ಬೆಳಗಾವಿ, ಫೆ.೧೪ : ಜಿಲ್ಲೆಯಲ್ಲಿ ಸರ್ಕಾರಿ ಕಟ್ಟಡಗಳನ್ನು ಜನೋಪಯೋಗಿಯಾಗಿ ಹೇಗೆನಿರ್ಮಿಸಬೇಕು ಎಂಬುದನ್ನು ತೋರಿಸಿಕೊಟ್ಟ ನಿಕಟಪೂರ್ವ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ.ದರ್ಶನ್ ಅವರು, ಶಾಲಾ ಕಟ್ಟಗಳ ನಿರ್ಮಾಣ, ಶಾಲಾ ಕಾಂಪೌಂಡ್, ಶಾಲಾ ಶೌಚಾಲಯಗಳ ಸುಧಾರಣೆ, ನರೇಗಾ ಯೋಜನೆಯಡಿ ಕೆರೆ ತುಂಬಿಸುವ ಕಾರ್ಯ ಅಂಗನವಾಡಿ ಸುಧಾರಣೆ ಹೀಗೆ ಹತ್ತು ಹಲವು ಕೆಲಸಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಬೆಳಗಾವಿ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಶ್ಲಾಘಿಸಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ(ಫೆ.೧೩) ನಡೆದ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ ನಿಕಟಪೂರ್ವ ಸಿಇಓ ದರ್ಶನ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸತತವಾಗಿ ಮೂರು ವರ್ಷಗಳ ಕಾಲ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ದರ್ಶನ್ ಅವರು, ತಮ್ಮದೇ ಆದ ಶೈಲಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಹಾಗೂ ವಿಶಿಷ್ಟ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಸದಾ ಜನಪರ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದ ಅವರು, ಒಟ್ಟಾರೆ ಜಿಲ್ಲೆಯ ಪ್ರಗತಿಯ ನಿಟ್ಟಿನಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ.
ಅವರ ಜೊತೆಯಲ್ಲಿ ಕಳೆದ ದಿನಗಳು ಬಹಳ ಸುಂದರವಾಗಿದ್ದವು ಎಂದು ಸ್ಮರಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಕೋವಿಡ್, ಪ್ರವಾಹ ಹಾಗೂ ಉತ್ಸವ ಮತ್ತಿತರ ಬೃಹತ್ ಕಾರ್ಯಕ್ರಮಗಳ ಸಂದರ್ಭದಲ್ಲಿ ದರ್ಶನ್ ಅವರ ಪಾತ್ರ ಬಹಳ ಮುಖ್ಯವಾಗಿತ್ತು ಎಂದು ಹೇಳಿದರು.
ನೂತನ ಸಿಇಓ ಭೋಯಾರ್ ಹರ್ಷಲ್ ಅವರು ಕೂಡ ೩ ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅವರಿಗೂ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಇದೇ ವೇಳೆ ಮಾತನಾಡಿದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಅವರು, ದರ್ಶನ್ ಅವರ ಸರಳತೆ ಹಾಗೂ ಕರ್ತವ್ಯಪ್ರಜ್ಞೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಪಂಚಾಯತಿಯ ನಿಕಟಪೂರ್ವ ಸಿಇಓ ದರ್ಶನ್ ಅವರು, ಜಲಜೀವನ್ ಮಿಶನ್ ಯೋಜನೆಯಡಿ ಜಿಲ್ಲೆಯಲ್ಲಿ ೫ ಲಕ್ಷ ಮನೆಗಳಿಗೆ ನೀರು ಒದಗಿಸಿರುವುದರಿಂದ ಮಹಿಳೆಯರಿಗೆ ಅನುಕೂಲವಾಗಿದೆ ಎಂದರು.
ನರೇಗಾ ಯೋಜನೆಯ ಅಡಿಯಲ್ಲಿ ರಸ್ತೆ, ಚರಂಡಿ, ನಿರ್ಮಾಣ ಮಾಡ್ತಿದ್ದರು; ಆದರೆ ಈಗ ಶಾಲಾ ಕಾಲೇಜುಗಳ ಕಟ್ಟಡಗಳ ಸುಧಾರಣೆ, ಕೆರೆ ತುಂಬವ ಕಾರ್ಯ, ಶೌಚಾಲಯ ನಿರ್ಮಾಣ, ಅಂಗನವಾಡಿ ಕಟ್ಟಡ ಸುಧಾರಣೆ ಮಾಡುವ ಮೂಲಕ ಬೆಳಗಾವಿ ಜಿಲ್ಲೆಯಲ್ಲಿ ರಚನಾತ್ಮಕ ಹಾಗೂ ಶಾಶ್ವತ ಕೆಲಸಗಳನ್ನು ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ನೂತನ ಸಿಇಓ ಭೋಯಾರ್ ಹರ್ಷಲ್ ಅವರನ್ನು ಸ್ವಾಗತಿಸಲಾಯಿತು. ಬೀಳ್ಕೊಡುಗೆ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ ಸೇರಿದಂತೆ ವಿವಿಧ ಇÁಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
Gadi Kannadiga > Local News > ಜಿಲ್ಲೆಯ ಅಭಿವೃದ್ಧಿಗೆ ದರ್ಶನ್ ಅವರ ಕೊಡುಗೆ ಅಪಾರ : ಜಿಲ್ಲಾಧಿಕಾರಿ ನಿಕಟಪೂರ್ವ ಸಿಇಓ ಎಚ್.ವಿ.ದರ್ಶನ್ ಅವರಿಗೆ ಬೀಳ್ಕೊಡುಗೆ-ನೂತನ ಸಿಇಓ ಭೋಯಾರ್ ಹರ್ಷಲ್ ಅವರಿಗೆ ಸ್ವಾಗತ
ಜಿಲ್ಲೆಯ ಅಭಿವೃದ್ಧಿಗೆ ದರ್ಶನ್ ಅವರ ಕೊಡುಗೆ ಅಪಾರ : ಜಿಲ್ಲಾಧಿಕಾರಿ ನಿಕಟಪೂರ್ವ ಸಿಇಓ ಎಚ್.ವಿ.ದರ್ಶನ್ ಅವರಿಗೆ ಬೀಳ್ಕೊಡುಗೆ-ನೂತನ ಸಿಇಓ ಭೋಯಾರ್ ಹರ್ಷಲ್ ಅವರಿಗೆ ಸ್ವಾಗತ
Suresh14/02/2023
posted on
