This is the title of the web page
This is the title of the web page

Please assign a menu to the primary menu location under menu

Local News

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ


ಬೆಳಗಾವಿ ೨೪ : ಮಂಗಳವಾರದಂದು ಬೆಳಗಾವಿ ನಗರದ ಕೆ.ಎಸ್.ಆರ್.ಪಿ ತರಬೇತಿ ಶಾಲೆ, ಕಂಗ್ರಾಳಿಯಲ್ಲಿ ಕೆ.ಎಸ್.ಆರ್.ಪಿ ತರಬೇತಿ ಶಾಲೆ ಕಂಗ್ರಾಳಿ ಬೆಳಗಾವಿಯ ೭ನೇ ತಂಡದ ಮತ್ತು ಶಿಗ್ಗಾವಿಯ ಹೆಚ್ಚುವರಿ ಪೊಲೀಸ್ ತರಬೇತಿ ಶಾಲೆಯ ೧೦ ನೇ ಪಡೆಯ ೩ನೇ ತಂಡದ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಇಂದು ಜರುಗಿತು.
ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ರವರು ಪೊಲೀಸರ ಮೇಲಿನ ಗೌರವ ಹಾಗೂ ಅಭಿಮಾನದ ಕಾರಣದಿಂದಾಗಿ ಇಂದು ಪೊಲೀಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ವಿಕ್ಷಿಸುವುದರೊಂದಿಗೆ ಎಲ್ಲ ಪ್ರಶಿಕ್ಷಣಾರ್ಥಿಗಳಿಗೆ ಶುಭಾಷಯಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್. ಹಿತೇಂದ್ರ ಆಯ್.ಪಿ.ಎಸ್ ಎ.ಡಿ.ಜಿ.ಪಿ ಕೆ.ಎಸ್.ಆರ್.ಪಿ, ಸತೀಶಕುಮಾರ ಆಯ್.ಪಿ.ಎಸ್ ಆಯ್.ಜಿ.ಪಿ ಎನ್.ಆರ್, ಡಾ. ಬೋರಲಿಂಗಯ್ಯ ಆಯ್.ಪಿ.ಎಸ್. ಪೊಲೀಸ್ ಆಯುಕ್ತರು ಬೆಳಗಾವಿ, ಎಮ್.ವಿ. ರಾಮಕೃಷ್ಣಪ್ರಸಾದ ಆಯ್.ಪಿ.ಎಸ್ ಡಿ.ಆಯ್.ಜಿ.ಪಿ ಕೆ.ಎಸ್.ಆರ್.ಪಿ, ಲಕ್ಷö್ಮಣ ನಿಂಬರಗಿ ಆಯ್.ಪಿ.ಎಸ್ ಪೊಲೀಸ್ ವರಿಷ್ಠಾಧಿಕಾರಿಗಳು ಬೆಳಗಾವಿ, ರವೀಂದ್ರ ಗದಾಡಿ ಆಯ್.ಪಿ.ಎಸ್, ರಮೇಶ ಬೋರಗಾವಿ ಕೆ.ಎಸ್.ಪಿ,ಎಸ್. ಪ್ರಿನ್ಸಿಪಾಲ್ ಕೆ.ಎಸ್.ಆರ್.ಪಿ ಪೊಲೀಸ್ ತರಬೇತಿ ಶಾಲೆ ಬೆಳಗಾವಿ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಮತ್ತು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply