This is the title of the web page
This is the title of the web page

Please assign a menu to the primary menu location under menu

Local News

ಜಲಾಶಯದ ನೀರು ಸಂಗ್ರಹಣಾ ಮಾಹಿತಿ ನೀಡಲು ಇಂಜಿನೀಯರ ನಿಯೋಜನೆ: ಜಿಲ್ಲಾಧಿಕಾರಿ


ಬೆಳಗಾವಿ : ರಾಜ್ಯದಲ್ಲಿ ಮತ್ತು ನೆರೆ ರಾಜ್ಯವಾದ ಮಹರಾಷ್ಟ್ರದಲ್ಲಿ ಸುರಿಯುತ್ತಿರುವ ಬೀಕರ ಮಳೆಯಿಂದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದ್ದು ಜಲಾಶಯಗಳ ನೀರಿನ ಪ್ರಮಾಣದ ಕುರಿತು ಮಾಹಿತಿಯನ್ನು ಒದಗಿಸಲು ನೀರಾವರಿ ಇಲಾಖೆಯ ಇಂಜಿನೀಯರ್ ಒಬ್ಬರನ್ನು ಸಾಂಗ್ಲಿ ಜಿಲ್ಲೆಗೆ ನೇಮಕ‌ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ವ್ಯಾಪಕ ಮಳೆಯಿಂದ ಕೊಯ್ನಾ ಮತ್ತಿತರ ಜಲಾಶಯಗಳಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣ ಹಾಗೂ ನೀರು ಬಿಡುಗಡೆ ಕುರಿತು ಮಾಹಿತಿಯನ್ನು ಒದಗಿಸುವುದಕ್ಕಾಗಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಗಿರುವ ಎನ್.ಎಂ.ದಿವಟೆ ಅವರನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿರುತ್ತದೆ.

ನಿಯೋಜಿತ ಅಧಿಕಾರಿಯು ಸಾಂಗ್ಲಿಯಲ್ಲಿರುವ ನೀರಾವರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಅವರ ಕಚೇರಿಯಲ್ಲಿ ಇದ್ದುಕೊಂಡು ಕೃಷ್ಣಾ ನದಿಯ ಜಲಾಶಯಗಳಲ್ಲಿ ನೀರು ಸಂಗ್ರಹ ಮಟ್ಟ ಹಾಗೂ ಹೊರ ಹರಿವು ಪ್ರಮಾಣದ ಕುರಿತು ನಿರಂತರವಾಗಿ ಜಿಲ್ಲಾಧಿಕಾರಿಗಳು ಮತ್ತು ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನೀಡಲಿದ್ದಾರೆ ಎಂದರು‌.


Gadi Kannadiga

Leave a Reply