ಹುಕ್ಕೇರಿ : ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವುದೂ ಸೇರಿದಂತೆ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹುಕ್ಕೇರಿ ತಾಲೂಕು ಘಟಕ ತೀರ್ಮಾನ ಕೈಗೊಂಡಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬರುವ ಜುಲೈ ತಿಂಗಳ ೨೦ ರೊಳಗೆ ಪತ್ರಿಕಾ ದಿನಾಚರಣೆ ಪ್ರಯುಕ್ತ ಹುಕ್ಕೇರಿಯಲ್ಲಿ ವಿವಿಧ ವಿಶಿಷ್ಟ ಮತ್ತು ವಿಭಿನ್ನ ಕಾರ್ಯಕ್ರಮಗಳನ್ನು ಏರ್ಪಡಿಸುವ ನಿರ್ಧಾರ ಕೈಗೊಳ್ಳಲಾಯಿತು.
ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಕ್ಷೇತ್ರದ ಶಾಸಕ ನಿಖಿಲ್ ಕತ್ತಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಎಸ್ಪಿ ಸಂಜೀವ ಪಾಟೀಲ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ, ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಜಿಲ್ಲಾ ಅಧ್ಯಕ್ಷ ದಿಲೀಪ ಕುರಂದವಾಡೆ ಮತ್ತಿತರರನ್ನು ದಿನಾಚರಣೆ ಆಹ್ವಾನಿಸಲು ನಿರ್ಣಯ ಕೈಗೊಳ್ಳಲಾಯಿತು.
ಪತ್ರಿಕಾ ದಿನಾಚರಣೆ ಪ್ರಯುಕ್ತ ಪತ್ರಿಕೋದ್ಯಮದ ಸಾಧಕರಿಗೆ ‘ಮಾಧ್ಯಮ ಮಾಣಿಕ್ಯ’ ಪ್ರಶಸ್ತಿ ಪ್ರದಾನ, ಪತ್ರಕರ್ತರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಗೌರವ ಸನ್ಮಾನ, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಕಾರ್ಯಾಗಾರ, ತಾಲೂಕಿನಲ್ಲಿ ೬೦ ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ಪತ್ರಕರ್ತರನ್ನು ಗೌರವಿಸುವ ಕಾರ್ಯಕ್ರಮವನ್ನು ಏರ್ಪಡಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಹಿರಿಯ ಪತ್ರಕರ್ತ ಪಿ.ಜಿ.ಕೊಣ್ಣೂರ ಮಾತನಾಡಿ, ಪತ್ರಿಕಾ ದಿನಾಚರಣೆಯೊಂದಿಗೆ ವೈದ್ಯರ ದಿನಾಚರಣೆ, ವಿಶ್ವ ಛಾಯಾಗ್ರಹಣ ದಿನಾಚರಣೆ ಆಚರಿಸುವಂತಾಗಬೇಕು. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದೆನಿಸಿಕೊಂಡಿರುವ ಪತ್ರಿಕಾರಂಗ ಇಂದು ಹಲವು ಸವಾಲುಗಳನ್ನು ಮೆಟ್ಟಿ ನಿಲ್ಲುವ ಅನಿವಾರ್ಯತೆಯಿದೆ. ಸ್ವಯಂ ಘೋಷಿತ ಹಾಗೂ ಮುಖವಾಡ ಧರಿಸಿರುವ ಕೆಲ ಬೋಗಸ್ ಪತ್ರಕರ್ತರಿಂದ ಈ ವೃತ್ತಿಗೆ ಕಳಂಕ ಬರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ತಾಲೂಕು ಘಟಕ ಅಧ್ಯಕ್ಷ ರವಿ ಕಾಂಬಳೆ ಮಾತನಾಡಿ, ಸಂಘದ ಸದಸ್ಯರಿಗೆ ಎರಡು ದಿನದ ಪ್ರವಾಸ, ಸಂಘದ ಸದಸ್ಯರು ಮತ್ತು ಅವರ ಕುಟುಂಬ ವರ್ಗದವರಿಗೆ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮಗಳು, ಹುಕ್ಕೇರಿ ತಾಲೂಕಿನ ಪತ್ರಿಕೋದ್ಯಮದ ಇತಿಹಾಸ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಹಾಗೂ ಸಲ್ಲಿಸುತ್ತಿರುವ ಪತ್ರಕರ್ತರ ಸಮಗ್ರ ಮಾಹಿತಿಯನ್ನೊಳಗೊಂಡ ಗ್ರಂಥವನ್ನು ಪ್ರಕಟಿಸುವ ಸಂಬಂಧ ಹಿರಿಯ ಪತ್ರಕರ್ತರ ಸಭೆಯೊಂದನ್ನು ನಡೆಸಿ, ಸಲಹೆ-ಸೂಚನೆ ಪಡೆಯಲಾಗುವುದು ಎಂದರು.
