This is the title of the web page
This is the title of the web page

Please assign a menu to the primary menu location under menu

State

ಕುಷ್ಟಗಿ ಕ್ಷೇತ್ರ: ವೆಚ್ಚದ ವೀಕ್ಷಕರ ಪರಿಶೀಲನೆಗಾಗಿ ದಿನಾಂಕ ನಿಗದಿ


ಕೊಪ್ಪಳ ಏಪ್ರಿಲ್ ೨೫ : ವಿಧಾನಸಭಾ ಸಾರ್ವತ್ರಿಕ ಚುನಾವಣೆ-೨೦೨೩ರಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಚುನಾವಣೆ ವೆಚ್ಚದ ಅಧಿಕೃತ ಲೆಕ್ಕ ಪತ್ರಗಳನ್ನು ವೆಚ್ಚದ ವೀಕ್ಷಕರ ಪರಿಶೀಲನೆಗೆ ಏಪ್ರೀಲ್ ೨೮, ಮೇ ೨ ಮತ್ತು ಮೇ ೬ರಂದು ದಿನಾಂಕ ನಿಗದಿಪಡಿಸಲಾಗಿದೆ.
ನಿಗದಿಪಡಿಸಿದ ದಿನಾಂಕದವರೆಗೆ ತಮ್ಮ ಚುನಾವಣಾ ವೆಚ್ಚಗಳಿಗಾಗಿ ಖರ್ಚು ಮಾಡಲಾದ ವಿವರಗಳನ್ನು ನಿಗದಿತ ನಮೂನೆಗಳಲ್ಲಿ ವೆಚ್ಚ ವೀಕ್ಷಕರ ತಪಾಸಣೆಗಾಗಿ ಚುನಾವಣಾ ವೆಚ್ಚಗಳಿಗೆ ಸಂಬಂಧಿಸಿದ ಎಬಿಸಿ ರಜಿಸ್ಟರಗಳು, ಬ್ಯಾಂಕ್ ಪಾಸ್ ಬುಕ್ ಮತ್ತು ಅದರ ವ್ಯವಹಾರಗಳ ಝರಾಕ್ಸ ಪ್ರತಿ ಮತ್ತು ವೆಚ್ಚದ ಅಧಿಕೃತ ವೋಚರಗಳನ್ನು ನಿಗದಿಪಡಿಸಿದ ದಿನಾಂಕದಂದು ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯೊಳಗೆ ೬೦-ಕುಷ್ಟಗಿ ವಿಧಾನಸಭಾ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಅಭ್ಯರ್ಥಿಗಳು ಮತ್ತು ಚುನಾವಣಾ ವೆಚ್ಚಗಳಿಗಾಗಿ ನೇಮಿಸಿರುವ ಅಭ್ಯರ್ಥಿಯ ಏಜೆಂಟರವರು ಖುದ್ದಾಗಿ ಹಾಜರಾಗುವಂತೆ ೬೦-ಕುಷ್ಟಗಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply