This is the title of the web page
This is the title of the web page

Please assign a menu to the primary menu location under menu

Local NewsState

ಈಶ್ವರಪ್ಪ ಅವರಿಗೆ ಕ್ಲೀನ ಚಿಟ್ ಸಿಬಿಐ ತನಿಖೆಗೆ ಮೃತ ಸಂತೋಷ ಪತ್ನಿ ಆಗ್ರಹ


ಬೆಳಗಾವಿ: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದ್ದು ಮೃತ ಸಂತೋಷ್ ಪತ್ನಿ ಜಯಶ್ರೀ ವಿರೋಧ ವ್ಯಕ್ತಪಡಿಸಿದ್ದು ಪ್ರಕರಣವನ್ನು ಸಿಬಿಐ ತನಿಕೆಗೆ ಒಪ್ಪಿಸಬೇಕು ಇಲ್ಲವಾದಲ್ಲಿ ಕೊರ್ಟ್ ನಲ್ಲಿ ಪ್ರಕರಣವನ್ನು ಚಾಲೆಂಜ್ ಮಾಡುತ್ತೇವೆ ಎಂದು ಆಗ್ರಹಿಸಿದ್ದಾರೆ.

ಬೆಳಗಾವಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ನನ್ನ ಗಂಡ ಆತ್ಮಹತ್ಯೆಯ ವೇಳೆ ಸಾವಿಗೆ ಸಚಿವ ಈಶ್ವರಪ್ಪನವರೇ ಕಾರಣ ಎಂದು ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ ಹೀಗಿದ್ದರೂ ಈಶ್ವರಪ್ಪನವರಿಗೆ ಕ್ಲೀನ್ ಚಿಟ್ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಪತಿಯ ಸಾವಿನ ನಂತರ ಮೂರರಿಂದ ನಾಲ್ಕು ತಾಸು ಪೋನ್ ಆನ್ ಇತ್ತು. ಅದರಲ್ಲಿ ಸಾಕ್ಷಿ ಇತ್ತು. ಕೊರತೆ ಹೇಗೆ ಆಗುತ್ತದೆ ಹಾಗಾದ್ರೆ ಸಾಕ್ಷಿಗಳು ನಾಶ ಆದ್ವಾ  ಅಥವಾ ನಾಶಾ ಮಾಡಿದ್ರಾ ಎಂದು ಪ್ರಶ್ನಿಸಿದ್ದಾರೆ.

ರಾಜಕಾರಣಿಗಳ ಒತ್ತಡಕ್ಕೆ ಸಿಕ್ಕು ಪೊಲೀಸರು ತನಿಖೆ ತಿರುಗಿಸುತ್ತಿದ್ದಾರೆ ಎನ್ನುವ ಸಂಶಯ ವ್ಯಕ್ತವಾಗಿದೆ.      ನನ್ನ ಗಂಡ ಬರೆದ ಡೆತ್ ನೋಟ್ ಪರಿಗಣಿಸಿಬೇಕು. ನಾನು ಈಗ ನನ್ನ ಸಾವಿಗೆ ಈಶ್ವರಪ್ಪ ಅವರು ಕಾರಣ ಅಂತಾ ಡೆತ್ ನೋಟ್ ಬರೆಯುತ್ತೇವೆ ಅದನ್ನು ಪರಿಗಣಿಸುತ್ತಾರಾ. ಅವರದ್ದು ಕೈಯಲ್ಲಿ ಬರೆದಿಲ್ಲ ಅಂತಾರೆ ನಾನು ಈಗ ಕೈಯಲ್ಲಿ ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ, ಅದನ್ನಾದರೂ ಒಪ್ತಾರಾ ಎಂದು ಪೊಲೀಸರು ಪ್ರಶ್ನಿಸಿದ್ದಾರೆ.

 


Gadi Kannadiga

Leave a Reply