ಗಡಿ ಕನ್ನಡಿಗ
ಖಾನಾಪುರ: ಕಳೆದ ಎರಡು ದಿನಗಳ ಹಿಂದೆ ಅನಾರೋಗ್ಯದಿಂದ ನಿಧನರಾದ ಖಾನಾಪುರ ಉಪ ತಹಶಿಲ್ದಾರ ಕಲ್ಲಪ್ಪ ಕೋಲಕಾರ ಅವರಿಗೆ ಕರ್ನಾಟಕ ಪತ್ರಕರ್ತರ ಸಂಘ (ರಿ) ಖಾನಾಪುರ ತಾಲೂಕು ಘಟಕದಿಂದ ಮೇಣದ ಬತ್ತಿ ಹಚ್ಚಿ ಸಂತಾಪ ಸೂಚಿಸಲಾಯಿತು.
ತಾಲೂಕಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಅನಾರೋಗ್ಯದಿಂದ ಮಂಗಳವಾರ ನಿಧನರಾಗಿದ್ದರು ಅವರಿಗೆ ತಹಶಿಲ್ದಾರ ಕಚೇರಿ ಮುಂದೆ ಮೇಣದ ಬತ್ತಿ ಹಚ್ಚುವ ಮೂಲಕ ಸಂತಾಪ ಸೂಚಿಸಲಾಯಿತು ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಪ್ರಸನ್ನ ಕುಂಬಾರ,ಪರಶುರಾಮ ತಳವಾರ,ಜಾವೇದ ಮೊಕಾಶಿ ತಹಶಿಲ್ದಾರ ಕಚೇರಿ ಸಿಬ್ಬಂದಿಗಳಾದ ಮಂಜುನಾಥ,ಭುಮಿ ವಿಭಾಗದ ಪಡಕೆ,ಪ್ರಕಾಶ ರೇಣಕೆ ಮತ್ತಿರರು ಉಪಸ್ಥಿತರಿದ್ದರು.