಜ ಹಾಗೂ ಅದೇ ಗ್ರಾಮದ ದೇಸಾಯಿ ಎಂಬುವರ ನಡುವೆ ಆದ ವಿವಾದಕ್ಕೆ ಸಂಬಂಧ ಪಟ್ಟಂತೆ ಪರಿಶಿಷ್ಟ ಜಾತಿಯ ಜನಾಂಗದ ಮುಖಂಡರಾದ ಕರೆಪ್ಪಾ ಗುಂಡೆನ್ನವರ ಇವರ ಮೇಲೆ ಪೊಲೀಸ್ ಇಲಾಖೆಯವರು ಸುಳ್ಳು FIR ವನ್ನು ದಾಖಲಿಸಿದ್ದು ಇರುತ್ತದೆ. ಇದರಿಂದ ನಮ್ಮ ಸಮಾಜಕ್ಕೆ ಹಾಗೂ ಕರೆಪ್ಪ ಗುಂಡಪ್ಪನವರ ಇವರಿಗೆ ಮಾನಸಿಕವಾಗಿ ನೋವು ಉಂಟಾಗಿದೆ. ಆದ್ದರಿಂದ ಅಂಕಲಗಿ ಪೊಲೀಸ್ ಠಾಣೆಯ ಪಿ.ಎಸ್.ಆಯ್. ಅವರಿಗೆ ಸೂಚನೆಯನ್ನು ನೀಡಿ FIR ವನ್ನು ಹಿಂಪಡೆಯಲು ಸೂಚನೆಯನ್ನು ನೀಡಬೇಕು.
ಅದರಂತೆ ಕುಂದರಗಿ ಗ್ರಾಮದ ದೇಸಾಯಿ ಕುಟುಂಬದರಿಂದ ಉದ್ದೇಶ ಪೂರ್ವಕವಾಗಿ ಪರಿಶಿಷ್ಟ ಜಾತಿಯ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿಯ ಜನರ ಜಮೀನುಗಳ ವಿಷಯಕ್ಕೆ ಸಂಬಂದಪಟ್ಟಂತೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಹಾಗೂ ಸೂಕ್ತ ರಕ್ಷಣೆಯನ್ನು ನೀಡಲು ತಾವು ಪೊಲೀಸ್ ಇಲಾಖೆಯವರಿಗೆ ತಾವು ಆದೇಶ ಮಾಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಉಪಾಧ್ಯಕ್ಷ ಯಲ್ಲಪ್ಪ ಹುದಲಿ, ಮುಖಂಡ ಬಾಬು ಪೂಜಾರಿ, ಸಿದ್ದಪ್ಪ ಹರಿಜನ, ಮಾರುತಿ ಕೇಳಗೇರಿ, ಅನಿಲ ಮಾದರ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.