This is the title of the web page
This is the title of the web page

Please assign a menu to the primary menu location under menu

Local News

ಗ್ರಾ.ಪಂ. ನೌಕರರಿಗೆ ಕನಿಷ್ಠ ವೇತನ ನಿಗದಿಪಡಿಸುವಂತೆ ಒತ್ತಾಯ


ಮೂಡಲಗಿ : ಗ್ರಾಮ ಪಂಚಾಯತಿ ನೌಕರರಿಗೆ ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ವೇತನ ನಿಗದಿಪಡಿಸುವಂತೆ ಒತ್ತಾಯಿಸಿ ಫೆ.೧೪ರಂದು ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ನಡೆಸುವ ಮೂಲಕ ರಾಜ್ಯದ ಗ್ರಾಮ ಪಂಚಾಯತ ನೌಕರರಿಂದ ಅನಿರ್ಧಿ್ಧಷ್ಟ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ ಹೋಳಿ ಹಾಗೂ ಮೂಡಲಗಿ ತಾಲೂಕಾ ಉಪಾಧ್ಯಕ್ಷ ಬಸವರಾಜ ಮಿರ್ಜಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾನೂನು ಬದ್ಧ ಕನಿಷ್ಠ ವೆತನವನ್ನು ನೀಡಬೇಕೆಂದು ಹಾಗೂ ನೌಕರರ ಬಹುದಿನ ಬೇಡಿಕೆಯಾದ ಸರಕಾರಿ ನೌಕರರರಾಗಿ ಪರಿವರ್ತಿಸಬೇಕೆಂದು ಹಾಗೂ ಪಿಂಚಣಿ, ಆರೋಗ್ಯ ಭತ್ಯೆ, ಅನುಮೋದನೆ,ಮೃತರ ಕುಟುಂಬಕ್ಕೆ ಅನುಕಂಪದ ನೇಮಕಾತಿ , ಸೇವಾ ಭದ್ರತೆ, ಇನ್ನಿತರರ ಸಮಸ್ಯೆಗಳು ಪರಿಹಾರ ಕಾಣದೆ ಹಾಗೇ ಉಳಿಸಿರುವುದನ್ನು ಪರಿಸಹರಿಸಲು ಒತ್ತಾಯಿಸಿ, ಕರ್ನಾಟಕ ರಾಜ್ಯ ನೌಕರರ ಸಂಘದ ವತಿಯಿಂದ ಬೆಂಗಳೂರಿನಲ್ಲಿ ಅನಿರ್ಧಿಷ್ಟ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ಮೂಡಲಗಿ ತಾಲೂಕಿನ ಗ್ರಾಪಂ ನೌಕರರು ಈ ಹೋರಾಟದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.


Gadi Kannadiga

Leave a Reply