This is the title of the web page
This is the title of the web page

Please assign a menu to the primary menu location under menu

Local News

ಸುವರ್ಣ ಸೌಧಕ್ಕೆ ದೀಪಾಲಂಕಾರ, ಸಾರ್ವಜನೀಕರ ಪ್ರವೇಶಕ್ಕೆ ಆಗ್ರಹ


ಬೆಳಗಾವಿ: 75ನೇ ವರ್ಷದ ಸ್ವತಂತ್ರ ಅಮೃತ ಮಹೋತ್ಸವ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದ್ದು ಬೆಳಗಾವಿಯ ಸುವರ್ಣ ಸೌಧಕ್ಕೆ ಬಣ್ಣಬಣ್ಣದ ದೀಪಾಲಂಕಾರ ಮಾಡಲಾಗಿದ್ದು ಕೆಸರಿ, ಬಿಳಿ, ಬಸಿರು ಬಣ್ಣಗಳಿಂದ ಸೌಧವು ಕಂಗೊಳಿಸುತ್ತಿದೆ‌.

ಬೆಳಗಾವಿಯಲ್ಲಿ ಅಮೃತ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ಜಿಲ್ಲೆಗೆ ಕಿರೀಟವಾದ ಸುವರ್ಣ ಸೌಧವು ಕೂಡ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಜಿಲ್ಲಾಡಳಿತದಿಂದ ಲಕ್ಷಾಂತರ ರೂಪಾಯಿ ಕರ್ಚು ಮಾಡಿ ಅಲಾಂಕಾರ ಮಾಡಲಾಗಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ.

ಅಮೃತ ಮಹೋತ್ಸವಕ್ಕೆಂದು ಮದುಮಗಳಂತೆ ಶೃಂಗಾರಗೊಂಡ ಸುವರ್ಣ ಸೌಧದ ಒಳಗೆ ಹೋಗಲು ಸಾರ್ವಜನೀಕರಿಗೆ ಜಿಲ್ಲಾಡಳಿತ ನಿಷೇಧ ಮಾಡಿದ್ದು ಸಧ್ಯ ಆಕ್ರೋಶಕ್ಕೆ ಕಾರಣವಾಗಿದೆ. ಭದ್ರತೆ ಹೆಸರಿನಲ್ಲಿ ಪ್ರವೇಶ ನಿಷೇಧಿಸಲಾಗಿದ್ದು ಸಾರ್ವಜನೀಕರಿಗೆ ಪ್ರವೇಶವಿಲ್ಲದಿದ್ದರೆ ಲಕ್ಷಾಂತರ ಕರ್ಚು ಮಾಡಿ ದೀಪಾಲಂಕಾರ ಮಾಡಿದ್ದು ಯಾಕೆ ಎಂದು ಸಾರ್ವಜನೀಕರು ಕಿಡಿಕಾರುತ್ತಿದ್ದಾರೆ.

 


Gadi Kannadiga

Leave a Reply