This is the title of the web page
This is the title of the web page

Please assign a menu to the primary menu location under menu

Local News

ಪರಿಶಿಷ್ಟ ವರ್ಗಗಳ ಕಲ್ಯಾಣ  ಇಲಾಖೆಗೆ ಹೆಮ್ಮೆ ತಂದ ಶೈಕ್ಷಣಿಕ ಸಾಧನೆ  ವಿದ್ಯಾರ್ಥಿಗಳನ್ನು ಅಭಿನಂದಿಸಿದ ಇಲಾಖೆ ಜಿಲ್ಲಾಧಿಕಾರಿ ಬಸವರಾಜ್ ಕುರಿಹುಲಿ


ಬೆಳಗಾವಿ:  ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಮುರಾರ್ಜಿ ವಸತಿ ಶಾಲೆಗಳು ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವುದಾಗಿ ಬಸವರಾಜ  ಕುರಿಹುಲಿ, ಜಿಲ್ಲಾ ಅಧಿಕಾರಿಗಳು ಪರಿಶಿಷ್ಟ ವರ್ಗ ಕಲ್ಯಾಣ ಇಲಾಖೆ ಇವರು ಸ್ಪಷ್ಟಪಡಿಸಿದರು..

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಮ್ಮ ಇಲಾಖೆಯ ಒಟ್ಟು 10 ಶಾಲೆಗಳಿದ್ದು, ಅದರಲ್ಲಿ ಸುಮಾರು 500 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದರು,  ನೂರಕ್ಕೆ ನೂರರಷ್ಟು ಪಲಿತಾಂಶ ಬಂದಿದೆ  ಎಂದು ಹೇಳಲು ತುಂಬಾ ಹೆಮ್ಮೆ ಅನಿಸುತ್ತದೆ ಎಂದರು..

ಪ್ರತಿ ಶಾಲೆಯಲ್ಲಿ 2 – 3 ವಿದ್ಯಾರ್ಥಿಗಳು 625ಕ್ಕೆ 620 ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ, ಕೇವಲ ಹತ್ತು ಪ್ರತಿಶತ ವಿದ್ಯಾರ್ಥಿಗಳು ಮಾತ್ರ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದು, ಉಳಿದ ಎಲ್ಲರೂ ಡಿಸ್ಟಿoಕ್ಷಣನಲ್ಲಿ ಪಾಸಾಗಿದ್ದಾರೆ.

ಇನ್ನು ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಗಳ ಬಗ್ಗೆ ಮಾತನಾಡಿದ ಅಧಿಕಾರಿಗಳು ಸ್ಪೋರ್ಟ್ಸ್, ಸಾಂಸ್ಕೃತಿಕ ಚಟುವಟಿಕೆ, ಆಶುಭಾಷಣ, ಪ್ರಭಂದ ಸ್ಪರ್ದೆ, ರಂಗೋಲಿ, ಮತ್ತೆ ಇತ್ತೀಚೆಗೆ 8 ರಿಂದ 10 ನೆಯ ತರಗತಿ ವಿದ್ಯಾರ್ಥಿನಿಗಳಿಗೆ  ಕರಾಟೆ ಕೂಡಾ ತರಬೇತಿ ಕೊಡ್ತಾ ಇದೀವಿ, ಆಯಾ ಶಾಲೆಯಲ್ಲಿ ಅವರೇ ಕ್ರಿಯಾಯೋಜನೆ ಮಾಡಿಕೊಂಡು ಆ ರೀತಿಯಲ್ಲಿ ಪಠ್ಯೇತರ ಚಟುವಟಿಕೆ ಮಾಡುವುದರಿಂದ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ದಾರಿಯಾಗುತ್ತದೆ ಎಂದರು..

ಕಳೆದ ಮೂರ್ನಾಲ್ಕು ವರ್ಷಗಳಿಂದ ನಮ್ಮ ಇಲಾಖೆಯ ತವಗ ವಸತಿ ಶಾಲೆಯಲ್ಲಿ ಪದವಿಪೂರ್ವ ಕಾಲೇಜ್ ಶುರುವಾಗಿದೆ, ಇಲಾಖೆ ಹಾಗೂ ಸರ್ಕಾರ ವಿದ್ಯಾರ್ಥಿಗಳ ಬೆಳವಣಿಗೆ ದೃಷ್ಟಿಯಿಂದ  ಇನ್ನೂ ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ ಎಂದರು..

ಇನ್ನು ಕನ್ನಡ ಮಾಧ್ಯಮದಿಂದ ಬಂದ ಮಕ್ಕಳಿಗೆ ಇಂಗ್ಲಿಷ್ ಮಾದ್ಯಮ ಸಮಸ್ಯ ಆಗುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತಾ ಮೊದಮೊದಲು ಮಕ್ಕಳಿಗೆ ಸಮಸ್ಯ ಆಗುತ್ತದೆ, ಆದರೆ ನಮ್ಮಲ್ಲಿ ಸರ್ಕಾರದಿಂದ ತರಬೇತಿ ಹೊಂದಿದ, ನುರಿತ ಶಿಕ್ಷಕರು ಇರುವದರಿಂದ, ಪರಿಣಾಮಕಾರಿಯಾಗಿ ಭೋದನೆ ಮಾಡಿ ವಿದ್ಯಾರ್ಥಿಗಳಿಗೆ ಇಂಗ್ಲೀಷ ಮಾಧ್ಯಮಕ್ಕೆ ಹೊಂದಿಕೊಳ್ಳುವಂತೆ ಮಾಡುವರು ಎಂದರು..

6 ರಿಂದ 10 ತರಗತಿ ವರೆಗೆ ಮಕ್ಕಳು ಇಂಗ್ಲೀಷ್ನಲ್ಲಿ ಅಧ್ಯಯನ ಮಾಡುವುದರಿಂದ ಅವರ ಮುಂದಿನ ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲ ಆಗಿ, ಅದರಲ್ಲಿ ಸುಮಾರು ಜನ ಯಶಸ್ವಿ ಕೂಡಾ ಆಗಿದ್ದಾರೆ ಎಂದರು.. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪರಿಹಾರ ಭೋದನೆ, ಎಕ್ಸ್ಟ್ರಾ ತರಗತಿ ಅಂತಾ ವಿಶೇಷ ಯೋಜನೆ ಮೂಲಕ ಸುಧಾರಿಸುವ ಕಾರ್ಯವನ್ನು ನಮ್ಮ ಸಿಬ್ಬಂದಿ ಮಾಡುತ್ತದೆ, ಎಲ್ಲಾ ಕಡೆ ಅತ್ಯುತ್ತಮ ಶಾಲಾ ಸಿಬ್ಬಂದಿ ಇರುವದರಿಂದ ಈ ರೀತಿ ಒಳ್ಳೆಯ ಪಲಿತಾಂಶ ಸಿಗುತ್ತದೆ ಎಂದರು..

ಕೊನೆಯದಾಗಿ, ಈ ರೀತಿಯಾದ ಪಲಿತಾಂಶ ನೀಡಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ, ಇಲಾಖೆಯ ಕಡೆಯಿಂದ ಅಭಿನಂದನೆ ಸಲ್ಲಿಸಿ, ಶುಭಾಶಯ ತಿಳಿಸಿದರು.


Gadi Kannadiga

Leave a Reply