This is the title of the web page
This is the title of the web page

Please assign a menu to the primary menu location under menu

Local News

ಅಂಬಿಗರ ಸಮಾಜಕ್ಕೆ ಎಸ.ಟಿ ಮೀಸಲಾತಿ ನೀಡಲು ಆಗ್ರಹ


 

ಬೆಳಗಾವಿ-ಅಂಬಿಗರ ಸಮಾಜಕ್ಕೆ ಎಸ.ಟಿ ಮೀಸಲಾತಿ ನೀಡಲು ನಿಜಶರಣ ಅಂಬಿಗರಚೌಡಯ್ಯನವರ ಗುರುಪೀಠ ಜಗದ್ಗುರು
ಶಾಂತಭೀಷ್ಮಚೌಡಯ್ಯ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಲಾಗಿದ್ದು,ಅವರು ಮೀಸಲಾತಿ ಕೊಡುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.ಎಂದು ಶ್ರೀಗಳು ಹೇಳಿದರು.

ಜನೆವರಿ 14, 15 ರಂದು
ಅಂಬಿಗರ 5ನೇ ಶರಣ ಸಂಸ್ಕೃತಿ ಉತ್ಸವ ನಡೆಯಲಿದೆ.ಶಾಂತಮುನಿ ಸ್ವಾಮೀಜಿ 7 ನೇ ಜಯಂತೋತ್ಸವ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ. ಸಿಎಂ ಬಸವರಾಜ ಬೋಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸುತ್ತಾರೆ.ಕಲಬುರ್ಗಿಯ ಚೌಡಯ್ಯಪುರದಲ್ಲಿ ಅಂಬಿಗರ ಪೀಠವನ್ನ ಸ್ಥಾಪನೆ ಮಾಡ್ತಿದ್ದೇವೆ.ಇದಕ್ಕಾಗಿ15 ಎಕರೆ ಜಮೀನು ಖರೀದಿಸಲಾಗಿದೆ.ಎಂದು ಶ್ರೀಗಳು ತಿಳಿಸಿದರು.

ಅಂಬಿಗರ ಸಮಾಜ ಹಿಂದುಳಿದ ವರ್ಗಕ್ಕೆ ಸೇರಿದ್ದೇವೆ.ಈವರೆಗೂ ನಮ್ಮ‌ ಸಮಾಜಕ್ಕೆ ಎಸ.ಟಿ ಮೀಸಲಾತಿ ನೀಡಬೇಕು.ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ಎಸ.ಟಿ ಮೀಸಲಾತಿ ನೀಡಬೇಕು.ಮುಂಬರುವ ಚುನಾವಣೆಯಲ್ಲಿ ಅಂಬಿಗರ ಸಮಾಜದ ಮುಖಂಡರಿಗೆ ಟಿಕೆಟ್ ಕೊಡಬೇಕು.ಸರ್ಕಾರ ನಮ್ಮ ಸಮಾಜಕ್ಕೆ ಎಸ.ಟಿ ಮೀಸಲಾತಿ ಕೊಡದಿದ್ದರೆ ಮುಂದೆ ಹೋರಾಟದ ರೂಪಿಸುತ್ತೇವೆ.ಎಂದು ಶ್ರೀಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಅಂಬಿಗರ ಉತ್ಸವದಲ್ಲಿ ಮೀಸಲಾತಿ ಕುರಿತು ಸಿಎಂ ಅವರಿಗೆ ಒತ್ತಾಯ ಮಾಡ್ತಿವಿ.ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಕ್ಕೆ ಸರ್ಕಾರದಿಂದ ಅನುದಾನ ಕೊಡ್ತಿಲ್ಲ.ಇದರ ಬಗ್ಗೆ ನಮಗೆ ಬೇಸರವಿದೆ.ಸರ್ಕಾರ ಆದಷ್ಟು ಬೇಗ ನಿಗಮ ಮಂಡಳಿಗೆ ಅನುದಾನ ಕೊಡಬೇಕು.ನಮ್ಮ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಶ್ರೀಗಳು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗಂಗಾಮತಸ್ಥರ ಸಮಾಜದ ಮುಖಂಡರು ಉಪಸ್ಥಿತರಿದ್ದರು.


Gadi Kannadiga

Leave a Reply