This is the title of the web page
This is the title of the web page

Please assign a menu to the primary menu location under menu

Local News

ಅಪಾಯಕಾರಿ ರಾಸಾಯನಿಕ ಸಾಗಾಣಿಕೆ ಅಪಘಾತ ನಿರ್ವಹಣಾ ಕಾರ್ಯಗಾರ ತುರ್ತು ಪರಿಸ್ಥಿತಿ ನಿರ್ವಹಣೆಯಲ್ಲಿ ಮುನ್ನೆಚ್ಚರಿಕೆ ಇರಲಿ: ಪರೇಶ್ ಪ್ರಜಾಪತಿ


ಬೆಳಗಾವಿ, ಆ.೨೪ : ಜಿಲ್ಲೆಯ ರಸ್ತೆಗಳ ಮೂಲಕ ಪೆಟ್ರೋಲ್, ಡೀಸೆಲ್, ಅನೀಲ ಸೇರಿದಂತೆ ಬೆಂಜೀಲ್ ಅಪಾಯಕಾರಿಯಾದ ರಾಸಾಯನಿಕವನ್ನು ಟ್ಯಾಂಕರ್ ಗಳ ಮೂಲಕ ರಸ್ತೆ ಮಾರ್ಗವಾಗಿ ಇತರೆ ರಾಜ್ಯಗಳಿಗೆ ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಒಂದು ವೇಳೆ ಅಪಘಾತಗಳು ಸಂಭವಿಸಿದರೆ ತಕ್ಷಣ ಕಂಪನಿಯ ಸಹಾಯವಾಣಿಗೆ ಕರೆ ಮಾಡಬೇಕು ಎಂದು ಎಂ.ಆರ್.ಪಿ.ಎಲ್ ಸಂಸ್ಥೆಯ ಮಾರ್ಕೆಟಿಂಗ್ ಸೀನಿಯರ್ ಮ್ಯಾನೇಜರ್ ಪರೇಶ್ ಪ್ರಜಾಪತಿ ಅವರು ತಿಳಿಸಿದರು.
ಬೆಳಗಾವಿಯ ಹಿಂಡಾಲ್ಕೋ ಇಂಡಸ್ಟ್ರಿ ಲಿಮಿಟೆಡ್ ಕಂಪನಿಯ ಸಭಾ ಭವನದಲ್ಲಿ ಬುಧವಾರ (ಆ.೨೪) ನಡೆದ ಅಪಾಯಕಾರಿ ರಾಸಾಯನಿಕ (ಬೆಂಜೀನ್) ಸಾಗಾಣಿಕೆ ಅಪಘಾತ ನಿರ್ವಹಣೆ ಕುರಿತು ಕಾರ್ಯಗಾರದಲ್ಲಿ ಮಾಹಿತಿ ನೀಡಿದರು.ಇತರೆ ಅಪಾಯಕಾರಿ ರಾಸಾಯನಿಕಗಳಲ್ಲಿ ಬೆಂಜೀನ್ ಕೂಡ ಒಂದು. ಉದಾಹರಣೆಗೆ ಫರ್ನೀಚರ್ ಪೇಂಟ್, ಡಿಟರ್ಜೆಂಟ್, ನೈಲಾನ್, ಟೈರ್ ರಬ್ಬರ್ ಇನ್ನಿತರ ವಸ್ತುಗಳ ತಯಾರಿಕೆಯಲ್ಲಿ ಬೆಂಜೀನ್ ರಾಸಾಯನಿಕ ಬಳಸಲಾಗುತ್ತದೆ ಹಾಗಾಗಿ ಇದರ ಉತ್ಪಾದನೆ ನಿರಂತರ ಚಾಲನೆಯಲ್ಲಿದೆ ಎಂದು ಹೇಳಿದರು. Pಟಚಿಥಿ Sಣoಡಿe ನಲ್ಲಿ Wiseಡಿ ಚಿಠಿಠಿ ಡೌನ್ಲೋಡ್ ಮಾಡಿಕೊಂಡು ಬೆಂಜೀನ್ ರಾಸಾಯನಿಕದ ಕುರಿತು ಸಮಗ್ರ ಮಾಹಿತಿ ಪಡೆಯಬಹುದು. ಬೆಂಜೀನ್ ಸಾಗಣಿಕೆಯಲ್ಲಿ ಅಪಘಾತಗಳು ಸಂಭವಿಸಿದಲ್ಲಿ ನಿರ್ವಹಣೆಗೆ ಇದರ ಮಾಹಿತಿ ಉಪಯೋಗವಾಗಲಿದೆ ಎಂದು ಮಾಹಿತಿ ನೀಡಿದರು.
ತುರ್ತು ಪರಿಸ್ಥಿತಿ ನಿರ್ವಹಣೆ
ಈ ಸಂಧರ್ಬದಲ್ಲಿ ಮಾತನಾಡಿದ ಕಾರ್ಖಾನೆಗಳ ಉಪ ನಿರ್ದೇಶಕರಾದ ವೆಂಕಟೇಶ ರಾಠೋಡ ಅವರು ಜಿಲ್ಲೆಯ ಹೈವೇ ಮೂಲಕ ಬೆಂಜೀನ್ ಸಾಕಾಣಿಕೆಯ ರಾಸಾಯನಿಕ ಟ್ಯಾಂಕರ್ ಅಪಘಾತವಾದಾಗ ಸಹಾಯವಾಣಿಗೆ ಕರೆ ಮಾಡಿದ ನಂತರ ಕಂಪನಿಯ ತುರ್ತು ಪರಿಸ್ಥಿತಿ ನಿರ್ವಹಣಾ ತಂಡ ಬರುವುದರಲ್ಲಿ ತಡವಾಗಬಹುದು ಅದಕ್ಕೆ ತಕ್ಷಣ ಬೇಕಾಗುವ ರಕ್ಷಣಾತ್ಮಕ ಸಾಮಗ್ರಿಗಳನ್ನು