This is the title of the web page
This is the title of the web page

Please assign a menu to the primary menu location under menu

Local News

ಕರ್ನಾಟಕ ಸ್ವರಾಜ್ಯ ಪಾರ್ಟಿ: ೩ ವರ್ಷದ ಹಣಕಾಸು ವರದಿ ಸಲ್ಲಿಕೆಗೆ ಡಿಸಿ ಸೂಚನೆ


ಬೆಳಗಾವಿ, ಜೂನ್ ೦೯: ಜಿಲ್ಲೆಯ ಕರ್ನಾಟಕ ಸ್ವರಾಜ್ಯ ಪಾರ್ಟಿ ಅಧ್ಯಕ್ಷರು ಅಥವ ಪಕ್ಷಕ್ಕೆ ಸಂಬಂಧಿಸಿದ ಯಾವುದೇ ಸದಸ್ಯರು, ಪದಾಧಿಕಾರಿಗಳು ತಮ್ಮ ಪಕ್ಷದ ೨೦೧೭-೧೮, ೨೦೧೮-೧೯ ಹಾಗೂ ೨೦೧೯-೨೦ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ನಮೂನೆ ೨೪-ಎ ಹಾಗೂ ಅಡಿಟ್ ವರದಿಗಳನ್ನು ಮುಖ್ಯ ಚುನಾವಣಾಧಿಕಾರಿ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದ್ದಾರೆ.
ರಾಯಬಾಗದಲ್ಲಿರುವ ಕರ್ನಾಟಕ ಸ್ವರಾಜ್ಯ ಪಾರ್ಟಿ ಕುರಿತು ೨೦೧೭-೧೮, ೨೦೧೮-೧೯ ಹಾಗೂ ೨೦೧೯-೨೦ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ನಮೂನೆ ೨೪-ಎ ಹಾಗೂ ಅಡಿಟ್ ವರದಿಗಳು ಸಲ್ಲಿಸದೇ ಇರುವ ಬಗ್ಗೆ ಅಧ್ಯಕ್ಷರಿಗೆ ನೋಟಿಸ್ ನೀಡಿ ವರದಿ ಸಲ್ಲಿಸುವಂತೆ ಕ್ರಮ ವಹಿಸಲು ರಾಯಬಾಗ ತಹಶೀಲದಾರರಿಗೆ ಸೂಚಿಸಿಲಾಗಿತ್ತು. ಆದರೆ ಸದ್ಯಕ್ಕೆ ರಾಯಬಾಗದ ಚಿದಂಬರ ಕೃಪಾ ಸಾಯಿ ನಗರದ ನಂಬರ್ ೨೦೮೨ ಈ ವಿಳಾಸದಲ್ಲಿ ಅಧ್ಯಕ್ಷರು ಇಲ್ಲ ಎಂದು ಕಾರ್ಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ಹೀಗಾಗಿ ತಕ್ಷಣವೇ ಕರ್ನಾಟಕ ಸ್ವರಾಜ್ಯ ಪಾರ್ಟಿ ಅಧ್ಯಕ್ಷರು ಅಥವ ಪಕ್ಷಕ್ಕೆ ಸಂಬಂಧಿಸಿದ ಯಾವುದೇ ಸದಸ್ಯರು, ಪದಾಧಿಕಾರಿಗಳು ತಮ್ಮ ಪಕ್ಷದ ೨೦೧೭-೧೮, ೨೦೧೮-೧೯ ಹಾಗೂ ೨೦೧೯-೨೦ ಹಣಕಾಸು ವರ್ಷಕ್ಕೆ ಸಂಬಂಧಿಸಿದಂತೆ ನಮೂನೆ ೨೪-ಎ ಹಾಗೂ ಅಡಿಟ್ ವರದಿಗಳನ್ನು ಮುಖ್ಯ ಚುನಾವಣಾಧಿಕಾರಿಗಳು, ಹಾಗೂ ಪದನಿಮಿತ್ತ ಸರ್ಕಾರದ ಕಾರ್ಯದರ್ಶಿಗಳು, ಸಿಬ್ಬಂದಿ ಮತ್ತು ಸುಧಾರಣೆ ಇಲಾಖೆ, ಶೇಷಾದ್ರಿ ರೋಡ ಬೆಂಗಳೂರು-೫೬೦೦೦೧ ಇವರಿಗೆ ಸಲ್ಲಿಸುಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply