This is the title of the web page
This is the title of the web page

Please assign a menu to the primary menu location under menu

State

ಲೋಕಕ್ರಾಂತಿ ದಿನಪತ್ರಿಕೆ ಸಂಪಾದಕರ ಮೇಲೆ ಮಾರಣಾಂತಿಕ ಹಲ್ಲೆ


ಬೆಳಗಾವಿ:- ಬೆಳಗಾವಿಯ ಲೋಕಕ್ರಾಂತಿ ದಿನಪತ್ರಿಕೆ ಸಂಪಾದಕ ಹೀರೋಜಿ ಮಾವ ರಕರ ಅವರ ಮೇಲೆ ಗೋಕಾಕದಲ್ಲಿ ಹಲ್ಲೆ ನಡೆದಿದ್ದು ಅವರಿಗೆ ಮತ್ತು ಅವರ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಬೆಳಗಾವಿ ದಿನಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳನ್ನು ವಿನಂತಿ ಸಿದ್ದಾರೆ.
ಗೋಕಾಕದಲ್ಲಿನ ಜಮೀನಿಗೆ ಸಂಬ0ದಿಸಿದ0ತೆ ಪ್ರಕರಣವೇ ಕಾಂಡಕ್ಕೆ ಕಾರಣವೆಂದು ಹಲ್ಲೆಗೆ ಒಳಗಾಗಿರುವ ಹಿರೋಜಿ ಮಾವರಕರ ತಿಳಿಸಿದ್ದು ರಮೇಶ ಕಿಲಾರಿ ಎನ್ನುವವನೇ ತನ್ನ ಮೇಲೆ ತಲವಾರಿನಿಂದ ಹಲ್ಲೆ ನಡೆಸಿದ್ದಾನೆಂದು ತಿಳಿಸಿದ್ದಾರೆ.
ರಾತ್ರಿ ಸುಮಾರು ೧-೩೦ ಗಂಟೆ ಸಮಯದಲ್ಲಿ ಸೈಕಲ್ ಮೋಟಾರ ಮೇಲೆ ಬಂದ ರಮೇಶ ಕಿಲಾರಿ ತನ್ನಮೇಲೆ ಹಲ್ಲೆ ನಡೆಸಿದ್ದ ಮತ್ತು ಆತನೊಂದಿಗೆ ಇನ್ನೊಬ್ಬ
ಇದ್ದನು ಎಂದು ಪೋಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ರಸ್ತೆಯಲ್ಲಿ ಹಲ್ಲೆಯಾದ ನಂತರ ಅವರಿಂದ ತಪ್ಪಿಸಿಕೊಂಡು ಕಡಾಡಿ ಆಸ್ಪತ್ರೆಯ ಹತ್ತಿರ ಬಂದ ಹಿರೋಜಿ ಮಾವರಕರ ಮೇಲೆ ಕೆಳಗೆ ಬೀಳಿಸಿ ತಲವಾರಿನಿಂದ ಮತ್ತೆ ಮತ್ತೆ ಹಲ್ಲೆ ಮಾಡಿದ್ದು ಅಲ್ಲಿನ ಸಿ ಸಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ರೆಕಾರ್ಡ ಆಗಿದೆ.
ಗಂಭೀರವಾಗಿ ಗಾಯಗೊಂಡಿರುವ ಅವರನ್ನು ರಾತ್ರಿ ಬೀಟ್ ನಲ್ಲಿದ್ದ ಪೋಲಿಸರು ಗೋಕಾಕದ ಉಮ್ರಾಣಿ ಆಸ್ಪತ್ರೆಗೆ ಸೇರಿಸಿ ಪ್ರಾಣ ಉಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಹಲ್ಲೆಗೊಳಗಾದವರಿಗೆ ಸೂಕ್ತ ರಕ್ಷಣೆಯನ್ನೂ ನೀಡಬೇಕು , ಸಂಪಾದಕರ ಕುಟುಂಬದವರಿಗೆ ರಕ್ಷಣೆ ನೀಡಿದರೆ ಮುಂದೆ ಹೆಚ್ಚಿನ ಅನಾಹುತ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಿನ ಪತ್ರಿಕೆಗಳ ಸಂಪಾದಕರ ಸಂಘ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಿನಂತಿಸಿದೆ. ಗೋಕಾಕ್ ಪೊಲೀಸರು ಈ ಸಂಬAಧ ಪ್ರಕರಣವನ್ನು ದಾಖಲಿಸಿ ಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.ಹಲ್ಲೆಗೊಳಗಾಗಿ ತಲೆಗೆ ಮತ್ತು ಕೈಗಳಿಗೆ ಭಾರಿ ಗಾಯಗೊಂಡಿರುವ ಹಿರೋಜಿ ಮಾವರಕರ ಅವರನ್ನು ಗೋಕಾಕದ ಉಮರಾಣಿ ಆಸ್ಪತ್ರೆಗೆ ಸೇರಿಸಲಾಗಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ


Gadi Kannadiga

Leave a Reply