This is the title of the web page
This is the title of the web page

Please assign a menu to the primary menu location under menu

State

ಕುಷ್ಟಗಿ ತಾಲ್ಲೂಕಿಗೆ ಡಿಸಿ ಭೇಟಿ, ಪರಿಶೀಲನೆ : ಪರಿಹಾರದ ಚೆಕ್ ವಿತರಣೆ ಮಳೆ ಹಾನಿಯ ಮಾಹಿತಿ ತಂತ್ರಾಂಶದಲ್ಲಿ ನಮೂದಿಸಿ – ಎಂ.ಸುಂದರೇಶ್ ಬಾಬು


ಕೊಪ್ಪಳ, ಸೆ. ೧೩ : ಕುಷ್ಟಗಿ ತಾಲ್ಲೂಕಿನ ಮಳೆ ಹಾನಿಯ ಮಾಹಿತಿಯನ್ನು ತಂತ್ರಾಂಶದಲ್ಲಿ ನಮೂದಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಮಂಗಳವಾರ (ಸೆ.೧೩) ಕುಷ್ಟಗಿ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ನೈಸರ್ಗಿಕ ವಿಕೋಪ, ದೈನಂದಿನ ಕೆಲಸ ಕಾರ್ಯ ನಿರ್ವಹಣೆಯ, ಇತರೆ ಅಂಶಗಳ ಬಗ್ಗೆ ಹಾಗೂ ಮಳೆಯಿಂದ ಹಾನಿಯಾದ ಬಗ್ಗೆ ತಾಲ್ಲೂಕಿನ ವಿವಿಧೆಡೆ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಮಾತನಾಡಿದರು.
ಕುಷ್ಟಗಿ ತಾಲ್ಲೂಕಾದ್ಯಂತ ಜೂನ್-೨೦೨೨ ರಿಂದ ಇಲ್ಲಿಯವರೆಗೆ ಸುರಿದ ಮಳೆಯಿಂದ ಹಾನಿಯಾದ ಬೆಳೆಗಳ ಮಾಹಿತಿಯನ್ನು ಪರಿಹಾರ ತಂತ್ರಾಂಶದಲ್ಲಿ ತ್ವರಿತ ಗತಿಯಲ್ಲಿ ಎಂಟ್ರಿ ಮಾಡಬೇಕು. ಮನೆ ಹಾನಿಯಾದ ಬಗ್ಗೆ ಆರ್.ಜಿ.ಆರ್.ಹೆಚ್.ಸಿ.ಎಲ್ ತಂತ್ರಾಂಶದಲ್ಲಿ ಡಾಟಾ ಎಂಟ್ರಿ ಮಾಡಲಾಗಿ, ಸಂಬಂಧಪಟ್ಟ ಫಲಾನುವಭವಿಗೆ ಪರಿಹಾರವನ್ನು ವಿತರಿಸಲಾಗಿರುತ್ತದೆ. ಇನ್ನೂ ಯಾವುದಾದರೂ ಡಾಟಾ ಎಂಟ್ರಿ ಮಾಡಲು ಬಾಕಿ ಇದ್ದರೆ ಅದನ್ನು ಸಹ ತ್ವರಿತವಾಗಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಭೂಮಿ ಕೆಂದ್ರದಲ್ಲಿ ಸ್ವೀಕರಿಸುವ ಅರ್ಜಿಗಳು, ಸಕಾಲ ಯೋಜನೆಯಡಿಯಲ್ಲಿ ಸ್ವೀಕೃತವಾಗುವ ಹಾಗೂ ಕಂದಾಯ ಇಲಾಖೆಯಡಿಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ನಿಗದಿತ ಅವಧಿಯೊಳಗಾಗಿ ಕ್ರಮ ಕೈಗೊಳ್ಳಬೇಕು. ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ವೋಟರ್ ಹೆಲ್ಪ್ಲೈನ್ ಆ್ಯಪ್ (ಗಿoಣeಡಿ ಊeಟಠಿಟiಟಿe ಂಠಿಠಿ) ಮೂಲಕ ಮತ್ತು ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯಲ್ಲಿ ನೋಂದಾಯಿತರಾದ ಎಲ್ಲಾ ಮತದಾರರಿಂದ ಸ್ವಯಂ ಪ್ರೇರಿತವಾಗಿ ಮಾಹಿತಿಯನ್ನು ನೀಡಲು ಕೋರಿ ಆಧಾರ ಸಂಖ್ಯೆಯನ್ನು ಪಡೆದು ಮತದಾರರ ಪಟ್ಟಿಯಲ್ಲಿಯ ಗುರುತಿಗೆ ಆಧಾರ ಸಂಖ್ಯೆಯನ್ನು ಜೋಡಣೆ ಮಾಡುವ ಕಾರ್ಯಕ್ಕೆ ಸಂಬಂಧಿಸಿದಂತೆ ಕುಷ್ಟಗಿ ಪಟ್ಟಣ ಪ್ರದೇಶದಲ್ಲಿ ಮತದಾರ ಪಟ್ಟಿಯಲ್ಲಿನ ಸಾರ್ವಜನಿಕರ ಆಧಾರ ಜೋಡಣೆ ಮಾಡುವ ಕಾರ್ಯವನ್ನು ಶೀಘ್ರ ಗತಿಯಲ್ಲಿ ಕೈಗೊಳ್ಳಲು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಗತಿಯನ್ನು ಸಾಧಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಡಿಸಿ ಅವರು ಸೂಚಿಸಿದರು.
