This is the title of the web page
This is the title of the web page

Please assign a menu to the primary menu location under menu

State

ಸಮಾಜದಲ್ಲಿ ಮಹಿಳೆಯರು ಕ್ರೀಯಾ ಶೀಲರಾಗಬೇಕು:ಡಿಸಿಪಿ ಪಿ.ವಿ.ಸ್ನೇಹಾ


ಬೆಳಗಾವಿ : ಸಮಾಜದಲ್ಲಿ ಮಹಿಳೆಯರು ಕ್ರಿಯಾ ಶೀಲ ಆಗಿರಬೇಕು. ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡಲು ಪತ್ರಿ ಯೊಬ್ಬರ ಪಾತ್ರ ಬಹಳ ಮುಖ್ಯ ಆಗಿರುತ್ತದೆ ಎಂದು ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಪಿ.ವಿ.ಸ್ನೇಹಾ ಹೇಳಿದರು.
ನಗರದ ಲಿಂಗಾಯತ ಭವನದಲ್ಲಿ ಭಾನುವಾರ ಲಿಂಗಾಯತ ಮಹಿಳಾ ಸಮಾಜದದಿಂದ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ‍್ಯ ಸಂಭ್ರಮ, ಶ್ರಾವಣ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಿಮ್ಮ ಅಕ್ಕಪಕ್ಕ ಮಹಿಳಾ ದೌಜನ್ಯ ಆಗುತ್ತಿದ್ದರೆ ತಡೆಯಿರಿ. ದೇಶದಲ್ಲಿ ಎಂದರು. ಎಷ್ಟೋ ಮಹಿಳೆಯರು ಕಷ್ಟಪಟ್ಟು ಮೇಲೆ ಬಂದಿರುತ್ತಾರೆ. ಹೆಣ್ಣು ಮಕ್ಕಳನ್ನು ಬೆಳೆಸುವಾಗ ತಾಯಿ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಮಕ್ಕಳ ಯಶಸ್ಸು ಹಾಗೂ ವೈಫಲ್ಯ ಎರಡರಲ್ಲೂ ಪೋಷಕರು ಅವರನ್ನು ಬೆಂಬಲಿಸಿ. ನೈತಿಕ ಧೈರ್ಯ ಹೇಳಿ, ತಪ್ಪು ತಿದ್ದಿ ಕೊಂಡು ಬೆಳೆಯಲು ಪ್ರೇರೇಪಿಸಬೇಕು ಎಂದರು.
ಮಹಿಳೆಯರಿಗೆ ಖಿನ್ನತೆ ಬರುವುದು ಸಹಜ , ಖಿನ್ನತೆಯನ್ನು ಮಹಿಳೆಯರ ಬಗೆಹರಿಸಿಕೊಳ್ಳಬೇಕು, ಕುಟುಂಬದವರ ಜತೆ, ಸ್ನೇಹಿತರನೊಂದಿಗೆ ಭಾವ ಹಂಚಿಕೊಂಡು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಮಹಿಳೆಯರು ಅಪರಾಧ ಕಾರ್ಯಗಳ ಬಗ್ಗೆ ಎಚ್ಚರ ವಹಿಸಬೇಕು. ಅನಗತ್ಯವಾಗಿ ಆಭರಣಗಳನ್ನು ಧರಿಸಿಕೊಂಡು ಓಡಾಡಬಾರದು.ಸ್ವಯಂರಕ್ಷಣೆಯ ಸಾಧನಗಳನ್ನು ತಮ್ಮ ಬಳಿಯಲ್ಲಿ ಇರಿಸಿಕೊಂಡಿರಬೇಕು.
ಕಾರ್ಯಕ್ರಮದಲ್ಲಿ ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ನೈನಾ ಗಿರಿಗೌಡರ, ಕಾರ್ಯದರ್ಶಿ ಕಾವೇರಿ ಕಿಲಾರಿ ಮತ್ತು ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.


Leave a Reply