This is the title of the web page
This is the title of the web page

Please assign a menu to the primary menu location under menu

State

ಗಡಿ ಜಿಲ್ಲೆ ಸಾಹಿತಿಗಳು , ಕಲಾವಿದರಿಗೆ ಆದ್ಯತೆ ನೀಡಲು ಗಡಿ ಕನ್ನಡಿಗರ ಆಗ್ರಹ


ಬೆಳಗಾವಿ : ಪ್ರತಿಷ್ಠಾನಗಳಿಗೆ ನಾಮಕರಣಗೊಳಿಸುವದು ಸೇರಿದಂತೆ ಗೌರವ ಡಾಕ್ಟರೇಟ್ ಪದವಿ ದಾನ ಮತ್ತು ರಾಜ್ಯೋತ್ಸವ ಪ್ರಶಸ್ತಿ ನೀಡುವಾಗ ಗಡಿ ಭಾಗದ ಜಿಲ್ಲೆಗಳ ಸಾಹಿತಿಗಳು ಕಲಾವಿದರು ಮತ್ತು ಶಿಕ್ಷಣ ತಜ್ಞರಿಗೆ ಆದ್ಯತೆ ನೀಡಬೇಕು ಎಂದು ಬೆಳಗಾವಿಯ ಸಾಹಿತಿಗಳು ಕಲಾವಿದರು ಮತ್ತು ಶಿಕ್ಷಣತಜ್ಞರು ಸರ್ಕಾರವನ್ನು ಆಗ್ರಹಿಸಿದ್ದಾರೆ .
ಈ ಸಂಬಂಧ ಬೆಳಗಾವಿ ನಾಡಹಬ್ಬ ಸಮಿತಿ ಅಧ್ಯಕ್ಷ ಡಾ ಎಚ್ ಬಿ ರಾಜಶೇಖರ ,ಕೇಲಿ ಸಂಸ್ಥೆಯ ಮಾಜಿ ಕಾರ್ಯದರ್ಶಿ ಡಾ ಎಸ್ ವಿ ಮಾನ್ವಿ ,ಬೆಳಗಾವಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ ಬಸವರಾಜ ಜಗಜಂಪಿ , ನಿವೃತ್ತ ಪ್ರಾಚಾರ್ಯ ಬಿ ಎಸ್ ಗವಿಮಠ ,ಬೆಳಗಾವಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಯ ರು ಪಾಟೀಲ , ಕಸಾಪ ಜಿಲ್ಲಾ ಮಾಜಿ ಕಾರ್ಯದರ್ಶಿ ಬಸವರಾಜ ಗಾರ್ಗಿ ,ಲೇಖಕಿಯರ ಸಂಘದ ಪದಾಧಿಕಾರಿ ಡಾ ಗುರುದೇವಿ ಹುಲೆಪ್ಪನವರಮಠ ,ಅವರುಗಳ ಒಳಗೊಂಡ ನಿಯೋಗವು ಕರ್ನಾಟಕ ಸರ್ಕಾರಕ್ಕೆ ಮನವಿ ಪತ್ರವೊಂದನ್ನು ನೀಡಿ ರಾಜ್ಯದಲ್ಲಿರುವ 24 ಪ್ರತಿಷ್ಠಾನ ಗಳಲ್ಲಿ ಕಾರ್ಯನಿರ್ವಸುತ್ತಿರುವ ಅಧ್ಯಕ್ಷರು ಹಾಗೂ ಸದಸ್ಯರ ನಾಮಕರಣ ಬಹಳ ವರ್ಷಗಳಿಂದ ಅವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು ,ರಹಾಜ್ಯೋತ್ಸವ ಪ್ರಶಸ್ತಿ ನೀಡಿಕೆಯಲ್ಲೂ ಕೂಡ ಬೆಳಗಾವಿ ಜಿಲ್ಲೆಗೆ ಅನ್ಯಾಯವಾಗಿದೆ ,ಅದೇ ರೀತಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡುವ ಸಂದರ್ಭದಲ್ಲೂ ಕೂಡ ಬೆಳಗಾವಿ ಜಿಲ್ಲೆಯ ಯಾರೊಬ್ಬರಿಗೂ ನೀಡಲಾಗಿಲ್ಲ ,ಅದೇ ರೀತಿ ವಿಶ್ವವಿದ್ಯಾಲಯಗಳು ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರನ್ನು ನಾಮಕರಣ ಮಾಡುವಾಗ ಕೂಡ ಅನ್ಯಾಯವಾಗುತ್ತಿದೆ ಎಂದು ಅವರು ತಮ್ಮ ಮನವಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ .
