ಕೊಪ್ಪಳ ಏಪ್ರಿಲ್ ೨೬ : ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿ ಏಪ್ರಿಲ್ ೨೫ರಂದು ಮತದಾನದ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.
ಜಾಗೃತಿ ಜಾಥಾ: ಮತದಾನ ಜಾಗೃತಿ ಫಲಕಗಳನ್ನು ಹಿಡಿದು ಜಾಗೃತಿ ಗೀತೆಗಳೊಂದಿಗೆ ವಾರದ ಸಂತೆ ಹಾದಿಯಲ್ಲಿ ಹಾಗೂ ಗ್ರಾಮದ ಬಸ್ ನಿಲ್ದಾಣ, ಪ್ರಮುಖ ವೃತ್ತಗಳಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಮತದಾನ ಜಾಗೃತಿ ಜಾಥಾ ನಡೆಸಲಾಯಿತು. ಬಳಿಕ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ನೃತ್ಯದ ಮೂಲಕ ಲಿಂಗತ್ವ ಅಲ್ಪಸಂಖ್ಯಾತರಿಂದ ಜಾಗೃತಿ: ಜಾಥಾದಲ್ಲಿ ಮೂವರು ಲಿಂಗತ್ವ ಅಲ್ಪಸಂಖ್ಯಾತರು ಎಲ್ಲರಂತೆ ಜಾಗೃತಿ ಫಲಕ ಹಿಡಿದು ಪಾಲ್ಗೊಂಡಿದ್ದರು. ವಾರದ ಸಂತೆಯಲ್ಲಿ ಮತದಾನ ಜಾಗೃತಿ ಗೀತೆಗಳಿಗೆ ಲಿಂಗತ್ವ ಅಲ್ಪಸಂಖ್ಯಾತರು ನೃತ್ಯ ಮಾಡಿ ಸಂತೆಗೆ ಬಂದ ಜನರಿಗೆ ಮತದಾನದ ಅರಿವು ಮೂಡಿಸಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಇಂದಿರಾ ಅವರು ಮಾತನಾಡಿ, ಮೇ ೧೦ ರಂದು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ಶೇ ೧೦೦ ರಷ್ಟು ಮತದಾನವಾಗಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ ಕಾರ್ಯದರ್ಶಿಗಳು, ತಾಲೂಕು ಐಇಸಿ ಸಂಯೋಜಕರು, ಗ್ರಾಪಂ ಎಲ್ಲ ಸಿಬ್ಬಂದಿಗಳು, ಎನ್.ಆರ್.ಎಲ್.ಎಂ ಸಂಜೀವಿನಿ ಯೋಜನೆ ಎಂ.ಬಿ.ಕೆ., ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.
Gadi Kannadiga > State > ವಾರದ ಸಂತೆಯಲ್ಲಿ ಮತದಾನ ಜಾಗೃತಿ ಗೀತೆಗಳಿಗೆ ಲಿಂಗತ್ವ ಅಲ್ಪಸಂಖ್ಯಾತರ ನೃತ್ಯ ಬಸಾಪಟ್ಟಣದಲ್ಲಿ ಮತದಾನದ ಮಹತ್ವ ಸಾರಿದ ಜಾಗೃತಿ ಜಾಥಾ
ವಾರದ ಸಂತೆಯಲ್ಲಿ ಮತದಾನ ಜಾಗೃತಿ ಗೀತೆಗಳಿಗೆ ಲಿಂಗತ್ವ ಅಲ್ಪಸಂಖ್ಯಾತರ ನೃತ್ಯ ಬಸಾಪಟ್ಟಣದಲ್ಲಿ ಮತದಾನದ ಮಹತ್ವ ಸಾರಿದ ಜಾಗೃತಿ ಜಾಥಾ
Suresh26/04/2023
posted on

More important news
ಪ್ರತಿಬಂಧಕಾಜ್ಞೆ ಜಾರಿ
08/06/2023