ಖಾನಾಪುರ
ಇದು ಗೋವಾ ಸರಕಾರ ಹಾಗೂ ರೆಸಾರ್ಟ್ ಮಾಲೀಕರ ಪೂರ್ವನಿಯೋಜಿತ ಸಭೆ ದಶರಥ ಬನೋಶಿ ಕಿಡಿ..!
ಖಾನಾಪುರ:ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳಿಗೆ ನೀರೊದಗಿಸುವ ಮಹದಾಯಿ ತಿರುವು ಯೋಜನೆ ಕಾಮಗಾರಿಗೆ ಖಾನಾಪುರದ ಪರಿಸರ ಹೋರಾಟಗಾರರಿಂದ ವಿರೋಧ ವ್ಯಕ್ತಪಡಿಸಿ ಪಟ್ಟಣದಲ್ಲಿ ಬುಧವಾರ ‘ಪಶ್ಚಿಮ ಘಟ್ಟ ಅರಣ್ಯ ಉಳಿಸಿ, ವನ್ಯಜೀವಿ ಉಳಿಸಿ, ಜಲಮೂಲ ಉಳಿಸಿ’ ಎಂಬ ಜನಾಂದೋ ಜನ ಸಭೆ ನಡೆಸಿದ ಸಮಾನ ಮನಸ್ಥರು, “ಈ ಯೋಜನೆಯಿಂದ ತಾಲೂಕಿನ ಅರಣ್ಯ ಪ್ರದೇಶಕ್ಕೆ ಧಕ್ಕೆ ಉಂಟಾಗುವ ಪ್ರಮೇಯ ಮದ್ದು ಸ್ಥಳೀಯರು ಎಚ್ಚೆತ್ತುಕೊಂಡು ಅಲ್ಲಿಯ ಅಪರೂಪದ ವನ್ಯಸಂಪತ್ತು ಉಳಿಸಲು ಪಣ ತೊಡಬೇಕು”, ಎಂದು ಪರಿಸರವಾದಿ ದಿಲೀಪ್ ಕಾಮತ್ ಹೇಳಿದರು.
ಈ ವೇಳೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಮತ್ತು ಮಾನವ ಹಕ್ಕುಗಳ ಹೋರಾಟಗಾರ ದಿಲೀಪ್ ಕಾಮತ್, ”ಕರ್ನಾಟಕ ಸರಕಾರ ನೀರಾವರಿ ನಿಗಮದ ಮೂಲಕ ತಾಲೂಕಿನ ಅರಣ್ಯದಲ್ಲಿರುವ ಖಾನಾಪುರದಲ್ಲಿ ಪರಿಸರ ಹೋರಾಟಗಾರರು ಮಹದಾಯಿ ತಿರುವು ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ಕೂಡಲೇ ನಿಲ್ಲಿಸಲು ಆಗ್ರಹಿಸಿ ತಹಸೀಲ್ದಾರ್ ದುಂಡಪ್ಪ ಕೋಮಾರ ಅವರಿಗೆ ಮನವಿ ಸಲ್ಲಿಸಿದರು. ಮಾಡುವ ಕೆಲಸಕ್ಕೆ ಸರಕಾರ ಕೈಹಾಕಿದ್ದು,ಹಲ್ದಾರಾ, ಕಳಸಾ ಮತ್ತು ಭಂಡೂರಿ ನಾಲೆಗಳ ಮೇಲೆ ಅಣೆಕಟ್ಟು ನಿರ್ಮಿಸಿ ಮಹದಾಯಿ ನದಿ ತಿರುಗಿಸುವ ಯೋಜನೆ ಜಾರಿಗೆ ಮುಂದಾಗಿದೆ. ಪೈಪ್‌ಲೈನ್ ಅಳವಡಿಸಿ ಭಂಡೂರಿ ಹಳ್ಳದ ನೀರನ್ನು ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ಸಾಗಿಸುವ ಪ್ರಯತ್ನ ಆರಂಭವಾಗಿದೆ. ಇದಕ್ಕಾಗಿ ಈಗಾಗಲೇ ಹಲವು ಹಳ್ಳಿಗಳ ರೈತರಿಗೆ ಭೂಸ್ವಾಧೀನದ ನೋಟಿಸ್ ನೀಡಲಾಗಿದೆ. ಪರಿಸರ ಸೂಕ್ಷ್ಮವಲಯದಲ್ಲಿ ಕಾಮಗಾರಿ ನಡೆಸಿ ಪರಿಸರಕ್ಕೆ ಹಾನಿ ಉಂಟುಮಾಡುತ್ತದೆ ಅದಕ್ಕೆ ಈಗಲೇ ಕಾಮಗಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
