ಬೆಳಗಾವಿ, ಫೆ.೦೩ : ಸೂಳೇಭಾವಿ-ಸುಲದಾಳ ರೈಲು ನಿಲ್ದಾಣಗಳ ಮದ್ಯ ಫೆಬ್ರುವರಿ ೦೨ ರಂದು ಅಪರಿಚಿತ ವ್ಯಕ್ತಿ ಮೃತದೇಹವು ಪತ್ತೆಯಾಗಿದ್ದು, ಈ ಕುರಿತು ಬೆಳಗಾವಿ ರೈಲ್ವೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದರಿ ವ್ಯಕ್ತಿಯ ಅಂದಾಜು ವಯಸ್ಸು ೩೦ ರಂದ ೩೫ ವರ್ಷ ಇರುತ್ತದೆ. ಬಲಗೈ ಮುಂಗೈ ಮೇಲೆ ಇಂಗ್ಲಿಷನ ಒS ಎಂಬ ಅಕ್ಷರದ ಅಚ್ಚೆ ಗುರುತು, ಬಲಗೈ ಮೇಲೆ ಕನ್ನಡದಲ್ಲಿ ಅಮ್ಮ, ಪಾಂಡುರಂಗ ರುಕ್ಮಿಣಿ ಅಚ್ಚೆ ಹಾಗೂ ಎಡಗೈ ಮೇಲೆ S ಎಂಬ ಅಚ್ಚೆ ಗುರುತುಗಳು ಇರುತ್ತವೆ.
ಮೃತ ವ್ಯಕ್ತಿ ವಾರಸುದಾರರು ಇದ್ದಲ್ಲಿ ಬೆಳಗಾವಿ ರೈಲ್ವೆ ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ: (೦೮೩೧)೨೪೦೫೨೭೩, ಪಿ.ಎಸ್.ಐ ಮೊಬೈಲ ನಂ: ೯೪೮೦೮೦೨೧೨೭, ಅಥವಾ ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ. (೦೮೦)೨೨೮೭೧೨೯೧ ಗೆ ಸಂರ್ಪಕಿಸಿ, ಮಾಹಿತಿ ನಿಡಬಹುದು ಎಂದು ಬೆಳಗಾವಿ ರೈಲ್ವೆ ಪೋಲಿಸ್ ಠಾಣೆ ತನಿಖಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಅಪರಿಚಿತ ವ್ಯಕ್ತಿ ಸಾವು