This is the title of the web page
This is the title of the web page

Please assign a menu to the primary menu location under menu

Local News

ಚಿರತೆ ಕಾರ್ಯಾಚರಣೆ ಯಶಸ್ವಿಗೆ ಹೆಚ್ಚಿನ ಸಿಬ್ಬಂದಿಗಳ ನಿಯೋಜನೆ ಜನರು ಆತಂಕ ಪಡುವ ಅಗತ್ಯವಿಲ್ಲ: ಸಚಿವ ಉಮೇಶ ಕತ್ತಿ


ಬೆಳಗಾವಿ, ಆ.೨೧ : ಜಿಲ್ಲೆಯಲ್ಲಿ ಕಳೆದ ೨೦ ದಿನಗಳಿಂದ ಚಿರತೆ ಹಾವಳಿ ಕಂಡುಬಂದಿವೆ. ಈಗಾಗಲೇ ಅಧಿಕಾರಿಗಳು ೨೪*೭ ಚಿರತೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ೩ ರಿಂದ ೪ ದಿನಗಳಲ್ಲಿ ಚಿರತೆ ಕಾರ್ಯಾಚರಣೆ ಯಶಸ್ವಿಗೊಳಿಸಲಾಗುವುದು. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಅರಣ್ಯ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವರಾದ ಉಮೇಶ ಕತ್ತಿ ಅವರು ತಿಳಿಸಿದರು.
ನಗರದ ಅರಣ್ಯ ಇಲಾಖೆಯ ಸಭಾಂಗಣದಲ್ಲಿ ಸೋಮವಾರ (ಆ.೨೧) ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆಯಲ್ಲಿ ಚಿರತೆ ಹಾವಳಿ ಕಾರ್ಯಾಚರಣೆಯ ಕುರಿತು ಅವರು ಮಾಹಿತಿ ನೀಡಿದರು.
ಕಳೆದ ೨೦ ದಿನಗಳಿಂದ ಜಿಲ್ಲೆಯಲ್ಲಿ ೪ ಚಿರತೆಗಳು ಕಾಣಿಸಿಕೊಂಡಿವೆ. ಅಥಣಿ ಭಾಗದಲ್ಲಿ ಕಂಡಿರುವ ಚಿರತೆ ಮಹಾರಾಷ್ಟ್ರದ ಗಡಿಯ ಕಾಡಿನತ್ತ ಹೋಗಿರುತ್ತದೆ ಎಂದು ಮಾಹಿತಿ ಸಿಕ್ಕಿದೆ. ಸವದತ್ತಿ ಹಾಗೂ ಮೂಡಲಗಿ ಭಾಗದಲ್ಲಿ ಕಂಡುಬಂದಿರುವ ಚಿರತೆಗಳು ಈ ವರೆಗೆ ಮತ್ತೆ ಕಾಣಿಸಿಕೊಂಡಿಲ್ಲ ಎಂದು ತಿಳಿಸಿದರು.
ನಗರದಲ್ಲಿ ಕಂಡುಬಂದಿರುವ ಚಿರತೆ ಹಿಡಿಯಲು ಈಗಾಗಲೇ ೨೪*೭ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದೆ. ೨೨ ಬೋನು ಗಳನ್ನು ಇರಿಸಲಾಗಿದೆ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಕಾರ್ಯಾಚರಣೆ ಚುರುಕುಗೊಳಿಸಲು ತರಬೇತಿ ಪಡೆದಿರುವ ೨ ಆನೆಗಳನ್ನು ತರಿಸಲಾಗುತ್ತಿದೆ ಎಂದು ಹೇಳಿದರು.
ಹೆಚ್ಚಿನ ಸಿಬ್ಬಂದಿಗಳ ನಿಯೋಜನೆ:
ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ, ಯಾವುದೇ ರೀತಿಯ ಮಾನವ ಹಾಗೂ ನಾಯಿ, ಬೀದಿ ದನಗಳು ಸೇರಿದಂತೆ ಬೇರೆ ಪ್ರಾಣಿಗಳ ಪ್ರಾಣ ಹಾನಿಯಾಗಿಲ್ಲ. ನಿರಂತರ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೊಡಗಿಕೊಂಡಿದ್ದಾರೆ. ಇನ್ನೂ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈ ಹಿಂದೆ ಚಿರತೆ, ಹುಲಿ ಸೇರಿದಂತೆ ಯಾವುದೇ ಕಾಡು ಪ್ರಾಣಿಗಳ ಹಾವಳಿ ಕಂಡು ಬಂದಿಲ್ಲ. ಕ್ಯಾಂಪ್, ಗಾಲ್ಫ್ ಮೈದಾನದ ಆವರಣ ಹೆಚ್ಚು ವಿಸ್ತೀರ್ಣ ಇರುವುದರಿಂದ ಚಿರತೆ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಕಾರ್ಯಾಚರಣೆ ಚುರುಕುಗೊಳಿಸಿ ೩ ರಿಂದ ೪ ದಿನಗಳಲ್ಲಿ ಚಿರತೆ ಕಾರ್ಯಚರಣೆ ಯಶಸ್ವಿಗೊಳಿಸಲಾಗುವುದು ಎಂದು ಸಚಿವ ಉಮೇಶ ಕತ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.


Gadi Kannadiga

Leave a Reply