ಟ್ಯಾಂಕರ್ ಗಳಲ್ಲಿ ಇರಿಸಬೇಕು ಇದರಿಂದ ಸ್ಥಳೀಯ ರಕ್ಷಣಾ ಇಲಾಖೆಗಳು ತುರ್ತು ಪರಿಸ್ಥಿತಿ ನಿರ್ವಹಣೆ ಮಾಡಬಹುದು ಎಂದು ಸಲಹೆ ನೀಡಿದರು. ಕಳೆದ ಬಾರಿ ಯಲ್ಲಾಪುರದಲ್ಲಿ ಬೆಂಜೀನ್ ರಾಸಾಯನಿಕ ಸಾಗಾಣಿಕೆ ಟ್ಯಾಂಕರ್ ಅಪಘಾತವಾದಾಗಿನಿಂದ ವಾಹನ ಚಾಲಕರ ಹಿನ್ನಲೆ, ಚಾಲನೆ ವೇಗ ಸೇರಿದಂತೆ ವಾಹನ ಚಾಲಕರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಚಾಲಕರಿಗೆ ಅವರ ಮಾತೃಭಾಷೆಯಲ್ಲಿ ತರಬೇತಿ ಜೊತೆಗೆ ರಾತ್ರಿ ವೇಳೆ ವಾಹನ ಚಾಲನೆ ಮಾಡದಂತೆ ಸೂಚಿಸಲಾಗಿದೆ ಎಂದು ಪರೇಶ್ ಪ್ರಜಾಪತಿ ಅವರು ತಿಳಿಸಿದರು.
ಕಟ್ಟುನಿಟ್ಟಿನ ಸೂಚನೆ ನೀಡಲು ಸಲಹೆ:
ರಾತ್ರಿ ವಾಹನ ಚಾಲನೆ ಮಾಡದಂತೆ ಸೂಚನೆ ಇದ್ದರೂ ಕೆಲವೆಡೆ ರಾತ್ರಿ ವೇಳೆ ಟ್ಯಾಂಕರ್ ಗಳ ಹರಿದಾಡುತ್ತಿವೆ.
ವಾಹನಗಳ ನಿಯಂತ್ರಣ ತಪ್ಪಿ, ರಾತ್ರಿ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದ್ದು, ರಾತ್ರಿ ೧೦ ಗಂಟೆಯ ನಂತರ ವಾಹನ ಚಾಲನೆ ಮಾಡದಂತೆ ಕಂಪನಿಯಿಂದ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಒಂದುವೇಳೆ ರಾತ್ರಿ ವಾಹನ ಚಾಲನೆ ಮಾಡಿದ ಚಾಲಕರಿಗೆ ಕಂಪನಿಯ ನಿಯಮಾನುಸಾರ ದಂಡ ಹಾಗೂ ಇನ್ನಿತರ ಕ್ರಮ ಕೈಗೊಳ್ಳಬೇಕು.
ಕಂಪನಿಯಿಂದ ಜಿಪಿಎಸ್ ಅಳವಡಿಸಿದ ಟ್ಯಾಂಕರ್ ಗಳನ್ನು ೨೪ ಗಂಟೆಗಳ ಕಾಲ ಟ್ರ‍್ಯಾಕ್ ಮಾಡಿ ಅವುಗಳ ಡೇಟಾ ಸಂಗ್ರಹಿಸಬೇಕು. ತಮ್ಮ ಕಂಪನಿಗಳ ವ್ಯವಹಾರಗಳಲ್ಲಿ ಸೇಫ್ಟಿಗೆ ಮೊದಲ ಆದ್ಯತೆ ನೀಡಬೇಕು. ಯಾವುದೇ ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಟ್ಯಾಂಕರ್ ಲೀಕ್ ಹಾಗೂ ವಾಹನಗಳ ನಿರಂತರ ಪರಿಶೀಲನೆ ಮಾಡಿ ರಸ್ತೆಗೆ ಬಿಡಬೇಕು ಎಂದು ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಅವರು ಸಲಹೆ ನೀಡಿದರು.
ಜಿಲ್ಲಾ ಪರಿಸರ ಅಧಿಕಾರಿ ಜಗದೀಶ್, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಶಶಿಧರ ನಿಲಗಾರ, ರಸ್ತೆ ಸಾರಿಗೆ ಅಧಿಕಾರಿ ಎಸ್.ಬಿ ಮಗದುಮ್ಮ, ಎನ್.ಡಿ.ಆರ್.ಎಫ್ ಕಮಾಂಡೆಂಟ್ ಅರವಿಂದ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ಹಿಂಡಾಲ್ಕೋ ಕಂಪನಿಯ ಸಿಬ್ಬಂದಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.


Gadi Kannadiga

Leave a Reply