This is the title of the web page
This is the title of the web page

Please assign a menu to the primary menu location under menu

Local News

ಮಹಾಮಂಡಳ ಪುನಶ್ಚೇತನಗೊಳಿಸಲು ತೀರ್ಮಾನ


ಹಿಡಕಲ್ ಡ್ಯಾಂ: ಘಟಪ್ರಭಾ ಯೋಜನಾ ಮಟ್ಟದ £Ãರು ಬಳಕೆದಾರರ ಸಹಕಾರಿ ಸಂಘಗಳ ಮಹಾಮಂಡಳ ಹಿಡಕಲ್ ಡ್ಯಾಮ ಇದರ ವಾರ್ಷಿಕ ಸರ್ವ ಸಾಧಾರಣ ಸಭೆಯು ಮಂಗಳವಾರ ದಿ. ೨೦ ರಂದು ಹಿಡಕಲ್ ಡ್ಯಾಮಿನ ಶ್ರೀ ಮಾರುತಿ ಮಂದಿರದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಮಹಾಮಂಡಳ ಅಧ್ಯಕ್ಷರಾದ ಅಶೋಕ ಶಿವಪುತ್ರ ಖಂಡ್ರಟ್ಟಿ ವಹಿಸಿದ್ದರು.
ಮಹಾಮಂಡಳದ ಮುಖ್ಯ ಕಾರ್ಯ£ವಾಹಕ ಅಧಿಕಾರಿ ವ್ಹಿ.ಎಸ್. ಮುದ್ನುರ ವರದಿವಾಚನಗೈದು ಮಹಾಮಂಡಳದ ಕಾರ್ಯವ್ಯಾಪ್ತಿಯಲ್ಲಿ ೨೯೭ ಸದಸ್ಯರು ಇದ್ದಾರೆ. ಇನ್ನೂ ಸದಸ್ಯತ್ವ ಮಾಡಿಕೊಳ್ಳಲು ಪ್ರಯತ್ನಿಸಲಾಗುವುದು ಮಹಾಮಂಡಳದ ಅಭಿವೃದ್ದಿಗೆ ಎಲ್ಲರ ಸಹಕಾರ ಅಗತ್ಯವೆಂದು ಹೇಳಿದರು.
ಸಭೆಯಲ್ಲಿ ಎಲ್ಲ ಆಡಳಿತ ಮಂಡಳಿಯವರು, ಸದಸ್ಯರು, ಮಹಾಮಂಡಳ ಪುನಶ್ಚೇತನಗೊಳಿಸಲು ಚರ್ಚಿಸಲಾಯಿತು. ಹಿಡಕಲ್ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣ £Ãರಿನ ಸಂಗ್ರಹವಿದ್ದು ಹಿಂಗಾರು ಹಂಗಾಮಿಗೆ ನೆವ್ಹಂಬರ ೧೫ ರಿಂದ £Ãರು ಬಿಡಲು ತೀರ್ಮಾಣಿಸಲಾಗುವುದು ಮಹಾಮಂಡಳಕ್ಕೆ ಸೇವಾಶುಲ್ಕ ಪಾವತಿಸುವದರಿಂದ ಮಹಾಮಂಡಳದ ಆರ್ಥಿಕ ಅಭಿವೃದ್ದಿ ಜೊತೆಗೆ £Ãರು ಬಳಕೆದಾರರ ಸಹಕಾರಿ ಸಂಘದ ಪುನಶ್ಚೇತಗೊಳಿಸಲು ಶೇ. ೧೦ ರಷ್ಟು ಸೇವಾ ಶುಲ್ಕ ಹೆಚ್ಚಿಸಲು ಸಭೆಯಲ್ಲಿ ತಿರ್ಮಾ£ಸಲಾಯಿತು.
ಈ ಸಂದರ್ಭದಲ್ಲಿ ಮಹಾಮಂಡಳದ ಉಪಾಧ್ಯಕ್ಷ ಮಲ್ಲಿಕಾರ್ಜುನ ಹುಂಡೇಕಾರ, ಆಡಳಿತ ಮಂಡಳಿ £ರ್ದೇಶಕರಾದ ಶಿವಪ್ಪ ನಾಯಿಕ, ಬಸಪ್ಪ ಪಂಡ್ರೋಳಿ, ಅರ್ಜುನ ನಾಯಿಕವಾಡಿ, ಕೆಂಪಣ್ಣಾ ಮುದೋಳ, ಅಣ್ಣಪ್ಪ ಘಂಟಿ, ಮಹಾದೇವ ಸಂಗೋಟಿ, ನೇಮಿನಾಥ ನಾಗನೂರ, ಸಂಜೀವಕುಮಾರ ಮಾನೆ, ರಾಯಗೌಡ ಖೇತಗೌಡರ, ಉಮೇಶ ಸಿದರೆಡ್ಡಿ, ಸಂಜು ನಡುವಿನಮ£, ರಾಮಪ್ಪ ಪಾಟೀಲ, ವೆಂಕಣ್ಣಾ ಜಂಬಗಿ, ಹಾಗೂ ಮಹಾಮಂಡಳದ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಇತ್ತಿಚೆಗೆ £ಧನರಾದ ಸಚಿವ ಉಮೇಶ ಕತ್ತಿಯವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.


Gadi Kannadiga

Leave a Reply