ಕೊಪ್ಪಳ:- ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6 ಮತ್ತು ಕಾಮಿಡಿ ಕಿಲಾಡಿಗಳು ಸೀಸನ್ 4 ರ ಮಹಾಆಡಿಷನ್ಸ್ ಕುರಿತಾಗಿ ಸತತ ಮೂರು ವರ್ಷಗಳಿಂದ ಕನ್ನಡ ಕಿರುತೆರೆಯನ್ನು ಆಳುತ್ತಾ ನಂಬರ್ 1 ಸ್ಥಾನದಲ್ಲೇ ಮುನ್ನುಗ್ಗುತ್ತಿರುವ ಜೀ ಕನ್ನಡ ವಾಹಿನಿ ಅನೇಕ ಯಶಸ್ವಿ ಕಾರ್ಯಕ್ರಮಗಳನ್ನು ಕನ್ನಡಿಗರಿಗೆ ನೀಡುತ್ತಿದೆ. 5 ಸೀಸನ್ ಗಳನ್ನು ಯಶಸ್ವಿಯಾಗಿ ಪೂರೈಸಿ ಇಡೀ ಕರ್ನಾಟಕವೇ ಹೆಜ್ಜೆ ಹಾಕುವಂತೆ ಮಾಡಿದ ಅತಿ ದೊಡ್ಡ ಡ್ಯಾನ್ಸ್ ವೇದಿಕೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಇದೀಗ ಮತ್ತೊಂದು ಸೀಸನ್ ಗೆ ಸಜ್ಜಾಗಿದ್ದು ಕುಣಿಯೋ ಕಾಲುಗಳಿಗೆ ಗೆಜ್ಜೆ ಕಟ್ಟಲಿದೆ. ಅಷ್ಟೇ ಅಲ್ಲದೆ ನಕ್ಕು ನಗಿಸೋ ಕಲಾವಿದರ ನೆಚ್ಚಿನ ವೇದಿಕೆ ಕಾಮಿಡಿ ಕಿಲಾಡಿಗಳು ಸಹ ಮತ್ತೊಂದು ಸೀಸನ್ ಗೆ ಶುರುಮಾಡುತ್ತಿದೆ. ಈ ಎರಡೂ ಕಾರ್ಯಕ್ರಮಗಳ ಆಡಿಷನ್ ಪ್ರಕ್ರಿಯೆ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಆಯೋಜಿಸಲಾಗಿದೆ . ಇದರ ಭಾಗವಾಗಿ ಮಾರ್ಚ್ 11 ಶುಕ್ರವಾರದಂದು ಕೊಪ್ಪಳದ ಗವಿಮಠ ರಸ್ತೆ , ಪಾಂಡುರಂಗ ದೇವಸ್ಥಾನದ ಹತ್ತಿರ ಇರುವ ಮಾಸ್ತಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಆಡಿಷನ್ ನಡೆಯಲಿದೆ. ಬೆಳಿಗ್ಗೆ 9ಗಂಟೆಗೆ ಆರಂಭವಾಗಲಿದೆ. ಆಸಕ್ತ ಡ್ಯಾನ್ಸ್ ಹಾಗು ಕಾಮಿಡಿ ಮಾಡುವ ಕಿಲಾಡಿಗಳು ಅಪರೂಪದ ಈ ಅವಕಾಶದ ಸದುಪಯೋಗ ಪಡೆದುಕೊಳ್ಳಿ. ಆಡಿಷನ್ಸ್ ನಲ್ಲಿ ಭಾಗವಹಿಸಲು ಬರುವವರು ಪಾಸ್ಪೋರ್ಟ್ ಸೈಜ್ ಫೋಟೋ ಹಾಗು ಅಡ್ರೆಸ್ ಪ್ರೂಫ್ ಜೆರಾಕ್ಸ್ ತರುವುದನ್ನು ಮರೆಯಬೇಡಿ.ಈ ಎರಡೂ ಕಾರ್ಯಕ್ರಮಗಳ ಆಡಿಷನ್ಸ್ ನಲ್ಲಿ ಭಾಗವಹಿಸಲು ಕೆಲವು ಮಾನದಂಡಗಳಿದ್ದು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಕ್ಕೆ ಆಡಿಷನ್ ನೀಡುವವರ ವಯಸ್ಸು 6 ರಿಂದ 60 ವರ್ಷದೊಳಗಿರಬೇಕು ಹಾಗು ಕಾಮಿಡಿ ಕಿಲಾಡಿಗಳು ಆಡಿಷನ್ ನಲ್ಲಿ ಭಾಗವಹಿಸುವವರ ವಯಸ್ಸು 16 ರಿಂದ 60 ವರ್ಷದೊಳಗಿರಬೇಕು. ನಿಮ್ಮ ಪ್ರತಿಭೆಯನ್ನು ಇಡೀ ಜಗತ್ತಿಗೆ ಪರಿಚಯಿಸುವ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಈ ಆಡಿಷನ್ ಗಳಲ್ಲಿ ಭಾಗವಹಿಸಲು ಯಾವುದೇ ರೀತಿಯ ಶುಲ್ಕ ಕಟ್ಟುವಂತಿಲ್ಲ. ವಾಹಿನಿಯ ಹೆಸರಿನಲ್ಲಿ ಹಣ ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಕೈಗೊಳ್ಳಲಾಗುವುದು ಎಂದು ಜೀ ಕನ್ನಡ ವಾಹಿನಿ ಪ್ರಕಟಣೆಯಲ್ಲಿ ತಿಳಿಸಿದೆ.
Gadi Kannadiga > State > ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6 ಮತ್ತು ಕಾಮಿಡಿ ಕಿಲಾಡಿಗಳು ಸೀಸನ್ 4 ರ ಮಹಾಆಡಿಷನ್ಸ್
ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6 ಮತ್ತು ಕಾಮಿಡಿ ಕಿಲಾಡಿಗಳು ಸೀಸನ್ 4 ರ ಮಹಾಆಡಿಷನ್ಸ್
khushihost09/03/2022
posted on
More important news
ಚುಟುಕು ಚೌಪದಿ ಕೃತಿಗಳ ಬಿಡುಗಡೆ
23/05/2022