ಆಯಾ ಜಿಲ್ಲೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ರಾಜ್ಯೋತ್ಸವ ಅವರುಗಳು ಸಂಖ್ಯೆ ನಿಗದಿಯಾಗಬೇಕು ,ಆಯಾ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಬರುವ ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ನೀಡಬೇಕು ,ಅದೇ ರೀತಿ ಆಯಾ ವಿಶ್ವವಿದ್ಯಾಲಯಗಳ ಹಾಗೂ ಮೆಡಿಕಲ್ ಕಾಲೇಜುಗಳ ವ್ಯಾಪ್ತಿಯಲ್ಲಿ ಬರುವ ಶಿಕ್ಷಣ ತಜ್ಞರನ್ನು ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರನ್ನಾಗಿ ನಾಮಕರಣ ಮಾಡಬೇಕು ಹೀಗೆ ಪ್ರತಿಷ್ಠಾನಗಳಿಗೆ ಅಕಾಡೆಮಿಗಳಿಗೆ ,ವಿವಿಗಳಿಗೆ, ಟ್ರಸ್ಟ್ ಗಳಿಗೆ ,ನಾಮಕರಣ ಮಾಡುವಾಗ ಆಯಾ ಕ್ಷೇತ್ರಗಳ ಹಿರಿಯ ವಿದ್ವಾಂಸರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಈಗ ಕೆಲವು ಕಿರಿಯರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಕಿರಿಯರನ್ನು ಸದಸ್ಯರನ್ನಾಗಿ ಮಾಡಿದರೆ ಅದು ಸಮಂಜಸವಾಗಲಾರದು ನಾಮಕರಣ ಗೊಳಿಸುವಾಗ ಈ ಅಂಶವನ್ನು ಪರಿಗಣಿಸಬೇಕು ಎಂದವರು ಸರಕಾರವನ್ನು ಒತ್ತಾಯಿಸಿದ್ದಾರೆ.
ರಂಗಭೂಮಿಯ ಖ್ಯಾತ ಕಲಾವಿದೆ ನಾಟ್ಯಭೂಷಣ ಏಣಗಿ ಬಾಳಪ್ಪನವರು, ಕವಿ ಎಸ್ ಡಿ ಇಂಚಲರು, ಖ್ಯಾತ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ , ಖ್ಯಾತ ಗಾಯಕ ಕುಮಾರ ಗಂಧರ್ವ ಹಾಗೂ ಮಕ್ಕಳ ಕವಿ ಉಳವೀಶ ಅವರುಗಳ ಹೆಸರಿನಲ್ಲಿ ಟ್ರಸ್ಟ್ ಘೋಷಿಸಲು ಸರ್ಕಾರಕ್ಕೆ ಕಳೆದ 5 ವರ್ಷಗಳಿಂದ ಆದಷ್ಟು ಶೀಘ್ರ ಇವರುಗಳ ಹೆಸರಿನಲ್ಲಿ ರಚಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ .
ಹೆಚ್ಚುವರಿ ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಿ ಸರ್ಕಾರಕ್ಕೆ ರವಾನಿಸುವುದಾಗಿ ಹೇಳಿದರು.


Gadi Kannadiga

Leave a Reply