ಸಂಜೀವಿನಿ ಫೌಂಡೇಶನ್ ವೃದ್ಧಾಶ್ರಮಕ್ಕೆ ಉಪ ಮಹಾಪೌರರ ಭೇಟಿ

Murugesh Shivapuji
ಸಂಜೀವಿನಿ ಫೌಂಡೇಶನ್ ವೃದ್ಧಾಶ್ರಮಕ್ಕೆ ಉಪ ಮಹಾಪೌರರ ಭೇಟಿ
WhatsApp Group Join Now

ಬೆಳಗಾವಿ: ಬೆಳಗಾವಿ ವಡಗಾವದಲ್ಲಿರುವ ಸಂಜೀವಿನಿ ಫೌಂಡೇಶನ್ ವೃದ್ಧಾಶ್ರಮಕ್ಕೆ ಬೆಳಗಾವಿಯ ಉಪ ಮಹಾಪೌರರಾದ ಶ್ರೀಮತಿ. ವಾಣಿ ವಿಲಾಸ್ ಜೋಶಿ ಅವರು ಇಂದು ಭೇಟಿ ನೀಡಿ ಹಿರಿಯ ಪತ್ರಕರ್ತೆ ಶ್ರೀಮತಿ. ಸುಧಾ ಪಟ್ಟೇದ ಅವರ 80 ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಳೆದ ಒಂದು ದಶಕಕ್ಕೂ ಅಧಿಕ ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಸಂಜೀವಿನಿ ಫೌಂಡೇಶನ್ ದಲ್ಲಿ ಸದ್ಯಕ್ಕೆ 45ಕ್ಕೂ ಹೆಚ್ಚು ಆಶ್ರಮವಾಸಿಗಳಿದ್ದಾರೆ. ಅದರಲ್ಲಿ 99 ವರ್ಷದ ಹಿರಿಯರು ಕೂಡ ಇದ್ದಾರೆ. ಇಲ್ಲಿ ಅವರಿಗೆ ಆರೋಗ್ಯದ ಮೇಲುಸ್ತುವಾರಿ ಕೂಡ ಸೂಕ್ತ ಸಮಯದಲ್ಲಿ ಲಭ್ಯವಾಗುತ್ತದೆ ಎಂದು
ಸಂಜೀವಿನಿ ಫೌಂಡೇಶನ್ ಸಂಚಾಲಕಿ ಶ್ರೀಮತಿ. ಸವಿತಾ ಅವರು ಈ ಸಂದರ್ಭದಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮದನ್ ಬಾಮಣೆ ಅವರು ಮಾತನಾಡಿ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು. ಬೆಂಗಳೂರಿನ ಶ್ರೀಮತಿ.ಪಾರ್ವತಿ ಚೌದರಿ, ಹಿರಿಯ ಪತ್ರಕರ್ತರಾದ ವಿಲಾಸ್ ಜೋಶಿ, ಮುರುಗೇಶ್ ಶಿವಪೂಜಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article
error: Content is protected !!