ಬೆಳಗಾವಿ: ಬೆಳಗಾವಿಯ ಮಾಳ ಮಾರುತಿ ಬಡಾವಣೆಯ Sector No: 9 ರಲ್ಲಿಯ, ಸಂಗೊಳ್ಳಿ ರಾಯಣ್ಣ ಮಹಾವಿದ್ಯಾಲಯದ ಹಿಂಭಾಗದಲ್ಲಿ, ಐದು ವರ್ಷಗಳ ಹಿಂದೆಯೇ ನಿರ್ಮಿಸಲಾದ ಬಸವ ಆರ್ಟ್ ಗ್ಯಾಲರಿ /ಅನುಭವ ಮಂಟಪದಲ್ಲಿ ಈ 5 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಇತ್ತೀಚಿಗೆ ಅಭಿವೃದ್ಧಿ ಹೆಸರಿನಲ್ಲಿ ಬಸವ ಆರ್ಟ್ ಗ್ಯಾಲರಿ ಪಕ್ಕದಲ್ಲಿರುವ ಖಾಲಿ ಜಾಗೆಯಲ್ಲಿ ವ್ಯಾಪಾರಿ ಮಳಿಗೆಗಳನ್ನು ಕಟ್ಟುವ ಅಥವಾ ಇತರೆ ಕಟ್ಟಡಗಳನ್ನು ಕಟ್ಟುವ ವ್ಯರ್ಥ ಪ್ರಯತ್ನಗಳು ನಡೆದಿವೆ. ಬಸವ ಆರ್ಟ್ ಗ್ಯಾಲರಿಯ ಪಕ್ಕದಲ್ಲಿರುವ ಖಾಲಿ ಜಾಗಯಲ್ಲಿ ಸುಂದರವಾದ ಉದ್ಯಾನವನವನ್ನು ಮಾಡಿ, ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವದ ಪ್ರಥಮ ಪಾರ್ಲಿಮೆಂಟ್ ಅನುಭವ ಮಂಟಪದ ಸಂಸ್ಥಾಪಕ, ಜಗಜ್ಯೋತಿ ಬಸವೇಶ್ವರರ ಹೆಸರಿನಲ್ಲಿ ಒಂದು ಸುಂದರ ಉದ್ಯಾನವನವನ್ನು ನಿರ್ಮಿಸಿ ಅದಕ್ಕೆ *ಬಸವ ವನ* ವೆಂದು ನಾಮಕರಣ ಮಾಡಬೇಕು ಎಂದು ಲಿಂಗಾಯತ್ ಮಹಾಸಭಾ ಬೆಳಗಾವಿ ಜಿಲ್ಲಾ ಅಧ್ಯಕ್ಷ ಹಾಗೂ ವಕೀಲ ಬಸವರಾಜ್ ರೊಟ್ಟಿ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು ಆ ಖಾಲಿ ಸ್ಥಳದಲ್ಲಿ ಯಾವುದೇ ತರದ ಕಟ್ಟಡಗಳಿಗೆ ಅವಕಾಶವನ್ನು ನೀಡಬಾರದು. ಅದರಿಂದ ಬಸವ ಆರ್ಟ್ ಗ್ಯಾಲರಿಯ ಮಹತ್ವ ಕುಂದುವುದಲ್ಲದೆ ಅಲ್ಲಿಯ ಸೌಂದರ್ಯ ಹಾಳಾಗುತ್ತದೆ. ಇದರಿಂದ ಆ ಸ್ಥಳದಲ್ಲಿ ಯಾವುದೇ ತರದ ಇತರೆ ಕಟ್ಟಡಗಳನ್ನು ಕಟ್ಟದೆ ಉದ್ಯಾನವನವನ್ನು ನಿರ್ಮಿಸಬೇಕೆಂದು ಜಾಗತಿಕ ಲಿಂಗಾಯತ ಮಹಾಸಭೆಯ ಪರವಾಗಿ ಹಾಗೂ ಎಲ್ಲ ಬಸವಪರ ಸಂಘಟನೆಗಳ ಪರವಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ. ಇದಕ್ಕೆ ವ್ಯತರಿಕ್ತವಾಗಿ ಖಾಲಿ ಸ್ಥಳದಲ್ಲಿ ಉಧ್ಯಾನದ ಬದಲಾಗಿ ಕಟ್ಟಡಗಳನ್ನು ಕಟ್ಟುವ ಪ್ರಯತ್ನ ನಡೆದರೆ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಎಲ್ಲ ಬಸವ ಪರ ಸಂಘಟನೆಗಳು ಇದನ್ನು ಪ್ರತಿಭಟಿಸಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಚ್ಸರಿಕೆ ನೀಡಿದ್ದಾರೆ.