*ಜನಾಂದೋಲನ ಸಭೆಗೆ ಖಾನಾಪುರ ಸಾರ್ವಜನಿಕರು ಮತ್ತು ರಕ್ಷಣಾ ವೇದಿಕೆ ತೀವ್ರ ವಿರೋಧ*
ಇನ್ನೂ ಕಾರ್ಯಕ್ರಮದಲ್ಲೇ ಜನಾಂದೋಲನೆ ಸಭೆಗೆ ವಿರೋಧ ವ್ಯಕ್ತಪಡಿಸಿದ ಖಾನಾಪುರ ಜನತೆ ಹಾಗೂ ರಕ್ಷಣಾ ವೇದಿಕೆ ಸದಸ್ಯರು ನಮಗೆ ಈ ಸಭೆ ಖಾನಾಪುರ ಅಭಿವೃದ್ಧಿ ಸಲುವಾಗಿ ನಡೆಸುತ್ತಿದ್ದು ಎಲ್ಲರೂ ಭಾಗವಹಿಸಿ ಎಂದು ಸುಳ್ಳು ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಕರೆಸಲಾಗಿದ್ದು ಕಾರ್ಯಕ್ರಮಕ್ಕೆ ಯಾವುದೇ ಪೂರ್ವಭಾವಿ ಸಭೆ ಮಾಡದೇ ತರಾತುರಿಯಲ್ಲಿ ಜನರ ದಿಕ್ಕು ತಪ್ಪಿಸಿ ಮಹಾದಾಯಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವದನ್ನ ನೋಡಿದರೆ ಈ ಸಭೆ ಗೋವಾ ಸರಕಾರ ಹಾಗೂ ಕಣಕುಂಬಿ ಭಾಗದಲ್ಲಿರುವ ರೆಸಾರ್ಟ್ ಮಾಲೀಕರ ಪೂರ್ವನಿಯೋಜಿತ ಹುನ್ನಾರ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ದಶರಥ ಬನೋಶಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಅವರು ಮಹಾದಾಯಿ,ಕಳಸಾ-ಬಂಡೂರಿ ಹೋರಾಟ ಇವತ್ತು ನಿನ್ನೆಯದಲ್ಲಿ ದಶಕಗಳಿಂದ ನಡೆದು ಬರುತ್ತಿದೆ ಈ ಹೋರಾಟ ನವಲಗುಂದ-ನರಗುಂದ ಸೇರಿದಂತೆ ಇನ್ನೂ ಹಲವಾರು ಭಾಗದ ಜನರು ಹಾಗೂ ರೈತರ ಜೀವಜಲಕ್ಕಾಗಿ ನಡೆಸುತ್ತಿರುವ ಹೋರಾಟ ಅದಕ್ಕೆ ವಿರೋಧ ವ್ಯಕ್ತಪಡಿಸುವ ಬದಲು ಮಲಪ್ರಭೆಯ ಶುದ್ದೀಕರಣಕ್ಕಾಗಿ ಮತ್ತು ಕಾಡು ರಕ್ಷಣೆಗಾಗಿ ಹೋರಾಟ ಮಾಡುವದು ಸೂಕ್ತ ಆದ್ದರಿಂದ ಈ ಜನಾಂದೋಲನ ಸಭೆಗೆ ನಮ್ಮ ತೀವ್ರ ವಿರೋಧವಿದ್ದು ಸರಕಾರ ಕಳಸಾ-ಬಂಡೂರಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಿಸದೇ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಖಾನಾಪುರ