This is the title of the web page
This is the title of the web page

Please assign a menu to the primary menu location under menu

Local News

ತಾತ್ಕಾಲಿಕ ಕೊರೋನಾ ವಾರಿಯರ್ಸಗಳಿಗೆ ಸೇವಾ ಭದ್ರತೆ ವದಗಿಸುವಂತೆ ಆಗ್ರಹ


ಬೆಳಗಾವಿ : ಕೋವಿಡ್-19 ಸಂಧರ್ಭದಲ್ಲಿ ಕೊರೋನಾ ವಾರಿಯರ್ಸ‌ಗಳಾಗಿ ತಾತ್ಕಾಲಿಕ ಆಧಾರದಲ್ಲಿ ನೇಮಕ ಮಾಡಿಕೊಂಡಿರುವ ಶುಶ್ರೂಷಕರು, ಲ್ಯಾಬ್ ಟೆಕ್ನಿಷಿಯನ್, ಅರವಳಿಕೆ ತಜ್ಞರು, ಕ್ಷಕಿರಣ ತಜ್ಞರು, ಫಾರ್ಮಾಸಿಸ್ಟ್, ಡೇಟಾ ಎಂಟ್ರಿ ಆಪರೇಟರ್, ಕಿರಿಯ ಮಹಿಳಾ ಹಾಗೂ ಪುರುಷ ಆರೋಗ್ಯ ಸಹಾಯಕರು ಮತ್ತು ಡಿ ಗ್ರೂಪ್ ನೌಕರರನ್ನು ಮಾರ್ಚ 2022 ರ ನಂತರವೂ ಕೆಲಸದಲ್ಲಿ ಮುಂದುವರಿಸಬೇಕೆಂದು ಆಗ್ರಹಿಸಿ ಕರ್ನಾಟಕ ಸಂಯುಕ್ತ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘದಿಂದ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.  ಕೋವಿಡ್ -19 ಸಂಧರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಶುಶೂಷಕರು, ಲ್ಯಾಬ್‌ಟೆಕ್ನಿಷಿಯನ್, ಅರವಳಿಕೆ ತಜ್ಞರು, ಫಾರ್ಮಾಸಿಸ್ಟ್ ಡೇಟಾ ಎಂಟ್ರಿ ಆಪರೇಟರ್, ಕಿರಿಯ ಮಹಿಳಾ/ಪುರುಷ ಆರೋಗ್ಯ ಸಹಾಯಕರು ಮತ್ತು ಡಿ ಗ್ರೂಪ್ ಹುದ್ದೆಗಳನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗಿತ್ತು ಇಲಾಖೆಗೆ ನೇಮಕಗೊಂಡ ನಾವು ಹಗಲು ರಾತ್ರಿ ಎನ್ನದೇ ಈ ಮಹಾಮಾರಿ ವಿರುದ್ಧ ಹೋರಾಡಲು ಸಂಪೂರ್ಣ ಸೇವಾ ಮನೋಭಾವದಿಂದ ನಮ್ಮ ಮನೆ ಮತ್ತು ಕುಟುಂಬದಿಂದ ದೂರವಿದ್ದು, ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ ನಮ್ಮ ನೇಮಕಾತಿ ನಿಬಂಧನೆಯ ಅನುಸಾರ ನಮ್ಮ ಸೇವಾವಧಿ ಪೂರ್ಣಗೊಂಡ ನಂತರವೂ ಜನಗಳ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ನಮ್ಮ ಈ ಒಂದಿನ ಮನವಿಯನ್ನು ಪರಿಗಣಿಸಿ ನಮ್ಮನ್ನು ಸೇವೆಯಲ್ಲಿ ಮುಂದುವರೆಸಿದ್ದು 2022ರ ನಂತರ ತಾತ್ಕಾಲಿಕ ನೌಕರರನ್ನು ಸೇವೆಯಿಂದ ತೆಗೆಯುತ್ತಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಜನರ ಆರೋಗ್ಯದ ದೃಷ್ಟಿಯಿಂದ ಮತ್ತು ತಾತ್ಕಾಲಿಕ ನೌಕರರ ಸೇವಾ ಭದ್ರತೆಯ ದೃಷ್ಟಿಯಿಂದ ಕೆಲಸದಿಂದ ತೆಗೆಯದೇ ಮುಂದುವರೆಸಬೇಕೆಂದು ಮನವಿ ಮಾಡಿದರು.

 

 


Leave a Reply