ಪರಿಹಾರದ ಚೆಕ್‌ನ್ನು ವಿತರಣೆ :
ಕುಷ್ಟಗಿ ತಾಲ್ಲೂಕಿನ ನಿಡಶೇಸಿ ಗ್ರಾಮದಲ್ಲಿ ಮಳೆಯಿಂದ ಹಾನಿಯಾಗಿರುವ ಚೆನ್ನಪ್ಪ ತಂದೆ ಭೀಮಪ್ಪ ಸೋಮನಿ ಎಂಬುವವರ ಮನೆ ಹಾನಿ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿ ಸ್ಥಳದಲ್ಲಿಯೇ ಬಾಧಿತರಿಗೆ ಪರಿಹಾರದ ಚೆಕ್ ಅನ್ನು ವಿತರಣೆ ಮಾಡಿದರು.
ಜಿಲ್ಲಾಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ, ಕುಷ್ಟಗಿ ತಹಶೀಲ್ದಾರ ಅವರು ತಾಲ್ಲೂಕಾದ್ಯಂತ ಜೂನ್ ರಿಂದ ಇಲ್ಲಿಯವರೆಗೆ ಸುರಿದ ಮಳೆಯಿಂದ ಹಾನಿಯಾದ ಬಗ್ಗೆ ಮಾಹಿತಿಯನ್ನು ನೀಡುತ್ತಾ, ಕುಷ್ಟಗಿ ತಾಲ್ಲೂಕಾದ್ಯಂತ ಜೂನ್ ರಿಂದ ಇಲ್ಲಿಯವರೆಗೆ ಸುರಿದ ಮಳೆಯಿಂದಾಗಿ ೧೫೨ ಮನೆಗಳು ಹಾನಿಯಾಗಿದ್ದು, ಅದರಲ್ಲಿ ೧೨೦ ಮನೆ ಹಾನಿಯಾದ ಬಗ್ಗೆ ಆರ್.ಜಿ.ಆರ್.ಹೆಚ್.ಸಿ.ಎಲ್ ತಂತ್ರಾಂಶದಲ್ಲಿ ಡಾಟಾ ಎಂಟ್ರಿ ಮಾಡಲಾಗಿದ್ದು, ೧೨೦ ಮನೆಗಳ ಮಾಲೀಕರಿಗೆ ಪರಿಹಾರ ಧನವನ್ನು ಪಾವತಿಸಲಾಗಿರುತ್ತದೆ. ಇನ್ನು ಬಾಕಿ ಉಳಿದ ೩೨ ಮನೆಗಳ ಹಾನಿಯ ಕುರಿತು ಆರ್.ಜಿ.ಆರ್.ಹೆಚ್.ಸಿ.ಎಲ್ ತಂತ್ರಾಂಶದಲ್ಲಿ ಡಾಟಾ ಎಂಟ್ರಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಡಾಟಾ ಎಂಟ್ರಿ ಕಾರ್ಯ ಪೂರ್ಣಗೊಂಡ ನಂತರ ಪರಿಹಾರ ಧನ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕುಷ್ಟಗಿ ತಾಲ್ಲೂಕಾದ್ಯಂತ ಜೂನ್ ರಿಂದ ಇಲ್ಲಿಯವರೆಗೆ ಸುರಿದ ಮಳೆಯಿಂದಾಗಿ ೪೭.೮೩ ಹೆಕ್ಟೇರ್‌ಗಳ ಬೆಳೆ ಹಾನಿಯಾಗಿದ್ದು, ಅದರಲ್ಲಿ ೪೧.೦೦ ಹೆಕ್ಟೇರ್ ಜಮೀನಿನ ಮಾಹಿತಿಯನ್ನು ಪರಿಹಾರ ತಂತ್ರಾಂಶದಲ್ಲಿ ಡಾಟಾ ಎಂಟ್ರಿ ಮಾಡಲಾಗಿರುತ್ತದೆ. ಇನ್ನು ಬಾಕಿ ಉಳಿದ ೦೬.೮೩ ಹೆಕ್ಟೇರ್‌ಗಳ ಬೆಳೆ ಹಾನಿಯ ಕುರಿತು ಪರಿಹಾರ ತಂತ್ರಾಂಶದಲ್ಲಿ ಡಾಟಾ ಎಂಟ್ರಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ನೈಸರ್ಗಿಕ ವಿಕೋಪ, ಭೂಮಿ ಕೆಂದ್ರ, ಸಕಾಲ ಯೋಜನೆಯಡಿ ಹಾಗೂ ಕಂದಾಯ ಇಲಾಖೆಯಡಿಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಕಾಲ ಕಾಲಕ್ಕೆ ವಿಲೇಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂಬ ಮಾಹಿತಿಯನ್ನು ಕುಷ್ಟಗಿ ತಹಶೀಲ್ದಾರರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಕುಷ್ಟಗಿ ತಾಲ್ಲೂಕಿನ ಸಂಬಂಧಪಟ್ಟ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರುದ್ದರು.


Gadi Kannadiga

Leave a Reply