ಬೆಳಗಾವಿ,ಮೇ.೦೫: ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿರುವ ಒಟ್ಟು ೨೧ ಸ್ಥಾನಗಳಲ್ಲಿ ಮೇ.೨೦ರಂದು ಉಪ ಚುನಾವಣೆಯ ಮತದಾನ ನಡೆಯಲಿದೆ. ಹೀಗಾಗಿ ಶಾಂತಿ, ಸುವ್ಯವಸ್ಥಿತ ಮತದಾನದ ದೃಷ್ಠಿಯಿಂದ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಆಯುಧ/ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಲೈಸೆನ್ಸ್ದಾರರು ತಕ್ಷಣವೇ ಆಯಾ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಆದೇಶಿಸಿದ್ದಾರೆ.
ಸಂಕೇಶ್ವರ ಪುರಸಭೆಯ ವಾರ್ಡ್ ಸಂಖ್ಯೆ ೧೩ರ ಚುನಾವಣೆ ನಡೆಯಲಿರುವ ಹಿನ್ನೆಲೆ ಈ ವಾರ್ಡ್ ವ್ಯಾಪ್ತಿಯಲ್ಲಿ ಆಯುಧಗಳನ್ನು ಹೊಂದಿರುವ ಎಲ್ಲ ಲೈಸೆನ್ಸ್ದಾರರು ತಮ್ಮ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಗೆ ಶಸ್ತ್ರಾಸ್ತ್ರಗಳ್ನು ತಕ್ಷಣ ಠೇವಣಿ ಇಡಬೇಕು ಎಂದು ತಿಳಿಸಲಾಗಿದೆ.ಚುನಾವಣೆ ಮುಗಿಯುವ ತನಕ ಲೈಸೆನ್ಸ್ದಾರರು ಶಸ್ತ್ರಾಸ್ತ್ರಗಳನ್ನು ಹೊತ್ತು ತಿರುಗಾಡುವಂತಿಲ್ಲ. ಅಲ್ಲದೇ ಎಲ್ಲ ಲೈಸೆನ್ಸ್ದಾರರು ಹೊಂದಿರುವ ಆಯುಧಗಳನ್ನು ಠೇವಣಿ ಮಾಡಿದ ಬಗ್ಗೆ ಸ್ವೀಕೃತಿ ಪತ್ರ ನೀಡುವುದಕ್ಕೆ ಮತ್ತು ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಸಂಬಂಧಿಸಿದವರಿಗೆ ಆಯುಧವನ್ನು ವಾಪಸ್ಸು ನೀಡುವುದಕ್ಕೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಆರಕ್ಷಕ ಅಧೀಕ್ಷಕರರು ಕ್ರಮ ಕೈಗೊಳ್ಳಲಿದ್ದಾರೆ. ನಿಯಮ ಮೀರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದ್ದಾರೆ.
ಈ ಆದೇಶವು ಯಾವುದೇ ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ ಬ್ಯಾಂಕ್ ಅಥವ ಸಂಸ್ಥೆಗಳು ಅದರ ಕಚೇರಿ ಮತ್ತು ಆಸ್ತಿಗಳ ಸಂರಕ್ಷಣೆಗಾಗಿ ಅವುಗಳ ಹೆಸರಿನಲ್ಲಿ ಹೊಂದಿರುವಂತಹ ಆಯುಧ ಅನುಜ್ಞಾ ಪತ್ರದಾರರಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ: ಆಯುಧಗಳ ಠೇವಣಿಗೆ ಡಿಸಿ ಸೂಚನೆ
More important news
ಬೆಳಗಾವಿ ವಿಭಾಗ ಮಟ್ಟದ ನಿವೃತ್ತ ನೌಕರರ ಸಮಾವೇಶ
04/02/2023
ಫೆ.೧೨ ರಂದು ಮಾಜಿ ಸೈನಿಕರ ರ್ಯಾಲಿ
04/02/2023
ಪ್ರೇಮಾದೇವಿ ತುಬಚಿ £ಧನ
04/02/2023
ರಾಧಾ ಕೃಷ್ಣ ನಾಟಕ ಉದ್ಘಾಟನೆ
04/02/2023
ಅಪರಿಚಿತ ವ್ಯಕ್ತಿ ಸಾವು
03/02/2023