This is the title of the web page
This is the title of the web page

Please assign a menu to the primary menu location under menu

Local News

ದಸರಾ ಆಚರಣೆಯಲ್ಲಿ ಕಾನೂನು ಉಲ್ಲಂಘನೆಯಾಗದಿರಲಿ: ಡಿಸಿಪಿ ಗಡಾದಿ


ಬೆಳಗಾವಿ: ಜಿಲ್ಲೆಯಲ್ಲಿ ಅದ್ದೂರಿ ದಸರಾ ಆಚರಣೆಗೆ ಹೆಸರಾದ ಕಡೋಲಿಯಲ್ಲಿ ಶಾಂತರೀತಿಯಲ್ಲಿ ಹಬ್ಬವನ್ನು ಆಚರಿಸಬೇಕೆಂದು ಡಿಸಿಪಿ ರವೀಂದ್ರ ಗಡಾದಿ ಹೇಳಿದರು.

ದಸರಾ ಹಬ್ಬದ ನಿಮಿತ್ಯ ಗುರುವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಕಡೋಲಿ ಅದ್ಧೂರಿ ದಸರಾ ಮಹೋತ್ಸವದಲ್ಲಿ ಅಕ್ಕ ಪಕ್ಕದ ಗ್ರಾಮಗಳು, ಜಿಲ್ಲೆಗಳು, ನೆರೆಯ ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗುತ್ತಾರೆ ಈ ವೇಳೆ ಶಾಂತಿರೀತಿಯಲ್ಲಿ ಆಚರಣೆ ಮಾಡಬೇಕು ಎಂದರು.

ಕಡೋಲಿ ದಸರಾ ಮೆರವಣಿಗೆಗೆ ಒಂದು ಪರಂಪರೆಯಿದೆ. ಹಿಂದಿನಿಂದಲೂ ಬಹಳ ಶಾಂತಿಯಿಂದ ಮೆರವಣಿಗೆ ನಡೆದಿದೆ. ಅದೇ ರೀತಿ ಈ ಬಾರಿಯೂ ಶಾಂತಿಯಿಂದ ಮೆರವಣಿಗೆ ನಡೆಸಿ. ಮತ್ತು ಡಿಹೆ ಹಚ್ಚುವುದರಿಂದ ಹಿರಿಯರಿಗೆ ತೊಂದರೆ ಆಗುತ್ತದೆ. ಹೀಗಾಗಿ ಅದನ್ನು ಬಳಸಬೇಡಿ, ಸ್ಥಳೀಯ ವಾದ್ಯಮೇಳಗಳನ್ನು ಬಳಸಿಕೊಳ್ಳಿ. ಪೊಲೀಸ್ ಇಲಾಖೆ ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿಕೊಂಡರು.


Gadi Kannadiga

Leave a Reply