This is the title of the web page
This is the title of the web page

Please assign a menu to the primary menu location under menu

State

ಅಂಚೆ ಇಲಾಖೆ : ಸಾರ್ವಜ£ಕರ ಅನುಕೂಲಕ್ಕೆ ಸಮೂಹ ಅಪಘಾತ ಸುರಕ್ಷಾ ಪಾಲಿಸಿ


ಕೊಪ್ಪಳ, ಅ. ೧೫ : ಭಾರತೀಯ ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನ ಮೂಲಕ ಟಾಟಾ-ಎಐಜಿ ಅಥವಾ ಸಮೂಹ ಅಪಘಾತ ಸುರಕ್ಷಾ ಪಾಲಿಸಿಗಳನ್ನು ಸಾರ್ವಜ£ಕರ ಅನುಕೂಲಕ್ಕಾಗಿ ಬಿಡುಗಡೆ ಮಾಡಲಾಗಿದೆ ಎಂದು ಗದಗ ವಿಭಾಗ ಅಂಚೆ ಅಧೀಕ್ಷಕರಾದ ಪಿ. ಚಿದಾನಂದ ಅವರು ತಿಳಿಸಿದ್ದಾರೆ.
ಪಾಲಿಸಿ ವಿವರಗಳು :
ಸಮೂಹ ಅಪಘಾತ ಸುರಕ್ಷಾ ಪಾಲಿಸಿಯ ವಿವರಗಳು ಇಂತಿವೆ. ಸಮೂಹ ಅಪಘಾತ ಸುರಕ್ಷಾ ಪಾಲಿಸಿ ಅಡಿಯಲ್ಲಿ ಪ್ರತಿಯೊಬ್ಬರು ತಮ್ಮ ಹಾಗೂ ತಮ್ಮ ಕುಟುಂಬದ ಎಲ್ಲಾ ಸದಸ್ಯರಿಗೆ ಅ£ರೀಕ್ಷಿತ ಅಪಘಾಗಳಿಂದಾಗುವ ದೈಹಿಕ ಹಾಗೂ ಹಣಕಾಸಿನ ತೊಂದರೆಗಳನ್ನು ಸರಳವಾಗಿ £ಭಾಯಿಸಬಹುದು.
ಕೇವಲ ರೂ. ೩೯೯ ಹಾಗೂ ರೂ. ೨೯೯ ಗಳ(ತೆರಿಗೆ ಬಳಿಕದ) ಕಂತಿನಲ್ಲಿ ಶಾಶ್ವತ ಸಂಪೂರ್ಣ ವೈಕಲ್ಯ, ಅಪಘಾತದಲ್ಲಿ ಸಾವು, ಅಪಘಾತದಿಂದ ಅಂಗಾಂಗಛೇದನಗಳಂತಹ ಅಪಘಾತಗಳಲ್ಲಿ, ೧೦ ಲಕ್ಷ ರೂಪಾಯಿಗಳ ಕವರೇಜ್‌ನ್ನು ಪಡೆಯಬಹುದು. ಕೇವಲ ರೂ. ೩೯೯ ಹಾಗೂ ರೂ. ೨೯೯ ಗಳ ಕಂತಿನಲ್ಲಿ ಅಪಘಾತದ ವೈದ್ಯಕೀಯ ವೆಚ್ಚಗಳು ಹೊರರೋಗಿ ವಿಭಾಗದಲ್ಲಿ ೩೦ ಸಾವಿರ ರೂಪಾಯಿಗಳ ಕವರೇಜ್, ಆಸ್ಪತ್ರೆಯಲ್ಲಿ ದಾಖಲಾದಾಗ ದೈನಂದಿನ ೧ ಸಾವಿರ ರಂತೆ ೧೦ ದಿನಗಳವರೆಗೆ, ಕುಟುಂಬದವರಿಗೆ ಸಾರಿಗೆ ಪ್ರಯೋಜನಗಳು (೨೫ ಸಾವಿರದ ವರೆಗೆ), ಅಂತಿಮ ಸಂಸ್ಕಾರಕ್ಕೆ ೫ ಸಾವಿರ ರೂಪಾಯಿಗಳನ್ನು ಪಡೆಯಬಹುದು. ವಿಮೆ ಮೊತ್ತದ ೧೦% ಅಥವಾ ನೈಜ ಮೊತ್ತ, ಇವುಗಳಲ್ಲಿ ಯಾವುದು ಕಡಿಮೆಯೊ ಆ ಮೊತ್ತದ ಶೈಕ್ಷಣಿಕ ಪ್ರಯೋಜನವನ್ನು ಗರಿಷ್ಠ ೨ ಅರ್ಹ ಮಕ್ಕಳಿಗೆ ಪಡೆಯಬಹುದು. ಈ ವಿಮೆಯನ್ನು ತೆಗೆದುಕೊಳ್ಳಲು ೧೮ ರಿಂದ ೬೫ ವರ್ಷದ ವಯೋಮಿತಿಯವರಾಗಿರಬೇಕು, ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಛೇರಿಯನ್ನು ಭೇಟಿ ಮಾಡಿ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


Gadi Kannadiga

Leave a Reply