This is the title of the web page
This is the title of the web page

Please assign a menu to the primary menu location under menu

State

ದಾಸ ಸೌರಭ ಸಾಹಿತ್ಯ ವಿದ್ಯಾಲಯದ ೫ ವರ್ಷದ ಆವೃತ್ತಿ ಪೂರ್ಣ, ಶ್ರೀಶ್ರೀನಿವಾಸ ಕಲ್ಯಾಣೋತ್ಸವ


ಬಳ್ಳಾರಿ ಜ ೧೨. ಬಳ್ಳಾರಿ ಸಮೀಪದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಿಪ್ಪಗಿರಿ ಶ್ರೀ ವಿಜಯದಾಸರ ಸನ್ನಿದಾನದಲ್ಲಿ ಶ್ರೀಶ್ರೀನಿವಾಸ ಕಲ್ಯಾಣೋತ್ಸವ ಶೋಭಾ ಯಾತ್ರೆಯೊಂದಿಗೆ ಅತ್ಯಂತ ವಿಜೃಂಭಣೆಯಿಂದ ಬುಧವಾರ ನಡೆಯಿತು. ದಾಸ ಸೌರಭ ಸಾಹಿತ್ಯ ವಿದ್ಯಾಲಯದ ೫ ವರ್ಷದ ಆವೃತ್ತಿ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಸಾವಿರಾರು ಭಕ್ತರು ಸಮ್ಮುಖದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೊತ್ಸವ, ಶ್ರೀ ವಿಜಯದಾಸರ, ಶ್ರೀ ಗೋಪಾಲದಾಸರ ಹಾಗೂ ಶ್ರೀ ಮೋಹನ ದಾಸರ ಕೃತಿಗಳ ಚಿಂತನೆ, ವಿಜಯರಾಯರ ಸುಳಾದಿ ಉಗಾಭೋಗಗಳ ಅರ್ಥಾನುಸಂದಾನ, ಶ್ರೀನಿವಾಸ ದೇವರ ಭವ್ಯ ಶೋಭಾ ಯಾತ್ರೆ, ರಸಪ್ರಸ್ನೆ, ನಿಬಂಧ, ಸಾಮೋಹಿಕ ಭಜನೆ, ಕೀರ್ತನೆಗಳು, ನೃತ್ಯ ಸೇರಿದಂತೆ ವಿವಿಧ ಪಾರಾಯಣಗಳು ಸೌರಭ ದಾಸ ಸಾಹಿತ್ಯ ವಿದ್ಯಾಲಯದ ಅದ್ಯಕ್ಷರಾದ ಪಂ.ಪ್ರಮೋದ್ ಆಚಾರ್ ಸೇರಿದಂತೆ ೨೫ಕ್ಕೂ ಹೆಚ್ಚು ವಿಧ್ವಾಸರ ನೇತೃತ್ವದಲ್ಲಿ ವಿಜೃಂಭಣೆಯಿಂದ ಎಲ್ಲ ಕಾರ್ಯಕ್ರಮಗಳು ನಡೆದವು. ಕಲ್ಯಾಣೊತ್ಸವ ನಿಮಿತ್ತ ಮಂಗಳವಾರ ಸಂಜೆ ಭವ್ಯ ಶೋಭಯಾತ್ರೆ, ಭಜನೆ, ಕೊಲಾಟ, ನೃತ್ಯ ಸೇರಿದಂತೆ ವರ ಪೂಜೆ, ಹಾಗೂ ನಾನಾ ಕಡೆಯಿಂದ ಆಗಮಿಸಿದ ೨೫ ವಿಧ್ವಾಂಸರಿಗೆ ವಿಶೇಷ ಗುರು ಪೂಜೆ ಅದ್ದೂರಿಯಾಗಿ ನಡೆಯಿತು. ಬುಧವಾರ ಬೆಳಿಗ್ಗೆ ಶ್ರೀ ಕ್ಷೇತ್ರ ಸನ್ನಿದಾನದಲ್ಲಿ ಹೊಮ, ಹವನಗಳು, ಮಾಂಗಲ್ಯ ಧಾರಣೆ, ಸೇರಿದಂತೆ ಶ್ರೀ ವಿಜಯರಾಯರಿಗೆ ವಿಶೇಷ ಪೂಜೆ, ಅಲಂಕಾರ, ಮಹಾನೈವೇದ್ಯ, ಮಹಾಮಂಗಳಾರತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ವಿಧ್ವಾಂಸರ ನೇತೃತ್ವದಲ್ಲಿ ನಡೆದವು. ನಂತರ ದಾಸ ಸೌರಭ ಪಂ.ಪ್ರಮೋದ್ ಆಚಾರ್ ಅವರಿಗೆ ಎಲ್ಲ ವಿಧ್ವಾಂಸರು ಗೌರವಿಸಿ, ಸತ್ಕರಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಸಮೀಪದ ನಾನಾ ಕಡೆಯಿಂದ ಆಗಮಿಸಿದ ನೂರಾರು ಭಕ್ತರು ಹಾಗೂ ತೆಲಂಗಾಣ, ತಮಿಳುನಾಡು, ಆಂದ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ನಾನಾ ರಾಜ್ಯಗಳಿಂದ ಭಕ್ತರು ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಶ್ರೀ ವಿಜಯದಾಸರ ಸನ್ನಿದಿಯಲ್ಲಿ ವಿಶೇಷವಾದ ಪಾರಾಯಣ, ಅನೇಕ ಸೇವೆಗಳನ್ನು ಸಲ್ಲಿಸಿ ಭಕ್ತಿ ಸಮರ್ಪಿಸಿದರು.


Gadi Kannadiga

Leave a Reply