ಜಿಲ್ಲಾ ಘಟಕ ಖಜಾಂಚಿ ಚೇತನ ಹೊಳೆಪ್ಪಗೋಳ ಮಾತನಾಡಿ, ಪತ್ರಕರ್ತರು ಮತ್ತು ಅವರ ಕುಟುಂಬ ವರ್ಗದವರಿಗೆ ಆರೋಗ್ಯ ಶಿಬಿರ ನಡೆಸುವಂತೆ ನೀಡಿದ ಸಲಹೆಗೆ ಸಭೆ ಸಹಮತ ವ್ಯಕ್ತಪಡಿಸಿತು. ಇದೇ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಸದಸ್ಯರಿಗೆ ೨೦೨೩-೨೪ನೇ ಸಾಲಿನ ಸದಸ್ಯತ್ವದ (ಐಡಿ) ಕಾರ್ಡಗಳನ್ನು ವಿತರಿಸಲಾಯಿತು.
ಜಿಲ್ಲಾ ಪ್ರತಿನಿಧಿ ರಾಜು ಬಾಗಲಕೋಟಿ, ಕಾರ್ಯದರ್ಶಿ ಮಹಾದೇವ ನಾಯಿಕ, ಪದಾಧಿಕಾರಿಗಳಾದ ಸಂಜು ಮುತಾಲಿಕ, ರಾಮಣ್ಣಾ ನಾಯಿಕ, ಎಂ.ಎ.ಗುಂಡಕಲ್ಲೆ, ವಿಶ್ವನಾಥ ನಾಯಿಕ, ನಂದು ಹುಕ್ಕೇರಿ, ಸಚಿನ ಖೋತ, ಸುರೇಶ ಕಿಲ್ಲೇದಾರ, ಬಸವರಾಜ ಕೊಂಡಿ, ಬಾಬು ಸುಂಕದ, ಶಶಾಂಕ ಮಾಳಿ, ಬಿ.ಬಿ.ಕೋತೇಕರ, ಆನಂದ ಭಮ್ಮನ್ನವರ, ಸಚಿನ್ ಕಾಂಬಳೆ, ರಾಜು ಕುರಂದವಾಡೆ, ಅಪ್ಪು ಹುಕ್ಕೇರಿ, ಸಂಜೀವ ಮುಷ್ಟಗಿ, ಎ.ಎಂ.ಕರ್ನಾಚಿ ಮತ್ತಿತರರು ಉಪಸ್ಥಿತರಿದ್ದರು.
Gadi Kannadiga > Local News > ಹುಕ್ಕೇರಿಯಲ್ಲಿ ಅರ್ಥಪೂರ್ಣ ಪತ್ರಿಕಾ ದಿನಾಚರಣೆಗೆ ನಿರ್ಧಾರ ಗುರುತಿನ ಚೀಟಿ ವಿತರಣೆ, ಪತ್ರಕರ್ತರ ಗ್ರಂಥ ಹೊರತರುವ ಚಿಂತನೆ
ಹುಕ್ಕೇರಿಯಲ್ಲಿ ಅರ್ಥಪೂರ್ಣ ಪತ್ರಿಕಾ ದಿನಾಚರಣೆಗೆ ನಿರ್ಧಾರ ಗುರುತಿನ ಚೀಟಿ ವಿತರಣೆ, ಪತ್ರಕರ್ತರ ಗ್ರಂಥ ಹೊರತರುವ ಚಿಂತನೆ
Suresh28/06/2023
posted on

More important news
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡ ಭೇಟಿ
25/09/2023
ಪೌರ ಕಾರ್ಮಿಕರ ದಿನಾಚರಣೆ
23/09/2023
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡದ ಭೇಟಿ
22/09/2023